ಈ ಫ್ಯಾಷನ್ ಯುಗದಲ್ಲಿ ಪರ್ಫ್ಯೂಮ್ (ಸುಗಂಧ ದ್ರವ್ಯ) ಜನ ಜೀವನದ ಭಾಗವಾಗಿ ಹೋಗಿದೆ. ದಿಲ್ಲಿಯಿಂದ ಹಳ್ಳಿವರೆಗೂ ಪರ್ಫ್ಯೂಮ್ (Perfume Ban) ಹಾಕಿಕೊಳ್ಳುವುದು ಸಾಮಾನ್ಯ ಎನ್ನುವಂತಾಗಿದೆ. ಪರ್ಫ್ಯೂಮ್ ಎಂದರೆ ಎಲ್ಲರಿಗೂ ಗೊತ್ತು. ಆದರೆ ಅದನ್ನು ತಯಾರಿಸಲು ಯಾವ್ಯಾವ ಪದಾರ್ಥಗಳನ್ನು ಉಪಯೋಗಿಸುತ್ತಾರೆ ಎಂಬುದು ಎಷ್ಟೋ ಮಂದಿಗೆ ತಿಳಿದಿರುವುದೇ ಇಲ್ಲ. ಪರ್ಫ್ಯೂಮ್ ತಯಾರಿಸಲು ಬಳಸುವ ಪದಾರ್ಥಗಳ ಬಗ್ಗೆ ಹೇಳಿದರೆ ಕೆಲವರಿಗೆ ಶಾಕ್ ಕೂಡ ಆಗಬಹುದು. ಶಾಕ್ ಆಗುವುದಕ್ಕೆ ಪೂರಕ ಎನ್ನುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಪ್ರಸ್ತಾಪವೊಂದನ್ನು ಪ್ರಕಟಿಸಿದೆ.
ಎಷ್ಟೋ ಜನಕ್ಕೆ ಆಲ್ಕೋಹಾಲ್ ಎಂದರೆ ಸಾಕು ದೂರ ಓಡುತ್ತಾರೆ. ಅಂತಹ ಆಲ್ಕೋಹಾಲ್‌ನ್ನು ಪರ್ಫ್ಯೂಮ್ ತಯಾರಿಸಲು ಬಳಸುತ್ತಾರೆ ಎಂದರೆ ಶಾಕ್ ಆಗಿಬಿಡುತ್ತಾರೆ. ಇದು ಅಚ್ಚರಿ ಎನಿಸಿದರೂ ನಿಜ. ಅಂತಹ ಆಲ್ಕೋಹಾಲ್ ಅಂಶವಿರುವ ಸುಗಂಧ ದ್ರವ್ಯವನ್ನು ಪೈಲಟ್‌ಗಳು, ವಿಮಾನಗಳ ಸಿಬ್ಬಂದಿ ಬಳಸುವಂತಿಲ್ಲ ಎಂದು ನಿಯಮ ರೂಪಿಸಲು ಡಿಜಿಸಿಎ ಮುಂದಾಗಿದೆ. ಈಗಾಗಲೇ ಪೈಲಟ್‌ಗಳು (Pilots), ವಿಮಾನಗಳಿಗೆ ಸಿಬ್ಬಂದಿ ಪರ್ಫ್ಯೂಮ್ ಬ್ಯಾನ್ ಮಾಡಲು ಪ್ರಸ್ತಾಪ ಇಟ್ಟಿದೆ. ಇದನ್ನೂ ಓದಿ: PublicTV Explainer: ಚಂದ್ರ, ಸೂರ್ಯಯಾನ ಆಯ್ತು.. ಈಗ ಶುಕ್ರನ ಮೇಲೆ ಇಸ್ರೋ ಕಣ್ಣು – ಶುಕ್ರಯಾನ ಯಾವಾಗ?
Advertisement
Advertisement
ಪೈಲಟ್‌ಗಳು, ವಿಮಾನ ಸಿಬ್ಬಂದಿಗೆ ಪರ್ಫ್ಯೂಮ್ ಬ್ಯಾನ್?
