ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅವರು ಅಭಿಮಾನಿಗಳಿಗೆ ತಮ್ಮ ಸಮಯ ಮೀಸಲಿಡುತ್ತಾರೆ. ಅಭಿಮಾನಿಗಳೇ ನಮ್ಮನೆ ದೇವರು ಎಂದು ಡಾ.ರಾಜ್ (Rajkumar) ಅವರು ಹೇಳಿದ್ದ ಮಾತನ್ನ ಧ್ರುವ ಅಕ್ಷರಶಃ ಪಾಲಿಸುತ್ತಾರೆ. ಇದೀಗ ನೆಚ್ಚಿನ ನಟ ಧ್ರುವ ಸರ್ಜಾರನ್ನ ಮನೆ ಮುಂದೆ ಜಾತ್ರೆಯಂತೆ ಜನ ಸೇರಿದ್ದಾರೆ. ಈ ವೇಳೆ ಅಭಿಮಾನಿಯ ಮಗುವಿಗೆ ಮುದ್ದಾದ ಹೆಸರನ್ನ ಕೂಡ ಇಟ್ಟಿದ್ದಾರೆ.
ಕಲಾವಿದರಿಗೂ ಮತ್ತು ಅಭಿಮಾನಿಗಳಿಗೂ ಅಭಿನಾಭಾವ ಸಂಬಂಧವಿದೆ. ಕಲಾವಿದರನ್ನ ದೇವರು ಎಂದು ಪೂಜಿಸುವ ಅಭಿಮಾನಿಗಳಿದ್ದಾರೆ. ಅಪಘಾತವೊಂದರಲ್ಲಿ ಧ್ರುವ ಸರ್ಜಾ ಅವರ ಅಪ್ಪಟ ಅಭಿಮಾನಿ ಫೃಥ್ವಿರಾಜ್ (Priviraj) ಅವರು ಶನಿವಾರ (ಫೆ.18)ರಂದು ಕೊನೆಯುಸಿರೆಳೆದರು. ಸಾಯುವ ಮುನ್ನ ತನ್ನ ಆರಾಧ್ಯ ದೈವ ಧ್ರುವನನ್ನ ಕಣ್ಣಾರೆ ನೋಡಿ ಪ್ರಾಣ ಬಿಟ್ಟರು. ಅಣ್ಣ ಚಿರು ಸಾವಿನ ನಂತರ ನೆಚ್ಚಿನ ಅಭಿಮಾನಿಯ ಸಾವಿಗೆ ಧ್ರುವ ಭಾವುಕರಾದರು.
ನಟ ಧ್ರುವ ಸರ್ಜಾ (Druva Sarja) ಮನೆಯಲ್ಲಿ (House) ಭಾನುವಾರ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಧ್ರುವ ಮನೆ ಮುಂದೆ ಜನ ಜಾತ್ರೆಯೇ ಸೇರಿದೆ. ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ದೂರದ ಊರಿಂದ ಬಂದು ಭೇಟಿಯಾಗಿದ್ದಾರೆ. ಆಂಜನೇಯ ಮೂರ್ತಿ ಧ್ರುವಾಗೆ ನೀಡಿ ಕ್ಯಾಮೆರಾ ಕಣ್ಣಿಗೆ ಅಭಿಮಾನಿಗಳು ಪೋಸ್ ನೀಡಿದ್ದಾರೆ. ಇದನ್ನೂ ಓದಿ: ಖ್ಯಾತ ತಮಿಳು ಹಾಸ್ಯ ನಟ ಮಯಿಲ್ಸಾಮಿ ಹಠಾತ್ ನಿಧನ
ಚಿರು ನಿಧನ ನೋವಿನಿಂದ ಇದೀಗ ಹೊರಬಂದಿರುದ ಧ್ರುವ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. `ಮಾರ್ಟಿನ್’ ಸಿನಿಮಾ ಮೂಲಕ ತೆರೆಯ ಮೇಲೆ ಅಬ್ಬರಿಸಲಿದ್ದಾರೆ. ಇನ್ನೂ ಪ್ರತಿ ಭಾನುವಾರ ನೂರಾರು ಅಭಿಮಾನಿಗಳಿಗಾಗಿ ಧ್ರುವ ಸಮಯ ಮೀಸಲಿಟ್ಟಿದ್ದಾರೆ. ಧ್ರುವ ಮನೆ ಮುಂದೆ ಜಾತ್ರೆಯಂತೆ ಜನ ಸೇರಿದ್ದು, ನಟನ ಮುಂದೆ ನಿಂತು ಧ್ರುವ ನಟಿಸಿರುವ ಸಿನಿಮಾ ಡೈಲಾಗ್ ಹೇಳಿ, ಧ್ರುವ ಜೊತೆ ಫೋಟೋ ಕ್ಲಿಕ್ಕಿಸಿ ಹೋಗುತ್ತಿದ್ದಾರೆ.
ಇನ್ನೂ ಮನೆಯ ಬಳಿ ಬಂದ ಅಭಿಮಾನಿಯ ಮಗುವಿಗೆ ಧ್ರುವ ಹೆಸರಿಟ್ಟಿದ್ದಾರೆ. ಒಂದು ವರ್ಷದ ಮಗುವಿಗೆ ಮೈನಾ(Mynaa) ಎಂದು ಧ್ರುವ ಹೆಸರಿಟ್ಟಿದ್ದಾರೆ. ಅಭಿಮಾನಿಯ ಆಸೆಯಂತೆ ಮಗುವಿನ ಕಿವಿಗೆ ಹೆಸರು ಧ್ರುವ ಸರ್ಜಾ ಹೆಸರು ಹೇಳಿದ್ದಾರೆ. ಇನ್ನೂ `ಮಾರ್ಟಿನ್’ ಚಿತ್ರದ ಟೀಸರ್ ಇದೇ ಫೆ.23ಕ್ಕೆ ರಿಲೀಸ್ ಆಗಲಿದೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k