ಬೆಂಗಳೂರು: ಮನ್‍ಕೀ ಬಾತ್‍ನಿಂದ ಜನ್ರ ಹೊಟ್ಟೆ ತುಂಬಲ್ಲ, ನಾವು ನೀಡೋ ವಾಂಗಿಬಾತ್‍ನಿಂದ ತುಂಬುತ್ತದೆ. ಇಂದಿರಾ ಕ್ಯಾಂಟೀನ್ ಚುನಾವಣೆ ವರ್ಷದಲ್ಲಿ ಬಂದ ಯೋಜನೆ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕ್ಯಾಂಟೀನ್ ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ಇಂದು ಬೆಂಗಳೂರು ನಗರಕ್ಕೆ ಐತಿಹಾಸಿಕ ದಿನ ಹಾಗೂ ಸ್ಮರಣೀಯ ದಿನವಾಗಿದೆ. ಇಂದಿರಾ ಕ್ಯಾಂಟೀನ್ ರಾಜಕೀಯ ಲಾಭಕ್ಕೋಸ್ಕರ ಆರಂಭಿಸಿಲ್ಲ. ಶೇ 28 ರಷ್ಟು ಅಪೌಷ್ಠಿಕತೆ ಆಹಾರ ಸೇವಿಸುವವರಿದ್ದಾರೆ. ಶೇ.03 ರಷ್ಟು ಮಹಿಳೆಯರಿಗೆ 3 ಹೊತ್ತು ಆಹಾರ ಸಿಗುತ್ತಿಲ್ಲ. ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದ್ರೆ ನಮ್ಮ ರಾಜ್ಯದಲ್ಲಿ ಹಸಿವಿನಿಂದ ಬಳಲುತ್ತಿರುವವರು ಹೆಚ್ಚಿದ್ದಾರೆ. ಹೀಗಾಗಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದೇವೆ ಎಂದರು.
Advertisement
ಇಂದೇ 198 ಕ್ಯಾಂಟೀನ್ ಗಳನ್ನು ಸಹ ಪ್ರಾರಂಭಿಸಬೇಕಿತ್ತು. ಆದ್ರೆ ಜಾಗದ ಕೊರತೆಯಿಂದ 101 ಕ್ಯಾಂಟೀನ್ ಪ್ರಾರಂಭಿಸುತ್ತಿದ್ದೇವೆ. ಈ ವರ್ಷದ ಬಜೆಟ್ ನಲ್ಲಿ 198 ಕ್ಯಾಂಟೀನ್ ಪ್ರಾರಭಿಸೋದಾಗಿ ಘೋಷಣೆ ಮಾಡಿದ್ದೆವು. ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಹೆಸರನ್ನು ಇಡೋದಾಗಿ ಬಜೆಟ್ ನಲ್ಲಿ ಹೇಳಿದ್ದೇವು ಎಂದರು.
Advertisement
Advertisement
ನಮ್ಮ ಸರ್ಕಾರ ಬಂದ ಮೇಲೆ ಒಂದು ಕೋಟಿ 8 ಲಕ್ಷ ಜನರಿಗೆ 7 ಕೆ.ಜಿ ಅಕ್ಕಿ ಕೊಡ್ತಾ ಇದ್ದೇವೆ. ಅನ್ನ ಭಾಗ್ಯ, ಇಂದಿರಾ ಕ್ಯಾಂಟೀನ್ ಬಗ್ಗೆ ವಿರೋಧ ಮಾಡಿದವರೆ ಹೆಚ್ಚು ಅಂತ ಅವರು ವಿಷಾದ ವ್ಯಕ್ತಪಡಿಸಿದ್ರು.
Advertisement
ಅನ್ನ ಭಾಗ್ಯ ಯೋಜನೆಯಿಂದ ಗುಳೇ ಹೋಗುವುದು ಕಡಿಮೆಯಾಗಿದೆ. ಬರಗಾಲ ಇದ್ದರೂ ಉಚಿತ ಅಕ್ಕಿ ವಿತರಣೆ ಮಾಡುತ್ತಿದ್ದೇವೆ. ಬರಗಾಲ ಇದ್ದರೂ ಜನ ಹಸಿವಿನಿಂದ ಬಳಲದಂತೆ ನಮ್ಮ ಸರಕಾರ ನೋಡಿಕೊಂಡಿದೆ. ಸರಕಾರದ ಯೋಜನೆಗಳಿಗೆ ವಿರೋಧ ಇದೆ. ಆಟದ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿಲ್ಲ. ಸರಕಾರಿ ಜಾಗದಲ್ಲೇ ಕ್ಯಾಂಟೀನ್ ನಿರ್ಮಾಣ ಮಾಡಿದ್ದೇವೆ ಎಂದು ತಿಳಿಸಿದರು.
