ಮೈಸೂರು: ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದು ತಪ್ಪು ಅಂತಾ ಗೊತ್ತಿದ್ದರೂ ಕೆಲವು ಜನ ಅದನ್ನೇ ಮಾಡುತ್ತಾರೆ. ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಸಾಕಷ್ಟು ಪ್ರಯತ್ನಿಸಿ ಮಹಾನಗರ ಪಾಲಿಕೆಗಳು ಸುಸ್ತಾಗಿವೆ. ಈಗ ಇದಕ್ಕೆ ಹೊಸ ಐಡಿಯಾವೊಂದನ್ನು ಯುವ ಭಾರತ್ ಸಂಘಟನೆಯ ಕಾರ್ಯಕರ್ತರು ಮೈಸೂರಿನಲ್ಲಿ ಪ್ರಯೋಗಿಸಿದ್ದಾರೆ.
Advertisement
ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದವರಿಗೆ ಅದೇ ಸ್ಥಳದಲ್ಲಿ ನಿಂತು ಸನ್ಮಾನ ಮಾಡುತ್ತಿದ್ದಾರೆ. ಹೂವಿನ ಹಾರ ಹಾಕಿ, ಗುಲಾಬಿ, ನಿಂಬೆಹಣ್ಣು ಕೊಟ್ಟು ಸನ್ಮಾನಿಸುತ್ತಿದ್ದಾರೆ. ನಂತರ ನೀವು ಬಹಳ ಒಳ್ಳೆ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಈ ಕೆಲಸ ಇನ್ನೊಬ್ಬರಿಗೆ ಪ್ರೇರಣೆ ಆಗಲಿ ಅಂತಾ ಹೇಳುತ್ತಿದ್ದಾರೆ.
Advertisement
Advertisement
ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಯುವ ಭಾರತ್ ಸಂಘಟನೆಯ ಕಾರ್ಯಕರ್ತರು ಈ ವಿಶಿಷ್ಟ ಅಭಿಯಾನವನ್ನು ಇವತ್ತು ನಡೆಸಿದರು. ಇದಲ್ಲದೆ ಇನ್ಮುಂದೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಜನ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಅಲ್ಲಿಗೆ ಹೋಗಿ ಸನ್ಮಾನ ಮಾಡುವ ಅಭಿಯಾನ ಶುರು ಮಾಡಿದ್ದಾರೆ.
Advertisement
ಜನರಿಗೆ ತಮ್ಮ ತಪ್ಪು ಅರಿವಾಗಿ ನಾಚಿಕೆ ಪಟ್ಟುಕೊಂಡು ಇನ್ನೊಮ್ಮೆ ಯಾವತ್ತೂ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆಗೆ ನಿಲ್ಲಬಾರದು ಅನ್ನುವ ಮನಃಸ್ಥಿತಿ ಸೃಷ್ಟಿಸಲು ಈ ಪ್ರಯೋಗ ಶುರುವಾಗಿದೆ.
ಈ ಹಿಂದೆ ದೇಶದ ಅತ್ಯಂತ ಸ್ವಚ್ಛ ನಗರಗಳಲ್ಲಿ ಮೊದಲನೇ ಸ್ಥಾನ ಪಡೆದಿದ್ದ ಮೈಸೂರು ಕಳೆದ ವರ್ಷದ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಾರಿತ್ತು.