ಲಕ್ನೋ: ಮದುವೆಗೆ ಬಂದ ಅತಿಥಿಯೊಬ್ಬರು ಮದುವೆಮನೆಯ ರೂಮಿನಲ್ಲೇ ದೈಹಿಕ ಸಂಬಂಧ ಬೆಳೆಸುತ್ತಿದ್ದ ಘಟನೆ ಉತ್ತರಪ್ರದೇಶದ ಸೋನ್‍ಬದ್ರ ಜಿಲ್ಲೆಯ ಕೋತ್ವಾಲ್ ಗ್ರಾಮದಲ್ಲಿ ನಡೆದಿದೆ.
ಮದುವೆಮನೆಯಲ್ಲಿ ಸಂಭ್ರಮ ವಾತವರಣವಿದ್ದು, ಎಲ್ಲರೂ ಮದುವೆ ಕೆಲಸಗಳಲ್ಲಿ ತೊಡಗಿದ್ದರು. ಮದುವೆಗೆ ಬಂದ ಮಕ್ಕಳು ಕೂಡ ಆಟವಾಡುತ್ತಾ ರೂಂವೊಂದರ ಬಾಗಿಲನ್ನು ತಟ್ಟುತ್ತಿದ್ದರು. ಆದರೆ ಯಾರೂ ಬಾಗಿಲು ತೆರೆಯಲಿಲ್ಲ. ಆಗ ಹಿರಿಯರು ಬಂದು ಬಾಗಿಲನ್ನು ಜೋರಾಗಿ ಒಡೆದು ಒಳಗೆ ಹೋದಾಗ ಒಂದು ಕ್ಷಣ ದಂಗಾಗಿ ಹೋದರು.
ರೂಮಿನಲ್ಲಿ ಒಬ್ಬ ಯುವಕ ಹಾಗೂ ಯುವತಿ ದೈಹಿಕ ಸಂಬಂಧ ಬೆಳೆಸುವ ರೀತಿಯಲ್ಲಿ ಕಂಡು ಬಂದಿದ್ದಾರೆ. ಅವರ ಈ ವರ್ತನೆಯನ್ನು ಕಂಡು ಕುಟುಂಬದವರು ಹಾಗೂ ಗ್ರಾಮದವರು ಅವರನ್ನು ಹಿಡಿದು ಥಳಿಸಿದ್ದಾರೆ.
ಯುವಕ ಹಾಗೂ ಯುವತಿ ಮದುವೆಯಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಈ ನಡುವೆ ಸಂಬಂಧಿಕರಿಗೆಂದೇ ಇರಿಸಿದ್ದ ರೂಮಿನಲ್ಲಿ ಇವರಿಬ್ಬರು ಹೋಗಿದ್ದಾರೆ. ಈ ಇಬ್ಬರು ರೂಮಿನೊಳಗೆ ಹೋಗುವುದನ್ನು ಗ್ರಾಮದ ಒಬ್ಬ ವ್ಯಕ್ತಿ ನೋಡಿದ್ದನು.
ಇವರಿಬ್ಬರು ರೂಮಿನೊಳಗೆ ಹೋಗುವುದನ್ನು ಕಂಡ ವ್ಯಕ್ತಿಯೊಬ್ಬ ತನ್ನ ಜೊತೆ ಕೆಲವರನ್ನು ರೂಮಿನ ಬಳಿ ಕರೆದುಕೊಂಡು ಹೋಗಿದ್ದಾನೆ. ಡೋರ್ ಒಡೆದು ಸಂಬಂಧಿಕರು ಹಾಗೂ ಗ್ರಾಮಸ್ಥರು ರೂಮಿನೊಳಗೆ ಹೋದಾಗ ಯುವಕ ಹಾಗೂ ಯುವತಿ ಅಶ್ಲೀಲವಾಗಿ ಇದ್ದರು. ಈ ನಡುವೆ ಅಲ್ಲಿಗೆ ಬಂದ ಇಬ್ಬರ ಕುಟುಂಬದವರು ಅವರನ್ನು ಥಳಿಸಿದ್ದಾರೆ ಎಂದು ವರದಿಯಾಗಿದೆ.
ಆತ ನನ್ನನ್ನು ಬಲವಂತವಾಗಿ ರೂಮಿಗೆ ಕರೆದನು ಎಂದು ಯುವತಿ ಯುವಕನ ಮೇಲೆ ಆರೋಪಿಸಿದ್ದಾಳೆ. ಈ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅವರನ್ನು ಕೂಡಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯುವಕನನ್ನು ಹಿಡಿದು ಆತನಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿ ಹೇಳಿ ಗ್ರಾಮಸ್ಥರನ್ನು ಶಾಂತಗೊಳಿಸಿದರು.
ನಂತರ ಪೊಲೀಸರು ಯುವತಿಯನ್ನು ತನ್ನ ಕುಟುಂಬದವರಿಗೆ ಒಪ್ಪಿಸಿ, ಯುವಕನನ್ನು ಕೋತ್ವಾಲ್‍ಗೆ ಕರೆದುಕೊಂಡು ಹೋದರು. ಸದ್ಯ ಈ ಘಟನೆ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.