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಪೈಲಟ್‌ಗಳಿಗೆ ಸುಗಂಧ ದ್ರವ್ಯಗಳ ಬಳಕೆಯನ್ನು ನಿಷೇಧಿಸುವ ಹೊಸ ಕಾನೂನನ್ನು ತರಲು ಯೋಜಿಸಿದೆ. ಕಾನೂನು ವಾಯುಯಾನ ನಿಯಂತ್ರಕರ ಕಟ್ಟುನಿಟ್ಟಾದ ಆಲ್ಕೋಹಾಲ್ ನಿಯಮಗಳಿಗೆ ಇದು ಸಂಬಂಧಿಸಿದ್ದಾಗಿದೆ. ಸುರಕ್ಷತಾ ನಿಯಮಗಳಿಗೆ ಸಂಬಂಧಿಸಿದಂತೆ ವಿಮಾನ ನಿಯಮ, 1937 ರ ನಿಬಂಧನೆಗಳ ಅಡಿಯಲ್ಲಿ ನೀಡಲಾದ ನಾಗರಿಕ ವಿಮಾನಯಾನ ಅಗತ್ಯತೆಗಳನ್ನು (ಸಿಎಆರ್) ತಿದ್ದುಪಡಿ ಮಾಡುವ ಕುರಿತು ಮಧ್ಯಸ್ಥಗಾರರು ಸಲಹೆ ನೀಡುವಂತೆ ವಾಯುಯಾನ ನಿಯಂತ್ರಕರು ಕರೆ ನೀಡಿದ್ದಾರೆ.
Advertisement
ಬ್ಯಾನ್‌ಗೆ ಡಿಜಿಸಿಎ ಯೋಜಿಸಿದ್ದು ಯಾಕೆ?
ಭಾರತದ ವಾಯುಯಾನ ನಿಯಂತ್ರಕ ಇತ್ತೀಚೆಗೆ ಮದ್ಯ ಸೇವನೆಯ ಬಗ್ಗೆ ತನ್ನ ನಿಯಮಗಳನ್ನು ನವೀಕರಿಸಲು ಪ್ರಸ್ತಾಪಿಸಿದೆ. ಡಿಜಿಸಿಎ ಈಗಾಗಲೇ ಮೌತ್‌ವಾಶ್‌ನಂತಹ ಆಲ್ಕೊಹಾಲ್‌ಯುಕ್ತ ಪಾನೀಯಗಳನ್ನು ನಿಷೇಧಿಸಿದೆ. ಅದು ಉಸಿರಾಟದ ವಿಶ್ಲೇಷಣೆಯ ಪರೀಕ್ಷೆ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ನಿಷೇಧ ವಿಧಿಸಲಾಗಿದೆ ಎಂದು ವರದಿಗಳಾಗಿವೆ.
Advertisement
ನಾಗರಿಕ ವಿಮಾನಯಾನ ನಿರ್ದೇಶನಾಲಯವು ಇತ್ತೀಚೆಗೆ ತನ್ನ ವೈದ್ಯಕೀಯ ಪರೀಕ್ಷೆಯ ವಿಧಾನದಲ್ಲಿ ಬದಲಾವಣೆ ಪ್ರಸ್ತಾಪಿಸಿದೆ. ಇದು ಪೈಲಟ್‌ಗಳು ಮತ್ತು ಸಿಬ್ಬಂದಿಗೆ ಆಲ್ಕೋಹಾಲ್ ಸೇವನೆಯನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ಬದಲಾಯಿಸಿದೆ. ಸಿಬ್ಬಂದಿ ಅಥವಾ ಪೈಲಟ್‌ಗಳು ಆಲ್ಕೋಹಾಲ್ ಹೊಂದಿರುವ ಯಾವುದೇ ಔಷಧ, ಸುಗಂಧ ದ್ರವ್ಯ, ಡೆಂಟಲ್ ಉತ್ಪನ್ನಗಳನ್ನು ಬಳಸಬಾರದು ಎಂದು ಡಿಜಿಸಿಎ ಪ್ರಸ್ತಾವನೆಯಲ್ಲಿ ತಿಳಿಸಿದೆ. ಒಂದೊಮ್ಮೆ ಬಳಸಿದಲ್ಲಿ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಅಂತ ಬರಬಹುದು. ಮತ್ತು ಈ ವಸ್ತುಗಳ ಬಳಸುವ ಉದ್ಯೋಗಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಬಹುದು ಎಂದು ಹೇಳಿದೆ. ಇದನ್ನೂ ಓದಿ: PublicTV Explainer: ನೀಲಿ ಆರ್ಥಿಕತೆ ಎಂದರೇನು? – ಭಾರತದಲ್ಲಿ ಹೇಗೆ ಕೆಲಸ ಮಾಡುತ್ತಿದೆ; ಕರ್ನಾಟಕದಲ್ಲಿ ನಿರೀಕ್ಷೆ ಏನು?
