ಮೈಸೂರು: ಕಳೆದೊಂದು ವಾರದಿಂದ ಬಂಡೀಪುರದ ಅರಣ್ಯ ಪ್ರದೇಶ ಧಗಧಗನೇ ಹೊತ್ತಿ ಉರಿಯುತ್ತಿದೆ. ಅಲ್ಲದೇ ಅರಣ್ಯ ಸಿಬ್ಬಂದಿ, ನೂರಾರು ಸ್ವಯಂ ಸೇವಕರು ಹಗಲಿರುಳೆನ್ನದೇ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬೆಂಕಿಯ ಘಟನೆಗೆ ಸಹಾಯ ಹಸ್ತ ಚಾಚಲು ಇಚ್ಚಿಸುವ ಸಾರ್ವಜನಿಕರಿಗಾಗಿ ಮೈಸೂರು ಮೃಗಾಲಯದಲ್ಲಿ ಕೌಂಟರ್ ತೆರೆದಿದೆ.
ಸಹಾಯ ಚಾಚುವವರು 5 ಲೀಟರ್ ನೀರಿನ ಕ್ಯಾನ್‍ಗಳು, ತಯಾರಿಸಿದ ಒಬ್ಬಿರಿಗೊಂದರಂತೆ ಪ್ಯಾಕ್ ಮಾಡಲಾದ ಹೆಚ್ಚು ಖಾರವಿಲ್ಲದ ಊಟ, ಟಾರ್ಚುಗಳು, ಸುಟ್ಟ ಗಾಯಗಳಿಗೆ ಹಾಕುವ ಬರ್ನಲ್ ಕ್ರೀಂ, ಬಾಳೆಹಣ್ಣು, ಮೂಸಂಬಿ, ಸೇಬು, ಕಿತ್ತಳೆ, ದ್ರಾಕ್ಷಿ (ಕಾಡಲ್ಲಿ ತೆಗೆದು ಕೊಂಡು ಹೋಗಲು ಅನುಕೂಲಕರ ಹಣ್ಣುಗಳು), ಗ್ಲುಕೋಸ್ ಹಾಗೂ ಒಆರ್‍ಎಸ್ ಲೀಕ್ವಿಡ್ ನೀಡುವುದಾಗಿ ತಿಳಿಸಿದೆ.
ಬಂಡೀಪುರದಲ್ಲಿ ಧಗಧಗನೇ ಉರಿದ ಬೆಂಕಿ ಇನ್ನೂ ಅಲ್ಲಲ್ಲಿ ಜೀವಂತವಾಗಿದೆ. ಇದಲ್ಲದೆ ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಬಂಡೀಪುರಕ್ಕು ಹರಡುವ ಸಾಧ್ಯತೆಗಳಿದ್ದು, ಬೆಂಕಿ ಹರಡದಂತೆ ಜಾಗ್ರತೆ ವಹಿಸಲಾಗಿದೆ. ಇನ್ನೂ ಮುನ್ನೆಚ್ಚರಿಕಾ ಕ್ರಮವಾಗಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದ್ದು ಗೋಪಾಲಸ್ವಾಮಿ ದೇವಸ್ಥಾನ ಬಂದ್ ಮಾಡಲಾಗಿದೆ. ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಗೋಪಾಲಸ್ವಾಮಿ ಬೆಟ್ಟಿ ಇದೀಗ ಬಿಕೋ ಎನ್ನುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv