ಬೆಂಗಳೂರು: ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅತ್ಯಾಚಾರದ ಬಳಿಕ ಸಿಲಿಕಾನ್ ಸಿಟಿಯಲ್ಲಿ ಮಹಿಳಾ ಮಣಿಗಳು ಫುಲ್ ಅಲರ್ಟ್ ಆಗಿದ್ದಾರೆ. ತಮ್ಮ ಆತ್ಮ ರಕ್ಷಣೆಗಾಗಿ ಬ್ಯಾಗ್‍ಗಳಲ್ಲಿ ಪೆಪ್ಪರ್ ಸ್ಪ್ರೇ ಮತ್ತು ಅಪಾಯಕಾರಿ ವೆಪನ್‍ಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದಾರೆ. ಆದರೆ ಮೆಟ್ರೋ ಒಳಗೆ ಈ ಪೆಪ್ಪರ್ ಸ್ಪ್ರೇ, ವೆಪನ್‍ಗಳನ್ನು ತೆಗೆದುಕೊಂಡು ಹೋಗಲು ಬಿಡುತ್ತಿಲ್ಲ ಎಂದು ಮೆಟ್ರೋ ವಿರುದ್ಧ ಮಹಿಳೆಯರು ಗರಂ ಆಗಿದ್ದಾರೆ.
ಪಶುವೈದ್ಯ ದಿಶಾ ಅತ್ಯಾಚಾರ ಘಟನೆಯ ಬಳಿಕ ಸಿಲಿಕಾನ್ ಸಿಟಿ ಮಹಿಳೆಯರು ಫುಲ್ ಅಲರ್ಟ್ ಆಗಿದ್ದಾರೆ. ಸಿಟಿಯಲ್ಲಿ ಮಹಿಳೆಯರು ಎಷ್ಟು ಸೇಫ್ ಎನ್ನುತ್ತಿದ್ದು, ಸ್ವಯಂ ರಕ್ಷಣಾ ತಂತ್ರಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಪೆಪ್ಪರ್ ಸ್ಪ್ರೇ ಹಾಗೂ ಆತ್ಮರಕ್ಷಣೆಗೆ ಬೇಕಾದ ಕೆಲವು ಹರಿತವಾದ ವಸ್ತುಗಳನ್ನು ಬ್ಯಾಗಿನಲ್ಲಿ ಕ್ಯಾರಿ ಮಾಡಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಮೆಟ್ರೋ ಸಿಬ್ಬಂದಿ ಅನುಮತಿಸುತ್ತಿಲ್ಲ. ಮೆಟ್ರೋ ನಿಲ್ದಾಣಗಳಲ್ಲಿ ಸಿಬ್ಬಂದಿ ಮಹಿಳೆಯರಿಗೆ ಪೆಪ್ಪರ್ ಸ್ಪ್ರೇ ತಗೆದುಕೊಂಡು ಹೋಗಲು ಅನುಮತಿ ನೀಡುತ್ತಿಲ್ಲ. ಹೀಗಾಗಿ ಯುವತಿಯರು ಆತ್ಮರಕ್ಷಣಾ ದೃಷ್ಟಿಯಿಂದ ಅವಕಾಶ ಮಾಡಿಕೊಡಿ ಎಂದು ಹೇಳುತ್ತಿದ್ದಾರೆ. ಮಹಿಳೆಯರು ನಮ್ಮ ರಕ್ಷಣೆ ನಾವು ಮಾಡಿಕೊಳ್ಳುವುದು ಅಪರಾಧನಾ ಎಂದು ಮೆಟ್ರೋ ವಿರುದ್ಧ ಗರಂ ಆಗಿದ್ದಾರೆ.
Advertisement
Advertisement
ವೆಪನ್, ಪೆಪ್ಪರ್ ಸ್ಪ್ರೇ ಅನ್ನು ಒಳಗಡೆ ಬಿಡಿ ಎಂದು ಮೆಟ್ರೋ ಸಿಬ್ಬಂದಿಯನ್ನು ಕೇಳಿದರೆ, ಇಲ್ಲಿ ಬೋರ್ಡ್ ಹಾಕಿದ್ದೆವೆ ನೋಡಿಕೊಳ್ಳಿ. ಯಾವ್ಯಾವ ವಸ್ತು ಒಳಗಡೆ ತಗೊಂಡು ಹೋಗಬೇಕು, ಯಾವ್ಯಾವ ವಸ್ತು ಒಳಗಡೆ ತಗೊಂಡು ಹೋಗಬಾರದು ಎಂದು ಕ್ಲಿಯರ್ ಆಗಿ ನೋಡಿ ಎಂದು ದಬಾಯಿಸುತ್ತಾರೆ. ನಮಗೆ ಏನಾದರೂ ಹೆಚ್ಚು ಕಡಿಮೆ ಆದರೆ ನೀವು ಜವಾಬ್ದಾರಿ ಆಗ್ತೀರಾ ಎಂದು ಪ್ರಶ್ನಿಸಿದರೆ, ಉತ್ತರ ಕೊಡದೇ ಬಿಎಂಆರ್ ಸಿಎಲ್ ಏನು ರೂಲ್ಸ್ ಮಾಡಿದೆಯೋ ಅದನ್ನು ಫಾಲೋ ಮಾಡುತ್ತೇವೆ ಎಂದು ಹೇಳುತ್ತಾರೆ. ಈ ಬಗ್ಗೆ ಮಹಿಳೆಯರು ಮೆಟ್ರೋ ಸಿಬ್ಬಂದಿ ವಿರುದ್ಧ ರೊಚ್ಚಿಗೆದ್ದಿದ್ದಾರೆ.
Advertisement
Advertisement
ಮಧ್ಯ ರಾತ್ರಿ 11. 30ರವರೆಗೂ ಕೂಡ ಮೆಟ್ರೋ ಓಡಾಡುತ್ತಿರುತ್ತೆ. ಈ ಸಮಯದಲ್ಲಿ ಮೆಟ್ರೋದಲ್ಲಿ ಮನೆಗೆ ತೆರಳುವ ಮಹಿಳೆಯರು ಇರುತ್ತಾರೆ. ಈ ರೀತಿ ಇರಬೇಕಾದರೆ ಸಿಲಿಕಾನ್ ಸಿಟಿಯಲ್ಲಿ ಅಪಾಯಕಾರಿ ಮೆಟ್ರೋ ಸ್ಟೇಷನ್ ಕೂಡ ಇದಾವೆ. ರಾತ್ರಿ 11. 30ರಲ್ಲಿ ಮೆಟ್ರೋ ಸ್ಟೇಷನ್‍ನಿಂದ ಮನೆಗೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಏನಾದರೂ ಹೆಚ್ಚು ಕಡಿಮೆ ಆಗುವ ಸಂಭವ ಹೆಚ್ಚಿರುತ್ತವೆ. ಈ ರೀತಿ ಅಪಾಯಕಾರಿ ನಮ್ಮ ಬಳಿ ಅನುಕೂಲ. ಮೆಟ್ರೋ ಒಳಗಡೆಯಿಂದ ಬರಬೇಕಾದರೆ ಪೆಪ್ಪರ್ ಸ್ಪ್ರೇ, ಹರಿತವಾದ ಇಟ್ಟಿಕೊಳ್ಳುವುದಕ್ಕೆ ಬಿಡಲ್ಲ ಎಂದರೆ ಅಪಾಯ ಗ್ಯಾರಂಟಿ ಎಂದು ಮಹಿಳೆಯರು ಆತಂಕ ವ್ಯಕ್ತಪಡಿಸಿದ್ದಾರೆ.