ಬೆಂಗಳೂರು: ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ಜನರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರ ‘ಭಾರತ್’ ಬ್ರ್ಯಾಂಡ್ ಅಕ್ಕಿ ಮಾರಾಟ ಆರಂಭಿಸಿದ್ದು, ಅಗ್ಗ ದರದ ಈ ಅಕ್ಕಿಯನ್ನು ಕೊಳ್ಳಲು ಬೆಂಗಳೂರಿನ ಜನರು ಮುಗಿಬಿದ್ದಿದ್ದಾರೆ.
ಕೇಂದ್ರದಿಂದ 29 ರೂಪಾಯಿ ಕೆಜಿ ಅಕ್ಕಿಯ ಸಂಚಾರಿ ವ್ಯಾನ್ ವಿಧಾನಸೌಧ ಮುಂಭಾಗ ನಿಂತ ಕೂಡಲೇ ಅಕ್ಕಿ ಕೊಳ್ಳಲು ಜನರು ನಾ ಮುಂದು ತಾ ಮುಂದು ಎಂದು ಅಕ್ಕಿ ಕೊಳ್ಳಲು ಮುಗಿಬಿದ್ದಿದ್ದಾರೆ. ಅಕ್ಕಿ ಚೀಲ ಖರೀದಿಗೆ ಫುಲ್ ಡಿಮ್ಯಾಂಡ್ ಹಿನ್ನೆಲೆ ಕೇವಲ 30 ನಿಮಿಷಕ್ಕೆ 1 ಟನ್ ಅಕ್ಕಿ ಸೋಲ್ಡ್ ಔಟ್ ಆಗಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸುತ್ತೇನೆ: ಪರಮಹಂಸ ಆಚಾರ್ಯ ಘೋಷಣೆ
- Advertisement
ಜನರಂತೂ ಅಲ್ಲೇ ಅಕ್ಕಿ ಚೀಲ ಬ್ಯಾಗ್ ಅನ್ನು ಓಪನ್ ಮಾಡಿ ಕ್ವಾಲಿಟಿ ಚೆಕ್ ಮಾಡಿದ್ದಾರೆ. ಅಲ್ಲದೇ ರಾ ರೈಸ್ ಚೆನ್ನಾಗಿದೆ, 29 ರೂ.ಗೆ ಮೋದಿ ಗಿಫ್ಟ್ ಎಂದು ಖುಷಿ ಪಟ್ಟಿದ್ದಾರೆ. ಭಾರತ್ ರೈಸ್‌ಗೆ ಆರಂಭದಲ್ಲಿಯೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಜನರಿಂದ ಫುಲ್ ಮಾರ್ಕ್ಸ್ ಸಿಕ್ಕಿದೆ. ಜನರಿಗೆ ಇನ್ನಷ್ಟು ಸುಲಭವಾಗಿ ಅಕ್ಕಿ ಸಿಕ್ಕರೇ ಇನ್ನಷ್ಟು ಸಹಾಯವಾಗಲಿದೆ. ಇದನ್ನೂ ಓದಿ: ಬೆಳಗಾವಿಯ ಕಾಂಗ್ರೆಸ್ ಭವನಕ್ಕೆ ನುಗ್ಗಿದ 27 ಬಿಜೆಪಿ ಕಾರ್ಯಕರ್ತರ ವಿರುದ್ಧ FIR
- Advertisement
ಈಗಾಗಲೇ ‘ಭಾರತ್ ಬ್ರ‍್ಯಾಂಡ್’ ಗೋದಿ ಹಿಟ್ಟು ಮತ್ತು ಕಡಲೆ ಬೇಳೆ ಮಾರಾಟವಾಗುತ್ತಿದೆ. ಗೋಧಿ ಹಿಟ್ಟು ಪ್ರತಿ ಕೆ.ಜಿಗೆ 27.50 ರೂ. ಕಡಲೆ ಬೇಳೆ ಪ್ರತಿ ಕೆ.ಜಿಗೆ 60 ರೂ.ಗಳಿಗೆ ಮಾರಾಟವಾಗುತ್ತಿದೆ. ಇದರೊಂದಿಗೆ ಇದೀಗ ಅಕ್ಕಿಯೂ ಮಾರಾಟವಾಗುತ್ತಿದೆ. ಪ್ರತಿ ಕೆ.ಜಿ ಅಕ್ಕಿಗೆ 29 ರೂ. ನಿಗದಿಪಡಿಸಲಾಗಿದೆ. 5 ಕೆ.ಜಿ ಮತ್ತು 10 ಕೆ.ಜಿ ಪ್ಯಾಕೆಟ್‌ಗಳಲ್ಲಿ ಅಕ್ಕಿ ದೊರೆಯುತ್ತದೆ. ಇದನ್ನೂ ಓದಿ: ಬೆಂಗಳೂರಲ್ಲಿ ಬಿಜೆಪಿ ನಾಯಕರ ಹೈಡ್ರಾಮಾ- ಸಿಎಂ, ಸಚಿವರ ಕಚೇರಿಗೆ ಬೀಗ ಹಾಕಲು ಯತ್ನ