ಹಾವೇರಿ: ರಾಜ್ಯದಲ್ಲಿ ಮಕ್ಕಳ ಕಳ್ಳರ ವದಂತಿ ಹೆಚ್ಚಾಗುತ್ತಿದ್ದು, ಅನೇಕ ಅಮಾಯಕರು ಬಲಿಯಾಗುತ್ತಿದ್ದಾರೆ. ಇಂತಹದ್ದೊಂದು ಘಟನೆ ಹಾವೇರಿ ತಾಲೂಕಿನ ಗೌರಾಪುರ ಗ್ರಾಮದಲ್ಲಿ ನಡೆದಿದೆ.
ಗುರುವಾರ ಗೌರಾಪುರ ಗ್ರಾಮಕ್ಕೆ ಉದ್ದಿನ ಬೇಳೆ ಮಾರಾಟ ಮಾಡಲು ಬಂದಿದ್ದ ಯುವಕನನ್ನ ಮಕ್ಕಳ ಕಳ್ಳನೆಂದು ಶಂಕಿಸಿ ಗ್ರಾಮಸ್ಥರು ಥಳಿಸಿದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದನ್ನು ಓದಿ: ರಾತ್ರಿಯಿಡೀ ಖಾರದಪುಡಿ, ದೊಣ್ಣೆ ಹಿಡಿದುಕೊಂಡು ಓಡಾಡಿದ ಮಹಿಳೆಯರು!
Advertisement
ಯುವಕನ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಆದರೆ ಗುರುವಾರ ಹಲ್ಲೆಗೊಳಗಾದ ಯುವಕ ಗ್ರಾಮಕ್ಕೆ ಉದ್ದಿನ ಬೇಳೆ ಮಾರಾಟಕ್ಕೆ ಬಂದಿದ್ದರು. ಮಾರಾಟಗಾರನಿಗೆ ಕನ್ನಡ ಭಾಷೆ ಬಾರದಿರುವುದರಿಂದ ಗ್ರಾಮಸ್ಥರಲ್ಲಿ ಶಂಕಿಸಿ, ಮೊದಲು ಮಕ್ಕಳ ಕಳ್ಳನೆಂದು ತಿಳಿದು ಹಲ್ಲೆ ಮಾಡಿದ್ದಾರೆ. ಬಳಿಕ ಉದ್ದಿನ ಬೇಳೆ ಚೀಲವನ್ನು ತಗೆದು ಪರಿಶೀಲನೆ ನಡೆಸಿದಾಗ ಮಕ್ಕಳ ಬಟ್ಟೆ ಸಿಕ್ಕಿವೆ. ಮಕ್ಕಳ ಬಟ್ಟೆ ಕಳ್ಳ ಎಂದು ಮತ್ತೇ ಹೊಡೆದಿದ್ದಾರೆ. ಇದನ್ನು ಓದಿ: ನಿಲ್ಲದ ಮಕ್ಕಳ ಕಳ್ಳರ ವದಂತಿ – ಐವರು ಭಿಕ್ಷುಕಿಯರನ್ನು ಕೂಡಿ ಹಾಕಿದ್ರು!
Advertisement
ವಿಚಾರಣೆ ಬಳಿಕ ಯುವಕ ಮಕ್ಕಳ ಕಳ್ಳನಲ್ಲ ಎನ್ನುವುದು ತಿಳಿದು ಆತನನ್ನು ಕೈಬಿಟ್ಟು ಕಳಿಸಿದ್ದಾರೆ. ಉದ್ದಿನ ಬೇಳೆ ಚೀಲದಲ್ಲಿ ಮಕ್ಕಳ ಬಟ್ಟೆ ಸಿಕ್ಕಿದ್ದೇ ಶಂಕೆಗೆ ಕಾರಣವಾಗಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.