ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಷಿಯನ್ ಬೋಟ್ (Persian Boat) ಅಲೆಗಳ ಹೊಡೆತಕ್ಕೆ ಭಟ್ಕಳ (Bhatkal) ತಾಲೂಕಿನ ನೇತ್ರಾಣಿ ಬಳಿ ಮುಳುಗಿದೆ. ಅದರಲ್ಲಿದ್ದ 25 ಜನ ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಭಟ್ಕಳದ ಅಣ್ಣಪ್ಪ ಮೊಗೇರ್ ಎಂಬವರಿಗೆ ಸೇರಿದ ಮಹಾ ಮುರುಡೇಶ್ವರ ಹೆಸರಿನ ಪರ್ಷಿಯನ್ ಬೋಟ್ ಇದಾಗಿದೆ. ಮೀನುಗಾರಿಕೆಗೆ ಅರಬ್ಬಿ ಸಮುದ್ರದಲ್ಲಿ ಹೋಗುತ್ತಿರುವಾಗ ಅಲೆಗಳ ಅಬ್ಬರಕ್ಕೆ ಬೋಟ್ ಮುಳುಗಡೆಯಾಗಿದೆ. ತಕ್ಷಣ ಕರಾವಳಿ ಕಾವಲುಪಡೆ ಕಂಟ್ರೋಲ್ ರೂಮ್‌ಗೆ ಕರೆಮಾಡಿದ್ದು, ಸ್ಥಳೀಯ ವೆಲ್ಲನ್ಕಿಣಿ ಮತ್ತು ಮಚ್ಚೆದುರ್ಗ ಎಂಬ ಎರಡು ಬೋಟ್ ಗಳು ಸಹಾಯಕ್ಕೆ ಆಗಮಿಸಿ 25 ಜನ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ನೋಡನೋಡುತ್ತಿದ್ದಂತೆ ಮುಳುಗಿದ ಬೋಟ್ – 6 ಮೀನುಗಾರರ ರಕ್ಷಣೆ
ಬೋಟ್ ಮುಳುಗಿದ್ದರಿಂದ ಅಂದಾಜು 80 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಈ ಸಂಬಂಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ನೀಡಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ – 622 ಮಂದಿ ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