CrimeLatestMain PostNational

ಅಪ್ರಾಪ್ತೆಯನ್ನು ಹತ್ಯೆಗೈದು, ವೃದ್ಧೆಯ ತಲೆಯನ್ನು ಕತ್ತರಿಸಿ ನೇತು ಹಾಕಿದ ದುಷ್ಕರ್ಮಿಗಳು

ಭೋಪಾಲ್: ವೃದ್ಧ ದಂಪತಿ ಮತ್ತು ಅವರ ಓರ್ವ ಅಪ್ರಾಪ್ತ ಮೊಮ್ಮಗಳನ್ನು ದುಷ್ಕರ್ಮಿಗಳು ಕೊಲೆ ಮಾಡಿ ವೃದ್ಧೆಯ ತಲೆಯನ್ನು ಕತ್ತರಿಸಿ ಮರಕ್ಕೆ ನೇತು ಹಾಕಿರುವ ಘಟನೆಯೊಂದು ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯಲ್ಲಿ ನಡೆದಿದೆ.

ಮಂಗಳವಾರ ಬೆಳಗ್ಗೆ ಕೆಲವು ಸ್ಥಳೀಯರು, ವೃದ್ಧ ದಂಪತಿ ಮತ್ತು ಅವರ ಮೊಮ್ಮಗಳು ಶವವಾಗಿ ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿಮೀ ದೂರದಲ್ಲಿರುವ ಮೊಹಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಪಟದೇಯ್ ಗ್ರಾಮದಲ್ಲಿ ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳು ದಂಪತಿ ಮತ್ತು ಅವರ ಮೊಮ್ಮಗಳು ಮನೆಯ ಟೆರೇಸ್‍ನಲ್ಲಿ ಮಲಗಿದ್ದಾಗ ಅವರ ಕತ್ತು ಸೀಳಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಸಿಂಗ್ ಕವಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಕಾರ್ತಿ ಚಿದಂಬರಂಗೆ ಬೆಳ್ಳಂಬೆಳಗ್ಗೆ ಶಾಕ್ – ಮನೆ ಸೇರಿ 7 ಕಡೆ ಸಿಬಿಐ ದಾಳಿ

ಹಂತಕರು ವೃದ್ಧೆಯ ತಲೆಯನ್ನು ಕತ್ತರಿಸಿ ಅವರ ಮನೆಯಿಂದ ಒಂದು ಕಿಮೀ ದೂರದಲ್ಲಿರುವ ಜಮೀನಿನಲ್ಲಿ ಮರಕ್ಕೆ ನೇತು ಹಾಕಿದ್ದಾರೆ ಎಂದು ಮೊಹಗಾಂವ್ ಪೊಲೀಸ್ ಠಾಣೆಯ ಉಸ್ತುವಾರಿ ಎಸ್‍ಎಲ್ ಮಾರ್ಕಮ್ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೃತರ ಇತರ ಕುಟುಂಬ ಸದಸ್ಯರು, ಘಟನೆ ಕುರಿತು ಹಂತಕರ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಫ್ಯಾಟ್ ಸರ್ಜರಿಗೆ 1 ಲಕ್ಷ 60 ಸಾವಿರ ಕೊಟ್ಟಿದ್ದರಂತೆ ಚೇತನಾ ರಾಜ್ : ಕುಟುಂಬ ಆರೋಪ

Leave a Reply

Your email address will not be published.

Back to top button