ಬೆಂಗಳೂರು: ಕಳೆದ ವರ್ಷದಂತೆ ಈ ವರ್ಷವೂ ಹೊಸ ವರ್ಷವನ್ನು ಬಹಳ ಸರಳವಾಗಿ ಬರಮಾಡಿಕೊಳ್ಳಲಾಯಿತು. ಮಹಾಮಾರಿ ಕೊರೊನಾ ವೈರಸ್, ಓಮಿಕ್ರಾನ್ ಆತಂಕದಿಂದ ಭಾರೀ ಸಡಗರಕ್ಕೆ ಕತ್ತರಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸರಳವಾಗಿಯೇ ಹೊಸ ವರ್ಷವನ್ನು ಆಚರಣೆ ಮಾಡಿಕೊಳ್ಳಲಾಯಿತು. ಆದರೆ ವಿದೇಶಗಳಲ್ಲಿ ಭಾರೀ ಸಂಭ್ರಮ, ಸಡಗರದಿಂದಲೇ ನ್ಯೂ ಇಯರ್ ಅನ್ನು ವೆಲ್ ಕಮ್ ಮಾಡಲಾಗಿದೆ.
Advertisement
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮಳೆ ಸಿಂಚನವಾಗಿದೆ. ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್‍ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಕೋರಮಂಗಲ ಸೇರಿದಂತೆ ಎಲ್ಲಾ ಕಡೆ ಮಳೆ ಬಂದ ಕಾರಣವೂ ಜನ ಬೇಗ ಮನೆ ಸೇರಿಕೊಂಡರು. ಪ್ರತಿ ವರ್ಷದ ಹೊಸ ವರ್ಷಕ್ಕೆ ಬೆಂಗಳೂರಿನ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸ್ತಬ್ಧವಾಗಿದೆ. ರಾತ್ರಿ 9 ಗಂಟೆ ಆಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ತಂಡೋಪತಂಡವಾಗಿ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍ನಲ್ಲಿ ಜಮಾಯಿಸಿ, ರೋಡ್‍ಗಳನ್ನು ಬಂದ್ ಮಾಡಿದ್ರು.
Advertisement
Advertisement
ಹೊಸ ವರ್ಷ ಬಂತು ಅಂದ್ರೆ ಜನ ಬೆಂಗಳೂರಿನ ಈ ರೋಡ್‍ಗೆ ಬರೋದು ಮೋಜು ಮಸ್ತಿ ಮಾಡೋದು ಸಾಮಾನ್ಯ. ಆದರೆ ಓಮಿಕ್ರಾನ್ ರೂಪಾಂತರಿ ವೈರಸ್ ಭೀತಿ ಮತ್ತು ಮೂರನೇ ಅಲೆಯ ಭಯಕ್ಕೆ ಸರ್ಕಾರ ಸಾಕಷ್ಟು ಟಫ್ ರೂಲ್ಸ್ ಜಾರಿಗೆ ತಂದಿದೆ. ಹಾಗಾಗಿ ಬೆಂಗಳೂರಿನ ಬ್ರೀಗೆಡ್ ರೋಡ್ ಖಾಲಿಯಾಗಿದೆ.