ಕೆಲವರಿಗೆ ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿ ಇದೆ. ಹೊಟ್ಟೆ ತುಂಬಿದವರಿಗೆ ಹಸಿವಿನ ಬೆಲೆ ಗೊತ್ತಿಲ್ಲ. ನಾವು ಬಡವರ ಪರ ಇರುವವರು. ಇಂದಿರಾ ಗಾಂಧಿ ಬಡತನದ ವಿರುದ್ಧ ಹೋರಾಡಿದ ಉಕ್ಕಿನ ಮಹಿಳೆ. ಅವರ `ಗರೀಬಿ ಹಟಾವೋ’ ಮಹತ್ವದ ಕಾರ್ಯಕ್ರಮವಾಗಿದೆ. ಬಡವರ ಹಸಿವು ಅರ್ಥ ಮಾಡಿಕೊಳ್ಳದವರೇ ಇಂದಿರಾ ಕ್ಯಾಂಟೀನ್ ವಿರೋಧಿಸ್ತಿದ್ದಾರೆ ಅಂತ ಟಾಂಗ್ ನೀಡಿದ ಅವರು ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳಿಗೂ ಇಂದಿರಾ ಕ್ಯಾಂಟೀನ್ ವಿಸ್ತರಣೆ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವ ಕೆಜೆ ಜಾರ್ಜ್, ರಾಮಲಿಂಗರೆಡ್ಡಿ, ಡಿಕೆ ಶಿವ ಕುಮಾರ್, ಕೃಷ್ಣ ಬೈರೇಗೌಡ, ಯುಟಿ ಖಾದರ್, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್, ಎಂಎಲ್ ಎ ಆರ್ ವಿ ದೇವರಾಜ್, ಮುನ್ನಿರತ್ನ, ಮೇಯರ್ ಪದ್ಮಾವತಿ, ಎಂಎಲ್ ಸಿ ಪಿ ಆರ್ ರಮೇಶ್, ಎಚ್ ಎಂ ರೇವಣ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ರಾಹುಲ್ ಗಾಂಧಿ ಬೆಂಗಳೂರಿಗೆ ಬರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಇಂದು ಬೆಂಗಳೂರಿನಲ್ಲಿ 101 ವಾರ್ಡ್ ಗಳಲ್ಲಿ 101 ಇಂದಿರಾ ಕ್ಯಾಂಟೀನ್ ಗಳ ಲೋಕಾರ್ಪಣೆಯಾಗಿದೆ, ಅಕ್ಟೋಬರ್ 2ರಂದು ಉಳಿದ ವಾರ್ಡ್ ಗಳಲ್ಲಿ ಕ್ಯಾಂಟೀನ್ ಗಳು ಆರಂಭವಾಗಲಿವೆ
— CM of Karnataka (@CMofKarnataka) August 16, 2017
ಶ್ರೀಮತಿ ಇಂದಿರಾ ಗಾಂಧಿಯವರು ಬಡವರ ಏಳಿಗೆಗಾಗಿ ಮಾಡಿದ ಕಾರ್ಯಕ್ರಮಗಳೇ ನಮಗೆ ಪ್ರೇರಣೆ. ಅದಕ್ಕಾಗಿಯೇ ಅವರ ಹೆಸರನ್ನು ಯೋಜನೆಗೆ ಇರಿಸಲಾಗಿದೆ.
— CM of Karnataka (@CMofKarnataka) August 16, 2017
ಹಸಿವು, ಅಪೌಷ್ಟಿಕತೆಯ ವಿರುದ್ಧ ಕರ್ನಾಟಕದಲ್ಲಿ ನಡೆಯುತ್ತಿರುವ ಸಮರಕ್ಕೆ ಈ ದಿನ ಐತಿಹಾಸಿಕ ದಿನ. ಮಹತ್ವಾಕಾಂಕ್ಷಿ 'ಇಂದಿರಾ ಕ್ಯಾಂಟೀನ್'ಗಳ ಲೋಕಾರ್ಪಣೆ ಇಂದು ನಡೆಯಲಿದೆ pic.twitter.com/nM09DYNioo
— CM of Karnataka (@CMofKarnataka) August 16, 2017
#IndiraCanteen App launched, helping citizens locate canteen, check menu rates & participate in ‘Selfie with Slogan'. #FreedomFromHunger pic.twitter.com/DvDd3AO2u5
— KJ George (@thekjgeorge) August 15, 2017
Lunch at #IndiraCanteen pic.twitter.com/6JgZzZWjMa
— Rahul Gandhi (@RahulGandhi) August 16, 2017
Bengaluru is just the beginning. Soon everyone in Karnataka will feel- In this state, I cannot go hungry#IndiraCanteen pic.twitter.com/Hs1emBH30k
— Rahul Gandhi (@RahulGandhi) August 16, 2017
Indira Canteen launched by @OfficeOfRG, @CMofKarnataka, @thekjgeorge #IndiraCanteen will ensure a Hunger-free Karnataka pic.twitter.com/Jgj56KAHXG
— Karnataka Congress (@INCKarnataka) August 16, 2017
#IndiraCanteen will be inaugurated by @OfficeOfRG hunger free Karnataka, #DeliveredAsPromised
#198 Wards #198 Canteen pic.twitter.com/cGTYfwd9XR
— Professional Cell (@KpccPrCell) August 16, 2017
"I ate at #IndiraCanteen & it's better than any restaurant. GoK will ensure no one in K'taka will be hungry in coming months": @OfficeOfRG pic.twitter.com/mz7FuUf2kb
— Karnataka Congress (@INCKarnataka) August 16, 2017