ಯಾವುದೇ ಪೈಲಟ್‌ಗಳು, ಗಗನಸಖಿಯರು, ಸಿಬ್ಬಂದಿ ಯಾವುದೇ ಔಷಧ ಸೇವಿಸಬಾರದು, ಮೌತ್‌ವಾಶ್/ಟೂತ್ ಜೆಲ್/ಸುಗಂಧ ದ್ರವ್ಯ ಅಥವಾ ಆಲ್ಕೋಹಾಲ್‌ಯುಕ್ತ ಅಂಶವನ್ನು ಹೊಂದಿರುವ ಯಾವುದೇ ಉತ್ಪನ್ನವನ್ನು ಬಳಸಬಾರದು. ಒಂದು ವೇಳೆ ಬಳಸಿದ್ದಲ್ಲಿ, ಟೆಸ್ಟ್ ವೇಳೆ ನೀವು ಕುಡಿದಿದ್ದೀರಿ ಎಂದು ಸಿಗ್ನಲ್ ತಪ್ಪಾಗಿ ಬರಬಹುದು. ಅಂತಹ ಪೈಲಟ್, ಸಿಬ್ಬಂದಿ ವಿಮಾನದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡುವುದಿಲ್ಲ. ಯಾವುದೇ ಸಿಬ್ಬಂದಿ ಸದಸ್ಯರು ಫ್ಲೈಯಿಂಗ್ ನಿಯೋಜನೆಯನ್ನು ಕೈಗೊಳ್ಳುವ ಮೊದಲು ಕಂಪನಿಯ ವೈದ್ಯರನ್ನು ಸಂಪರ್ಕಿಸಬೇಕು ಎಂದು ಪ್ರಸ್ತಾವಿತ ಶಾಸನವು ಹೇಳಿದೆ.
ಅಸ್ಪಷ್ಟ ಪ್ರಸ್ತಾವನೆ
ಪರ್ಫ್ಯೂಮ್ ನಿಷೇಧಕ್ಕೆ ಸಂಬಂಧಿಸಿದ ಡಿಜಿಸಿಎ ಪ್ರಸ್ತಾವನೆಯು ಅಸ್ಪಷ್ಟವಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಆಲ್ಕೋಹಾಲ್ ಅಂಶವಿರುವ ಸುಗಂಧ ದ್ರವ್ಯವನ್ನು ಪೈಲಟ್ ಅಥವಾ ಸಿಬ್ಬಂದಿ ಬಳಸಿದರೆ, ಆಗಲೂ ಉಸಿರಾಟ ವಿಶ್ಲೇಷಣೆಯ ಪರೀಕ್ಷೆಯಲ್ಲಿ ತಪ್ಪಾಗಿ ಪಾಸಿಟಿವ್ ಅಂತ ಸಿಗ್ನಲ್ ಬರುತ್ತದೆಯೇ ಎಂಬುದಕ್ಕೆ ಸ್ಪಷ್ಟನೆ ಇಲ್ಲ. ಜೊತೆಗೆ ಡಿಜಿಸಿಎ ನಿಯಮಗಳು ಭಾರತಕ್ಕೆ ಬರುವ ವಿದೇಶಿ ವಿಮಾನಗಳ ಪೈಲಟ್‌ಗಳು, ಗಗನಸಖಿಯರು, ಸಿಬ್ಬಂದಿಗೂ ಅನ್ವಯವಾಗುತ್ತದೆಯೇ ಎಂಬುದು ಪ್ರಶ್ನೆಯಾಗಿದೆ. ಇದನ್ನೂ ಓದಿ: PublicTV Explainer: ಲ್ಯಾಬ್‌ನಲ್ಲಿ DNA ಇಟ್ರೆ ಸಾಕು ನಿಮ್ಗೆ ಸಿಗುತ್ತೆ ಚಿಕನ್, ಮಟನ್, ಬೀಫ್, ಫೋರ್ಕ್ ಮಾಂಸ!