ಬ್ರಿಗೇಡ್ ರೋಡ್‍ನ ಪಬ್ ಅಂಡ್ ಬಾರ್ ರೆಸ್ಟೋರೆಂಟ್‍ಗಳು ನ್ಯೂ ಇಯರ್ ಸೆಲೆಬ್ರೇಷನ್ ಟೈಮ್ ನಲ್ಲಿ ಕಾಲಿಡಲು ಸಹ ಜಾಗವಿಲ್ಲದಂತೆ ತುಂಬಿ ತುಳುಕುತ್ತಿತ್ತು. ಆದರೇ ಈ ವರ್ಷ ಮೂರನೇ ಅಲೆಯ ಭೀತಿಗೆ ಸರ್ಕಾರ ಮಾಡಿರೋ ಟಫ್ ರೂಲ್ಸ್ ಕಾರಣದಿಂದ ಖಾಲಿ ಖಾಲಿಯಾಗಿದೆ. ಸಂಜೆ 6 ಗಂಟೆಗೇ ಈ ಪ್ರಮುಖ ರೋಡ್‍ಗಳ ಬಂದ್ ಮಾಡಿರೋದಕ್ಕೆ ಪಬ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ಯುಬಿ ಸಿಟಿಯ ರಸ್ತೆಯಲ್ಲಿ ಖಾಕಿ ಪಡೆ ಅಲರ್ಟ್ ಆಗಿದೆ. ರಂಗು ರಂಗಾಗಿರುತ್ತಿದ್ದ ಯುಬಿ ಸಿಟಿ ಇಂದು ಸಂಪೂರ್ಣ ಕಳೆಗುಂದಿದೆ. ಡಿಜೆ ಮೋಜು ಮಸ್ತಿ ಇಲ್ಲದ ರಸ್ತೆಯಲ್ಲಿ ಮನೆಗಳತ್ತ ಜನ ಮುಖ ಮಾಡಿದ್ದಾರೆ. ಪಬ್, ರೆಸ್ಟೋರೆಂಟ್‍ಗಳ ಮುಂದೆ ಜನರಿಗಿಂತ ಪೊಲೀಸರೇ ಹೆಚ್ಚಿದ್ದರು. ಕೋರಮಂಗಲದಲ್ಲಿ 80 ಅಡಿ ರಸ್ತೆಯಲ್ಲಿ ಮಳೆ ಮಧ್ಯೆಯೂ ಜನ ಪಬ್‍ಗಳಿಗೆ ಬೆರಳೆಣಿಕೆ ಜನ ಬಂದಿದ್ದರು. ರಾತ್ರಿ 9.30ರ ಒಳಗೆ ಊಟ ಮುಗಿಸಿಕೊಂಡರು. ಇನ್ನು ಪೊಲೀಸರು ಫುಲ್ ಅಲರ್ಟ್ ಆಗಿದ್ದರು. ಕ್ಲಬ್, ಪಬ್‍ಗೆಳಿಗೆ ಎಂಟ್ರಿ ಕೊಡೋ ರೋಡ್‍ಗಳ ಕಡೆ ಹೆಚ್ಚು ನಿಹಾ ವಹಿಸಿದ್ದರು. ಗಲಾಟೆ ಮಾಡುವವರನ್ನ ವಶಕ್ಕೆ ಪಡೆಯಲು ಬಿಎಂಟಿಸಿ ಮತ್ತು ಟಿಟಿ ವೆಹಿಕಲ್ ಕರೆಸಿಕೊಂಡಿದ್ದಾರೆ.
ಇಂದಿರಾನಗರದಲ್ಲೂ ನ್ಯೂ ಇಯರ್ ಸಂಭ್ರಮ ಕಳೆಗುಂದಿದೆ. ಇಂದಿರಾನಗರ ಸುತ್ತಮುತ್ತ ಪಬ್, ರೆಸ್ಟೋರೆಂಟ್‍ಗಳಲ್ಲಿ ಸಂಭ್ರಮ ಇರಲಿಲ್ಲ. 80 ಅಡಿ ರಸ್ತೆಯ ಪ್ರಮುಖ ರಸ್ತೆಗಳಲ್ಲಿ ಸೇಫ್ಟಿ ಐಲ್ಯಾಂಡ್ ನಿರ್ಮಾಣ ಮಾಡಿದರು. ಯುವತಿಯರು, ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಸೇಫ್ಟಿ ಐಲ್ಯಾಂಡ್ ಅನ್ನು ಪೊಲೀಸರೇ ನಿರ್ಮಿಸಿದ್ದಾರೆ. ನೈಟ್ ಕರ್ಫ್ಯೂಗೆ ಸಮಯ ಸಮೀಪಿಸುತ್ತಿದ್ದಂತೆ ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ಹಂತ ಹಂತವಾಗಿ ಶಾಪ್‍ಗಳು, ಮಳಿಗೆಗಳ ಮಾಲೀಕರು ಬಾಗಿಲು ಹಾಕಿದರು. 10 ಗಂಟೆಯೊಳಗೆ ಮನೆ ಸೇರಿಕೊಳ್ಳಲು ಹೊರಡಿದರು.
