ದುಡ್ಡು ಕೊಟ್ಟು ಮೋದಿ ರೋಡ್ ಶೋಗೆ ಜನ ಕರೆಸುತ್ತಾರೆ – ಸಿದ್ದರಾಮಯ್ಯ ಕಿಡಿ

Public TV
3 Min Read
SIDDARAMAIAH 1

ಬೆಳಗಾವಿ: ದುಡ್ಡು ಕೊಟ್ಟು ಮೋದಿ (Narendra Modi) ರೋಡ್ ಶೋಗೆ (Road Show) ಜನ ಕರೆಸುತ್ತಾರೆ. ಪ್ರವಾಹ, ಕೊರೋನ ಇದ್ದಾಗ ಇವರು ಬರಲಿಲ್ಲ. ಈಗ ಚುನಾವಣೆ ಬಂದಿದೆ. ಅದಕ್ಕೆ ಪದೇ ಪದೇ ಬರುತ್ತಾರೆ, ರೋಡ್ ಶೋ ಮಾಡುತ್ತಾರೆ. ಇವರು ಒಂದಿಷ್ಟು ಜನರನ್ನು ಇಟ್ಟುಕೊಂಡಿದ್ದಾರೆ. ಅವರು ಮೋದಿ ಮೋದಿ ಎಂದು ಕೂಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮೋದಿ ವಿರುದ್ಧ ಹರಿಹಾಯ್ದರು.

ಬೆಳಗಾವಿ (Belagavi) ತಾಲೂಕಿನ ಪಂತ ಬಾಳೇಕುಂದ್ರಿಯಲ್ಲಿ ನಡೆದ ಪ್ರಜಾಧ್ವನಿ (Prajadhwani) ಯಾತ್ರೆಯಲ್ಲಿ ಮಾತನಾಡಿದ ಅವರು, ಬೆಳಗಾವಿಗೆ ಮೋದಿ ಬಂದಾಗ ಏನಾದರೂ ಘೋಷಣೆ ಮಾಡಿದ್ದಾರಾ? ಕೃಷ್ಣ ಮೇಲ್ದಂಡೆ, ಮಹದಾಯಿ ಬಗ್ಗೆ ಮಾತನಾಡಲಿಲ್ಲ. ಹೊಸ ಯೋಜನೆಗಳನ್ನು ಘೋಷಿಸಲಿಲ್ಲ. ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್ ಅವಮಾನ ಮಾಡಿದೆ ಎನ್ನುತ್ತಾರೆ. ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ ಸೈಡ್ ಲೈನ್ ಮಾಡಿದ್ಯಾರು ಮೋದಿಜಿ? ಯಡಿಯೂರಪ್ಪನವರನ್ನು ಕಿತ್ತು ಹಾಕಿದ್ದು ಯಾರು ಎಂದು ಪ್ರಶ್ನಿಸಿದರು.

ನNARENDRA MODI SIDDARAMAIAH

ಈ ರಾಜ್ಯ ಉಳಿಯಬೇಕೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಆದರೆ ಈ ಭಂಡರು ಅದಕ್ಕೂ ಬಿಡುವುದಿಲ್ಲ. ಇವರ ಚರ್ಮ ಘೇಂಡಾಮೃಗದ ಚರ್ಮದ ತರಹ ಆಗಿಬಿಟ್ಟಿದೆ. ದಬ್ಬಣ ತೆಗೆದು ಚುಚ್ಚಿದರೂ ಹೋಗುವುದಿಲ್ಲ. ಚುನಾವಣೆ ಬರುತ್ತಿದ್ದಂತೆ ಮೋದಿ ಈಗ ರೋಡ್ ಶೋ ಮಾಡುತ್ತಿದ್ದಾರೆ. ಇದರ ನಡುವೆ ಕೆಲವರು ಮೋದಿ ಎಂದು ಜೈಕಾರ ಹಾಕುತ್ತಾರೆ. ಈಗ ಅನೇಕರು ಮೋದಿ ಎಂದು ಘೋಷಣೆ ಹಾಕುತ್ತಿಲ್ಲ. ಏಕೆಂದರೆ ಇವರು 2 ಕೋಟಿ ಜನರಿಗೆ ಉದ್ಯೋಗ ನೀಡಲಿಲ್ಲ. ಉದ್ಯೋಗ ಕೊಡುವುದಾಗಿ ಹೇಳಿ ಈಗ ಪಕೋಡ ಮಾರುವುದಕ್ಕೆ ಹೇಳುತ್ತಿದ್ದಾರೆ ಎಂದು ಕಿಡಿ ಕಾರಿದರು.

ಬಸವಾದಿ ಶರಣರು ನುಡಿದಂತೆ ನಡೆದವರು. ಅವರೇ ನನ್ನ ಪ್ರೇರಣೆ. ನನ್ನ ಅವಧಿಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇನೆ. ಬಿಜೆಪಿಯವರು 600 ಭರವಸೆಗಳ ಪೈಕಿ ಕೇವಲ 50 ಭರವಸೆಗಳನ್ನು ಮಾತ್ರ ಈಡೇರಿಸಿದ್ದಾರೆ. ಬಿಜೆಪಿಯವರು ಎಂದೂ ಜನರ ಬಳಿ ಬರುವುದಿಲ್ಲ ಬಿಡಿ. ಬೇಕಿದ್ದರೆ ಹಿಂದಿನ ಚುನಾವಣೆಯಲ್ಲಿ ಸೋತ ಸಂಜಯ್ ಪಾಟೀಲ್ ಅವರನ್ನು ಕೇಳಿ. ಅವರು ಯಾವತ್ತಾದರೂ ನಿಮ್ಮ ಬಳಿ ಬಂದಿದ್ದಾರಾ ಎಂದು ಪ್ರಶ್ನೆ ಮಾಡಿದರು.

