ರಾಯಚೂರು: ಕುಡಿತದ ಚಟ ಎಂಥವರನ್ನೂ ಬೀದಿಗೆ ತಂದು ನಿಲ್ಲಿಸುತ್ತೆ. ಇನ್ನೂ ಕೂಲಿಕಾರರು, ರೈತಾಪಿ ಜನ ಕುಡಿತಕ್ಕೆ ದಾಸರಾದರೆ ಬಡ ಸಂಸಾರದ ಕಥೆ ಏನಾಗ್ಬೇಡ. ಹೀಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘ ರಾಯಚೂರಿನಲ್ಲಿ ಕುಡಿತ ಬಿಟ್ಟವರಿಗಾಗಿ ಪಾನಮುಕ್ತರ ಅಭಿನಂದನಾ ಸಮಾರಂಭವನ್ನ ಏರ್ಪಡಿಸಿತ್ತು.
ಕುಡಿತ ಬಿಟ್ಟವರನ್ನೆಲ್ಲ ಕರೆಯಿಸಿ ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸನ್ಮಾನಿಸಲಾಯಿತು. 2013 ರಿಂದ ರಾಯಚೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘ ಮದ್ಯವ್ಯಸನಿಗಳಿಗಾಗಿ ವಿಶೇಷ ಶಿಬಿರ, ಕಾರ್ಯಕ್ರಮಗಳನ್ನ ಆಯೋಜಿಸಿ ಇದುವರೆಗೆ 250 ಜನರನ್ನ ಪರಿವರ್ತನೆ ಮಾಡಿದ್ದಾರೆ. ಅದರಲ್ಲಿ ಶೇಕಡಾ 10 ರಷ್ಟು ಜನ ವಿದ್ಯಾರ್ಥಿಗಳೇ ಆಗಿದ್ದಾರೆ. ಇಷ್ಟು ದಿನ ಕುಡಿತಕ್ಕೆ ದಾಸರಾಗಿ ನಿಷ್ಪ್ರಯೋಜಕರಾಗಿದ್ದವರು ಈಗ ಮನೆ ಜವಾಬ್ದಾರಿಯನ್ನು ಹೊತ್ತಿದ್ದಾರೆ.
Advertisement
ಇಷ್ಟು ದಿನ ಕುಡಿದು ಮನೆ ಮಂದಿಗೆಲ್ಲಾ ಬೇಸರ ತಂದಿದ್ದೆ. ಈಗ ಕುಡಿತ ಬಿಟ್ಟು ದುಡಿಯುತ್ತಿದ್ದೇನೆ. ನನಗೂ ಮನೆಯಲ್ಲಿ ಹಾಗೂ ಊರಲ್ಲಿ ಗೌರವ ಸಿಗುತ್ತಿದೆ ಎಂದು ದೇವದುರ್ಗದ ಗಂಗಪ್ಪ ಸನ್ಮಾನದ ಬಳಿಕ ಹೇಳಿದರು.
Advertisement
Advertisement
Advertisement