ಇತ್ತ ಹುಬ್ಬಳ್ಳಿಯಲ್ಲಿ ರಾತ್ರಿ 8ಗಂಟೆ ಹೊತ್ತಿಗೆ ಪಬ್, ಬಾರ್ & ರೆಸ್ಟೋರೆಂಟ್‍ಗಳಲ್ಲಿ ಯುವಕ ಯುವತಿಯರು ಹೊಸ ವರ್ಷದ ಸಂಭ್ರಮಾಚರಣೆ ಮಾಡಿದ್ರು. ರ್ಯಾಪರ್ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಜೊತೆ ಉಡುಪಿಯ ಮಲ್ಪೆಯಲ್ಲಿ ಕಾಣಿಸಿಕೊಂಡಿದ್ರು. ಉಡುಪಿಯ ಮಲ್ಪೆ ಬೀಚ್‍ನಲ್ಲಿ ನೂರಾರು ಜನ ಮೀನಿನ ಖಾದ್ಯವನ್ನು ಸವಿಯುತ್ತ ಬೀಚ್ ಬದಿಯಲ್ಲಿ ಫ್ಯಾಮಿಲಿ ಸಮೇತ ಎಂಜಾಯ್ ಮಾಡುತ್ತಾ ಹೊಸವರ್ಷವನ್ನು ಆಚರಿಸಿದ್ರು. ಬೀಚ್ ರೆಸ್ಟೋರೆಂಟ್ ಫ್ರೆಶ್ ಫಿಶ್ ಫ್ರೈ ಹೋಟೆಲ್ ಗಳಲ್ಲಿ ಜನ ತಮ್ಮ ಇಷ್ಟದ ಆಹಾರವನ್ನು ಸೇವಿಸುತ್ತಾ ಹೊಸವರ್ಷವನ್ನು ಬರಮಾಡಿಕೊಂಡ್ರು.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ 8 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ಕಫ್ರ್ಯೂ ಜಾರಿ ಮಾಡಲಾಗಿದೆ. ಆದ್ರೆ ಕಾರವಾರದ ಮಾರುತಿ ದೇವಸ್ಥಾನದಲ್ಲಿ ಜಾತ್ರೆ ಹಿನ್ನಲೆಯಲ್ಲಿ ಎಂಟುಗಂಟೆ ಕಳೆದರೂ ಅಂಗಡಿಮುಂಗಟ್ಟುಗಳು ಬಂದ್ ಆಗದೇ ತೆರೆದಿದ್ದು ಸಾವಿರಾರು ಜನರು ಜಾತ್ರೆಯಲ್ಲಿ ಭಾಗವಹಿಸಿದ್ದರು. ಪೊಲೀಸರು ಮನವಿ ಮಾಡಿದರೂ ಜನರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಅಂಗಡಿಗಳಲ್ಲಿ ಖರೀದಿಯಲ್ಲಿ ನಿರತರಾದರು. ಬೆಳಗಾವಿಯ ಪಂಚತಾರಾ ಹೋಟೆಲ್‍ಗಳು ಖಾಲಿ ಖಾಲಿ ಆಗಿವೆ. ಸರ್ಕಾರದ ಮಾರ್ಗ ಸೂಚಿಯಂತೆ ರಾತ್ರಿ 10 ಗಂಟೆಗೆ ಹೊಟೇಲ್‍ಗಳು ಬಂದ್ ಆಗಿವೆ.