ದಾವಣಗೆರೆ: ಚುಡಾಯಿಸುತ್ತಿದ್ದ ಕಾಮುಕನಿಗೆ ಮಹಿಳೆಯೇ ಸಖತ್ ಗೂಸಾ ಕೊಟ್ಟಿರುವ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಬುಧವಾರ ರಾತ್ರಿ ಜಿಲ್ಲಾಸ್ಪತ್ರೆಗೆ ರೋಗಿಯ ಜೊತೆ ಮಹಿಳೆಯೊಬ್ಬರು ಬಂದಿದ್ದಾರೆ. ರೋಗಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಇವರು ಆಸ್ಪತ್ರೆಯ ಆವರಣದಲ್ಲಿ ಕುಳಿತಿದ್ದರು. ಈ ವೇಳೆ ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೇ ಬರ್ತಿಯಾ, ನಂಬರ್ ಕೊಡು ಎಂದು ಪೀಡಿಸಿದ್ದಾನೆ.
ಮಹಿಳೆ ಆತನ ಅಸಭ್ಯ ವರ್ತನೆಯನ್ನು ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಗೆ ಹೇಳಿದ್ದಾರೆ. ನಂತರ ಸೆಕ್ಯೂರಿಟಿ ಗಾರ್ಡ್ ಆತನನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಆದರೆ ಆತ ತಪ್ಪಿಸಿಕೊಂಡು ಹೋಗಿದ್ದಾನೆ. ಬಳಿಕ ಕೆಲ ನಿಮಿಷಗಳ ನಂತರ ಕಾಮುಕ ಮತ್ತೆ ಆಸ್ಪತ್ರೆಗೆ ಬಂದು ತನ್ನ ಚಾಳಿಯನ್ನು ಶುರುಮಾಡಿದ್ದಾನೆ.
ಇದರಿಂದ ರೋಸಿಹೋದ ಮಹಿಳೆ ಆತನನ್ನು ಹಿಡಿದು ಸಖತ್ ಗೂಸಾ ಕೊಟ್ಟಿದ್ದಾರೆ. ನಂತರ ಇತರೆ ಜನರು ಮತ್ತು ಸೆಕ್ಯೂರಿಟಿ ಗಾರ್ಡ್ ಬಂದು ಅವರು ಹೊಡೆದಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಆಸ್ಪತ್ರೆಗೆ ಪೊಲೀಸರು ಬಂದು ಆರೋಪಿ ಕಾಮುಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.