ಹಾವೇರಿ: ಸಾಲ ಮಾಡಿಕೊಂಡಿದ್ದವರು ಜೆಡಿಎಸ್ ಗೆ ವೋಟ್ ಹಾಕಿದ್ದರೇ ನಮ್ಮದೇ ಸರ್ಕಾರ ಬರುತ್ತಿತ್ತು. ಆದರೆ ಏನ್ ಮಾಡೋದು ವೋಟ್ ಹಾಕಲಿಲ್ಲ. ಹಾಗಾಗಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಶಿಕ್ಷಣ ಮತ್ರಿಯಾಗಬೇಕೆಂದು ಅಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗಿಲ್ಲ. ಹಾಗಾಗಿ ಕಾದು ನೋಡಬೇಕಿದೆ. ಸಮ್ಮಿಶ್ರ ಸರ್ಕಾರದದಲ್ಲಿ ಕಷ್ಟದ ಕೆಲಸವಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಅವುಗಳನ್ನ ಬಗೆಹರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದೇ ವೇಳೆ ಬಜೆಟ್ ಮಂಡನೆ ಕುರಿತು ಪ್ರತಿಕ್ರಿಯೆ ನೀಡಿದ ಹೊರಟ್ಟಿ, ಹೊಸ ಸರ್ಕಾರ ಬಂದಾಗ ಹೊಸ ಬಜೆಟ್ ಮಂಡಿಸುವ ಸಂಪ್ರದಾಯ ಇದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ನ ಯಾವುದೇ ಯೋಜನೆ ಕೈ ಬಿಡುವುದಿಲ್ಲ ಎಂದಿದ್ದಾರೆ. ಹೀಗಾಗಿ ಹೊಂದಾಣಿಕೆ ಮಾಡಿಕೊಂಡು ಬಜೆಟ್ ಮಂಡಿಸುವುದು ಸೂಕ್ತ ಎಂದರು.
ಜೆಡಿಎಸ್ ಶಾಸಕ ಕೋನರೆಡ್ಡಿಯಷ್ಟು ಕೆಲಸ ಯಾರೂ ಮಾಡಿಲ್ಲ. ಆದ್ರೆ ಅವರೇ ಸೋತ್ತಿದ್ದಾರೆ. ಆದ್ರೆ ಕಷ್ಟಕಾಲದಲ್ಲಿರೋ ಯಾರೊಬ್ಬರನ್ನ ಸಿ.ಎಂ ಕುಮಾರಸ್ವಾಮಿ ಬಿಡೋದಿಲ್ಲ ಅಂತ ಅವರು ಹೇಳಿದ್ರು.