ಪೈಲಟ್‌ಗಳಿಗೆ ಭಾರತದಲ್ಲಿರುವ ಕಾನೂನುಗಳೇನು?
ವಿಮಾನಯಾನ ಸಿಬ್ಬಂದಿಗೆ ಭಾರತವು ತುಂಬಾ ಕಟ್ಟುನಿಟ್ಟಾದ ಆಲ್ಕೋಹಾಲ್ ನಿಯಮಗಳನ್ನು ಅಳವಡಿಸಿದೆ. ನಾಗರಿಕ ವಿಮಾನಯಾನ ಅಗತ್ಯತೆಗಳ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ವಿಮಾನ ಸಿಬ್ಬಂದಿ ಸದಸ್ಯರು ಮತ್ತು ಕ್ಯಾಬಿನ್ ಸಿಬ್ಬಂದಿ, ಭಾರತದಿಂದ ಕಾರ್ಯಾಚರಣೆ ಆರಂಭಿಸುವ ವಿಮಾನಗಳು ಮೊದಲ ನಿರ್ಗಮನ ವಿಮಾನ ನಿಲ್ದಾಣದಲ್ಲಿ ಉಸಿರಾಟ ವಿಶ್ಲೇಷಣೆಯ ಪರೀಕ್ಷೆಗೆ ಒಳಪಡುತ್ತಾರೆ.
ಆಲ್ಕೋಹಾಲ್ ಸೇವಿಸಿದ್ರೆ ಪರವಾನಗಿ ಅಮಾನತು
ಆಲ್ಕೋಹಾಲ್ ಸೇವನೆಯ ಸಣ್ಣ ಕುರುಹು ಕೂಡ ಪಾಸಿಟಿವ್ ಫಲಿತಾಂಶವೆಂದು ಪರಿಗಣಿಸಲಾಗುತ್ತದೆ. ಆಗ ತಕ್ಷಣ ಮೂರು ತಿಂಗಳವರೆಗೆ ಪರವಾನಗಿ ಅಮಾನತು ಮಾಡಲಾಗುತ್ತದೆ. ಎಲ್ಲಾ ಆಪರೇಟರ್‌ಗಳು ಉಸಿರಾಟದ ವಿಶ್ಲೇಷಕದ ಪರೀಕ್ಷೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುತ್ತವೆ. ರೆಕಾರ್ಡಿಂಗ್‌ಗಳನ್ನು ಆರು ತಿಂಗಳವರೆಗೆ ಸಂರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ನಿಯಮಗಳು ಹೇಳುತ್ತವೆ. ಯಾವುದೇ ಸಿಬ್ಬಂದಿ ಆಲ್ಕೋಹಾಲ್ ಸೇವಿಸುವುದೇ ಆದರೆ, ಸೇವನೆಯಾದ 12 ಗಂಟೆಗಳ ಬಳಿಕ ಕರ್ತವ್ಯಕ್ಕೆ ಹಾಜರಾಗಬಹುದು ಎಂಬ ನಿಯಮವಿದೆ.
ಕಳೆದ ವರ್ಷ ಎಷ್ಟು ಲೈಸನ್ಸ್ ಅಮಾನತಾಗಿತ್ತು?
