ಚಿತ್ರದುರ್ಗ: ವಿಕೃತಕಾಮಿ ಉಮೇಶ್ ರೆಡ್ಡಿ ತವರೂರು ಚಿತ್ರದುರ್ಗ ಜಿಲ್ಲೆಯಲ್ಲಿ ಮತ್ತೋರ್ವ ಜೂನಿಯರ್ ಉಮೇಶ್ ರೆಡ್ಡಿ ಪೊಲೀಸರ ಅತಿಥಿಯಾಗಿದ್ದಾನೆ.
ಚಿಕ್ಕಮಗಳೂರು ಮೂಲಕದ ಕಲ್ಲೇಶ(27) ಬಂಧಿತ ಆರೋಪಿ. ಈತ ಹೊಸದುರ್ಗ ನಗರದಲ್ಲಿರುವ ಬಾಲಕಿಯರ ಬಿಸಿಎಂ ಹಾಸ್ಟೆಲ್ ನಲ್ಲಿ ಬೆತ್ತಲಾಗಿ ಹುಡುಗಿಯರ ಒಳ ಉಡುಪುಗಳನ್ನು ಧರಿಸುವುದು ಮತ್ತು ಅವುಗಳನ್ನು ಆಶ್ಲೀಲವಾಗಿ ಉಪಯೋಗ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ವಿಚಾರವಾಗಿ ಹಾಸ್ಟೆಲ್ ಮೇಲ್ವಿಚಾರಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡು ಪ್ರಕರಣದ ಬೆನ್ನತ್ತಿದ ಹೊಸದುರ್ಗ ಪೊಲೀಸರು ಕಲ್ಲೇಶನನ್ನು ಬಂಧಿಸಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ?
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಪತ್ತೆ ಮಾಡಲು ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಎಂ ಜೋಷಿ ಅವರು ಒಂದು ತಂಡವನ್ನು ರಚಿಸಿದ್ದರು. ಆ ತಂಡವು ಆರೋಪಿಯ ಪತ್ತೆಗಾಗಿ ಶೋಧ ನಡೆಸುತ್ತಿರುವ ಸಂದರ್ಭದಲ್ಲಿ ದಿನಾಂಕ ಮೇ 2ರಂದು ಅನುಮಾನಾಸ್ಪದನಾಗಿ ಒಬ್ಬ ವ್ಯಕ್ತಿಯು ಬಿಸಿಎಂ ಹಾಸ್ಟೆಲ್ ಬಳಿ ಕಾಣಿಸಿಕೊಂಡಿದ್ದ.
ಆಗ ಅವನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ನಾನು ಸುಮಾರು ಒಂದೂವರೆ ವರ್ಷದಿಂದ ಹೊಸದುರ್ಗ ನಗರದಲ್ಲಿದ್ದೇನೆ. ಹೊಸದುರ್ಗ ನಗರದ ವಿವಿಧ ಬಡಾವಣೆಗಳಲ್ಲಿ ಸುತ್ತಾಡಿ ಮತ್ತು ಹುಡುಗಿಯರ ಹಾಸ್ಟೆಲ್ ಬಳಿ ಹೋಗಿ ಹೆಂಗಸರು ಮತ್ತು ಹುಡುಗಿಯರು ಧರಿಸುವ ಒಳ ಉಡುಪುಗಳನ್ನು ಕದ್ದು ಅವುಗಳನ್ನು ಧರಿಸಿಕೊಳ್ಳುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ.
ಈತನನ್ನು ಹೆಚ್ಚಿನ ವಿಚಾರಣೆ ನೆಡೆಸಿದಾಗ ಕಲ್ಲೇಶ ಹೊಸದುರ್ಗ ಶೀರಾಂಪುರ ಠಾಣೆಯ ವ್ಯಾಪ್ತಿಯಲ್ಲಿ ಸುಮಾರು 7 ಪ್ರಕರಣಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಕೋರ್ಟ್ ಈಗ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.