-ಗಂಡನಿಗೆ ಫೋನ್ ಮಾಡಿ ಕಣ್ಣೀರಿಟ್ಟ ಪತ್ನಿ
ಬೆಂಗಳೂರು: ತನ್ನ ಹೆಂಡತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಸ್ನೇಹಿತೆಯೇ ಆಕೆಯನ್ನು ಸೌದಿ ಅರೇಬಿಯಾಗೆ ಮಾರಾಟ ಮಾಡಿದ್ದಾರೆಂದು ವ್ಯಕ್ತಿಯೊಬ್ಬರು ಆರೊಪಿಸಿದ್ದಾರೆ.
ಮೂಲತಃ ಬೆಂಗಳೂರಿನ ಹೊರವಲಯ ತೋಟಗೆರೆಯ ನಿವಾಸಿ 28 ವರ್ಷದ ರಂಜಿತಾ ಕೆಲಸಕ್ಕಾಗಿ 1 ವರ್ಷದಿಂದ ಹುಡುಕಾಟದಲ್ಲಿದ್ದರು. ಅಂತೆಯೇ ರಂಜಿತಾಗೆ ತನ್ನ ಸ್ನೇಹಿತೆ, ಬೆಂಗಳೂರಿನ ಸಂಜಯ್ ನಗರದ ನಿವಾಸಿ ಕವಿತಾ ಭೇಟಿಯಾಗುತ್ತೆ. ಕೆಲಸದ ವಿಚಾರವನ್ನು ರಂಜಿತಾ ಕವಿತಾಗೆ ಹೇಳ್ತಾರೆ. ಆಗ ಕವಿತಾ ಕೆಲಸಕೊಡಿಸುತ್ತೇನೆ ತಿಂಗಳಿಗೆ 30 ಸಾವಿರ ಸಂಬಳ ಎಂದು ನಂಬಿಸಿದ್ದಾರೆ. ಇತ್ತ ಸೌದಿ ಅರೇಬಿಯಾಗೆ ಹೋಗಬೇಕು ಅಂತ ರಂಜಿತಾ ಗಂಡ ಭಾಸ್ಕರ್‍ನನ್ನು ಒಪ್ಪಿಸುತ್ತಾರೆ.
Advertisement
Advertisement
ಕಳೆದ ವರ್ಷ ಆಗಸ್ಟ್‍ನಲ್ಲಿ ಕೆಲಸಕ್ಕೆಂದು ಹೋದ ರಂಜಿತಾ ಎಂಟು ತಿಂಗಳಾದರೂ ಮನೆಗೆ ಬಂದಿಲ್ಲ. ಈ ಬಗ್ಗೆ ಕವಿತಾರನ್ನು ವಿಚಾರಿಸಿದರೆ, ನನಗೆ ಗೊತ್ತಿಲ್ಲ. ನಿನ್ನ ಹೆಂಡತಿ ಬೇಕು ಅಂದ್ರೆ ಎರಡು ಲಕ್ಷ ರೂಪಾಯಿ ಕೊಡು ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ಭಾಸ್ಕರ್ ಆರೋಪಿಸಿದ್ದು, ಮಾರನಾಯಕನಹಳ್ಳಿ ಮತ್ತು ಸಂಜಯ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದ್ರೆ ಪೊಲೀಸ್ರು ದೂರು ದಾಖಲು ಮಾಡಿಕೊಳ್ಳದೇ ಕವಿತಾ ಜೊತೆ ಕೂತು ಮಾತನಾಡಿ. ಇದರ ಬಗ್ಗೆ ದೂರು ದಾಖಲಾದ್ರೆ ಅಂತರಾಷ್ಟ್ರೀಯ ಮಟ್ಟದವರೆಗೂ ಹೋಗುತ್ತದೆ ಎಂದು ಬೇಜವಾಬ್ದಾರಿತನದ ಮಾತನ್ನಾಡಿದ್ದಾರಂತೆ.
Advertisement
Advertisement
ಎಂಟು ತಿಂಗಳಾದ್ರು ರಂಜಿತಾ ಬಾರದೇ ಇರುವುದರಿಂದ ರಂಜಿತಾ ಅವರ ಮಗ 12 ವರ್ಷದ ಚೇತನ್ ಊಟ ಮಾಡದೇ ನೀರು ಕುಡಿಯದೇ ಅಮ್ಮನನನ್ನು ನೋಡಬೇಕು. ನನ್ನ ಅಮ್ಮನನ್ನು ನಮಗೆ ಹುಡುಕಿ ಕೊಡಿ ಎಂದು ಪರಿತಪಿಸುತ್ತಿದ್ದಾನೆ. ರಂಜಿತಾರನ್ನು ಚೆನ್ನೈಗೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡಿ ಸೌದಿ ಅರೇಬಿಯಾಗೆ ಮಾರಾಟ ಮಾಡಿದ್ದಾರೆ ಅಂತಾ ರಂಜಿತಾ ಗಂಡ ಭಾಸ್ಕರ್ ಆರೋಪಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿರುವ ರಂಜಿತಾ, ಮನೆ ಯಜಮಾನನ ಕಣ್ಣು ತಪ್ಪಿಸಿ ತನ್ನ ಗಂಡನಿಗೆ ದೂರವಾಣಿ ಮೂಲಕ ಮಾತನಾಡಿ ನನ್ನನ್ನು ನಮ್ಮ ದೇಶಕ್ಕೆ ಕರೆದುಕೊಂಡು ಹೋಗಿ ಅಂದಿದ್ದಾರೆ. ಈ ವೇಳೆ ಪಬ್ಲಿಕ್ ಟಿವಿ ಪ್ರತಿನಿಧಿ ಕೂಡ ಸೌದಿ ಅರೇಬಿಯಾದಲ್ಲಿರುವ ರಂಜಿತಾ ಅವರ ಜೊತೆ ಮಾತನಾಡಿದಾಗ, ಸರಿಯಾಗಿ ಊಟ ಕೊಡಲ್ಲ. ನನ್ನ ಕೈಯಲ್ಲಿ ಸಂಬಳ ಇಲ್ಲ. ನನ್ನ ಕೈಲಿ ಇಲ್ಲಿ ದುಡಿಯಕ್ಕಾಗಲ್ಲ ಅಂತಾ ಹೇಳಿದ್ರೆ ಇಲ್ಲಿನ ಏಜೆನ್ಸಿಗಳು ಹೊಡಿತಾರೆ. ಮುಖದ ಮೇಲೆ ಎಂಜಲು ಉಗಿತಾರೆ. ಎಲ್ಲಾ ಬಾಗಿಲುಗಳಿಗೆ ಬೀಗ ಹಾಕ್ತಾರೆ. ಹೊರಗಡೆ ಬರೋಕೆ ಬಿಡ್ತಾ ಇಲ್ಲ ಅಂತಾ ಅಲ್ಲಿನ ಪರಿಸ್ಥಿತಿ ಬಗ್ಗೆ ರಂಜಿತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.