ಮುಂಬೈ: ಭಾರತೀಯ ಬ್ಯಾಕಿಂಗ್ ಕ್ಷೇತ್ರದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದ್ದು, ಚೀನಾದ ಬ್ಯಾಂಕ್‍ವೊಂದು ಎಚ್‍ಡಿಎಫ್‍ಸಿ ಬ್ಯಾಂಕ್‍ನ ಶೇ.1.01 ಷೇರು ಖರೀದಿಸಿದೆ.
ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (ಪಿಬಿಒಸಿ)ಯು ಎಚ್‍ಡಿಎಫ್‍ಸಿ ಬ್ಯಾಂಕ್ ಶೇಕಡಾ 1.01 ಪಾಲನ್ನು ಪಡೆದುಕೊಂಡಿದೆ. ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಚೀನಾ ಎಚ್‍ಡಿಎಫ್‍ಸಿಯಲ್ಲಿ ಸುಮಾರು 1.75 ಕೋಟಿ ಷೇರುಗಳನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಕಂಪನಿ ಬಾಂಬೆ ಸ್ಟಾಕ್ ಎಕ್ಸ್‍ಚೇಂಜ್ (ಬಿಎಸ್‍ಇ) ತಿಳಿಸಿದೆ.
Advertisement
Advertisement
ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಕಳೆದ ಒಂದು ತಿಂಗಳಲ್ಲಿ ಎಚ್‍ಡಿಎಫ್‍ಸಿಯ ಷೇರುಗಳ ಬೆಲೆ ಶೇ.25ಕ್ಕಿಂತಲೂ ಕಡಿಮೆಯಾಗಿದೆ. ಇದೇ ವಿಚಾರವಾಗಿ ಮಾತನಾಡಿರುವ ಎಚ್‍ಡಿಎಫ್‍ಸಿಯ ಉಪಾಧ್ಯಕ್ಷ ಮತ್ತು ಸಿಇಒ ಕೆಕಿ ಮಿಸ್ತ್ರಿ, ಪಿಬಿಒಸಿ ಈ ಹಿಂದೆಯೇ ಬ್ಯಾಂಕಿನ ಷೇರು ಖರೀದಿಸಿದೆ. ಮಾರ್ಚ್ 2019ರ ವೇಳೆಗೆ ಕಂಪನಿಯಲ್ಲಿ ಶೇ.0.8ರಷ್ಟು ಒಡೆತನವನ್ನು ಹೊಂದಿದೆ. ಈಗ ಈ ಪಾಲು ಶೇ.1ಕ್ಕೆ ತಲುಪಿದ ಕಾರಣ ಬಹಿರಂಗ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
ಎಚ್‍ಡಿಎಫ್‍ಸಿಯಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು ಶೇ.70.88 ರಷ್ಟು ಪಾಲನ್ನು ಹೊಂದಿದ್ದಾರೆ. ಇದು ಸಿಂಗಾಪುರ್ ಸರ್ಕಾರದ ಶೇ. 3.23ರಷ್ಟು ಷೇರುಗಳನ್ನು ಒಳಗೊಂಡಿದೆ. ಪ್ರಸ್ತುತ ಎಚ್‍ಡಿಎಫ್‍ಸಿಯ ಪ್ರತಿ ಷೇರಿಗೆ 1,701.95 ರೂ. ಬೆಲೆಯಿದೆ.
Advertisement
ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಎಚ್‍ಡಿಎಫ್‍ಸಿ ಅಷ್ಟೇ ಅಲ್ಲದೆ ಬಿಪಿ ಪಿಎಲ್‍ಸಿ ಹಾಗೂ ರಾಯಲ್ ಡಚ್ ಶೆಲ್ ಪಿಎಲ್‍ಸಿ ಸೇರಿದಂತೆ ವಿಶ್ವದಾದ್ಯಂತದ ಕಂಪನಿಗಳಲ್ಲಿ ಪಾಲನ್ನು ಹೊಂದಿದೆ.