ರಾಜಕೀಯ ಎಂದರೆ ಜನರ ಸೇವೆ ಮಾಡುವುದು. ಅದನ್ನು ಲಕ್ಷ್ಮಿ ಹೆಬ್ಬಾಳ್ಕರ್ ಪಾಲಿಸುತ್ತಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದುಕೊಂಡೇ ಹೆಬ್ಬಾಳ್ಕರ್ ಇಷ್ಟೊಂದು ಕೆಲಸಗಳನ್ನು ಮಾಡಿದ್ದಾರೆ. 2012ರಲ್ಲಿ ಶಾಸಕಿ ಆಗಿದ್ದರೆ ಇನ್ನೂ ಅವರು ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದರು. 2023ರಲ್ಲೂ ಹೆಬ್ಬಾಳ್ಕರ್ ಗೆದ್ದು ಸಂಜಯ್ ಅವರ ಠೇವಣಿ ಜಪ್ತಿಯಾಗಬೇಕು. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಈ ಸಲ ಚುನಾವಣೆಯಲ್ಲಿ ಹೆಬ್ಬಾಳ್ಕಾರ್ ಗೆಲ್ಲುವುದು ಅಷ್ಟೇ ಸತ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಜೆಡಿಎಸ್‌ಗೆ ಮತ ಹಾಕಿದ್ರೆ ಬಿಜೆಪಿಗೆ ಮತ ಹಾಕಿದಂತೆ: ಜಮೀರ್ ಅಹ್ಮದ್

ಬೆಲೆ ಏರಿಕೆಯಿಂದಾಗಿ ದೇಶದ ಹೆಣ್ಣುಮಕ್ಕಳು ಹೈರಾಣಾಗಿದ್ದಾರೆ. ಮಾರ್ಚ್ 1ರಂದು ಸಿಲಿಂಡರ್ ದರ 50 ರೂ. ಹೆಚ್ಚಾಗಿದೆ. ಒಂದು ವರ್ಷಕ್ಕೆ ನಾಲ್ಕೂವರೆ ಲಕ್ಷ ಕೋಟಿ ರೂ. ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ಆದರೆ ಕೇಂದ್ರ ಕೇವಲ ನಮಗೆ 50 ಸಾವಿರ ಕೋಟಿ ರೂ. ನೀಡುತ್ತದೆ. ಕೇಂದ್ರ ಸರ್ಕಾರ ನಮ್ಮನ್ನು ಸುಲಿಗೆ ಮಾಡುತ್ತಿದೆ. ಮೋದಿ ಆಡಳಿತಕ್ಕೆ ಬಂದಮೇಲೆ ಅನುದಾನಗಳು ಕಡಿತಗೊಂಡಿವೆ ಎಂದು ವಾಗ್ದಾಳಿ ನಡೆಸಿದರು.

SIDDARAMAIAH 6

ಕರ್ನಾಟಕ ಸರ್ಕಾರ 77,750 ಕೋಟಿ ರೂ. ಸಾಲ ಪಡೆದಿದೆ. ಈ ಹಿಂದೆ ಎಂದೂ ಇಷ್ಟು ಸಾಲ ಮಾಡಿರಲಿಲ್ಲ. ನನ್ನ ಕಾಲದಲ್ಲಿ 2,42,000 ಕೋಟಿ ರೂ. ಸಾಲ ಇತ್ತು. ಈಗ ರಾಜ್ಯದ ಸಾಲ 5,54,000 ಕೋಟಿ ರೂ. ಪ್ರತಿಯೊಬ್ಬನ ತಲೆ ಮೇಲೆ 75 ಸಾವಿರ ರೂ. ಸಾಲ ಇದೆ. ಇವತ್ತು ಕರ್ನಾಟಕ ದಿವಾಳಿ ಮಾಡಿದ್ದಾರೆ. ಇವರು ರೈತರ ಸುಲಿಗೆ, ಬಡವರ ಸುಲಿಗೆ, ಮಹಿಳೆಯರು, ಯುವಕರು, ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಎಸ್‍ಪಿ ಶಾಸಕನ 7 ಕೋಟಿ ರೂ ಮೌಲ್ಯದ ಅಕ್ರಮ ಆಸ್ತಿ ವಶ

ರಾಣಿ ಚೆನ್ನಮ್ಮ ಜಯಂತಿ ಮಾಡಿದ್ದೇ ನಾವು. ರಾಯಣ್ಣ ಸಮಾಧಿ ಸ್ಥಳ ಅಭಿವೃದ್ಧಿ ಮಾಡಿದ್ದೇ ನಾನು ಎಂದು ನುಡಿದರು.

Share This Article
Leave a Comment

Leave a Reply

Your email address will not be published. Required fields are marked *