2022 ರಲ್ಲಿ 41 ಪೈಲಟ್‌ಗಳು ಮತ್ತು 116 ಕ್ಯಾಬಿನ್ ಸಿಬ್ಬಂದಿ ಮದ್ಯಪಾನ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದರಿಂದ ಅವರ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. 2021 ರಲ್ಲಿ 19 ಪೈಲಟ್‌ಗಳು ಮದ್ಯಪಾನ ಪರೀಕ್ಷೆಯಲ್ಲಿ ಪಾಸಿಟಿವ್‌ಗೆ ಒಳಗಾಗಿದ್ದರು. ಇದನ್ನೂ ಓದಿ: PublicTV Explainer: ರಕ್ಷಾ ‘ಕವಚ’ ಇದ್ದಿದ್ರೆ ಒಡಿಶಾ ರೈಲು ದುರಂತ ತಪ್ಪಿಸಬಹುದಿತ್ತೆ?
ಮೊದಲ ಬಾರಿಗೆ ಆಲ್ಕೋಹಾಲ್ ಪರೀಕ್ಷೆಯಲ್ಲಿ ನಿಯಮ ಉಲ್ಲಂಘನೆಯಾಗಿದ್ದರೆ ಪೈಲಟ್‌ಗಳಿಗೆ ಮೂರು ತಿಂಗಳವರೆಗೆ ಕರ್ತವ್ಯಕ್ಕೆ ಹಾಜರಾಗುವುದನ್ನು ನಿರ್ಬಂಧಿಸಲಾಗುತ್ತದೆ. ಆದರೆ ಎರಡನೇ ಬಾರಿ ಅಪರಾಧ ಮಾಡಿದರೆ ಮೂರು ವರ್ಷಗಳ ವರೆಗೆ ನಿರ್ಬಂಧಿಸಲಾಗುತ್ತದೆ. ಪೈಲಟ್ ಮೂರನೇ ಬಾರಿ ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ ಪರವಾನಗಿಯನ್ನು ಶಾಶ್ವತವಾಗಿ ರದ್ದು ಮಾಡಲಾಗುತ್ತದೆ.
‘ಎಣ್ಣೆ’ ಮತ್ತು ತಂದ ಕುತ್ತು
ವಿಮಾನಯಾನ ಉದ್ಯಮದಲ್ಲಿ ಪೈಲಟ್‌ಗಳ ಕುಡಿತದ ಪ್ರಕರಣಗಳು ಆಗಾಗ ವರದಿಯಾಗುವುದುಂಟು. 2018 ರಲ್ಲಿ ವಿಮಾನ ಟೇಕಾಫ್ ಆಗುವ ಸಂದರ್ಭದಲ್ಲಿ ನಡೆಸಿದ ಉಸಿರಾಟದ ಪರೀಕ್ಷೆಯಲ್ಲಿ ಜಪಾನ್ ಏರ್‌ಲೈನ್ಸ್‌ನ ಪೈಲಟ್ ಕಟ್ಸುತೋಶಿ ಜಿತ್ಸುಕಾವಾ ಅವರ ರಕ್ತದ ಆಲ್ಕೋಹಾಲ್ ಮಟ್ಟವು ಕಾನೂನು ಮಿತಿಗಿಂತ ಒಂಬತ್ತು ಪಟ್ಟು ಹೆಚ್ಚಾಗಿತ್ತು. ಈ ಕಾರಣಕ್ಕೆ ಅವರಿಗೆ 10 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅಲ್ಲದೇ ಅಮೆರಿಕದಲ್ಲಿ ಇದೇ ರೀತಿ ಗೇಬ್ರಿಯಲ್ ಲೈಲ್ ಸ್ಕ್ರೋಡರ್ ಎಂಬ ಪೈಲಟ್‌ರನ್ನು ಮದ್ಯದ ಅಮಲಿನಲ್ಲಿದ್ದಾರೆ ಎಂದು ಶಂಕಿಸಿ ಟೇಕಾಫ್‌ಗೂ ಮುನ್ನ ವಿಮಾನದಿಂದ ಕೆಳಗಿಳಿಸಲಾಗಿತ್ತು.
Web Stories