ಬೆಳಗಾವಿ: ರಾಜ್ಯದಲ್ಲಿ ಒಳ್ಳೆಯದಾಗಬೇಕೆಂದ್ರೆ ಜನ 2023ರಲ್ಲಿ ಸಿದ್ದರಾಮಯ್ಯ ಸಿಎಂ ಆಗಬೇಕು ಅಂತಾ ಬಯಸುತ್ತಿದ್ದಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಯಾರು ತೀರ್ಮಾನ ಮಾಡಕ್ಕಾಗಲ್ಲ. ನಮ್ಮ ನಾಯಕಿ ಸೋನಿಯಾ ಗಾಂಧಿ ಇದ್ದಾರೆ. ನನ್ನ ಅಭಿಪ್ರಾಯ ಹೇಳೋದು ತಪ್ಪೇನಿಲ್ಲವಲ್ಲ. ನಮ್ಮ ಸಂವಿಧಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ ನನ್ನ ಅಭಿಪ್ರಾಯ ಹೇಳಿದ್ದೇನೆ ಎಂದರು. ಇದನ್ನೂ ಓದಿ: ಕಿಡ್ನಾಪ್ ಮಾಡಿ ಗಣೇಶಪುರದ ಮಾವಿನ ತೋಪಿನಲ್ಲಿ ಕೂಡಿಹಾಕಿದ್ದ: ನವ್ಯಶ್ರೀ
Advertisement
Advertisement
ಯಾರೇ ಇದ್ರು ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು ಎಂಬ ಡಿಕೆಶಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ಕೊಟ್ಟ ಅವರು, ಇದನ್ನ ಚಾಲನೆ ಯಾರು ಕೊಟ್ಟಿದ್ದು? ಅವರು ಹೇಳಿದ್ಮೇಲೆ ತಾನೇ ಬಂದಿದ್ದು. ಅಧ್ಯಕ್ಷರು ನಮ್ಮ ಒಕ್ಕಲಿಗ ಸಮಾಜ ಕಾರ್ಯಕ್ರಮದಲ್ಲಿ ಅವರಾಗಿ ಅವರು ನನಗೆ ಮುಂದೆ ಅವಕಾಶ ಕೊಡಿ ಎಂದು ಚಾಲನೆ ಕೊಟ್ಟಿದ್ದಾರೆ. ಕೇಳಿದ್ದು ಅವರೇ ತಾನೇ? ಎಂದು ಡಿಕೆಶಿಗೆ ಪ್ರಶ್ನೆ ಮಾಡಿದರು.
Advertisement
ಎಲ್ಲರೂ ಕ್ಲೇಮ್ ಮಾಡೋದು ಸಹಜ. ಎಲ್ಲರಿಗೂ ಆಸೆ ಇರುತ್ತದೆ. ಬಹಳ ಜನರಿಗೆ ಆಸೆ ಇದೆ. ಆಸೆ ಇರೋದ್ರಲ್ಲಿ ತಪ್ಪೇನಿಲ್ಲ. ಮೊನ್ನೆ ನಾನು ಹೇಳಿದ್ದೀನಿ ಮುಸ್ಲಿಂರಿಗೂ ಅವಕಾಶ ಸಿಗಬೇಕು. ನನಗೂ ಸಿಎಂ ಆಗಬೇಕೆಂಬ ಆಸೆ ಇದೆ. ನಾವು ಜನಸಂಖ್ಯೆಯನುಸಾರ ಶೇಕಡಾ.15ರಷ್ಟು ಇದ್ದೇವೆ ಎಂದು ತಿಳಿಸಿದರು.
Advertisement
ಒಂದೇ ಸಮಾಜ ವೋಟ್ ಕೊಟ್ಟರೇ ಸಿಎಂ ಆಗಲು ಸಾಧ್ಯವಾಗಲ್ಲ. ಎಲ್ಲ ಸಮಾಜದವರನ್ನು ನಾವು ಜೊತೆಗೆ ತಗೆದುಕೊಂಡು ಹೋಗಬೇಕು. ಎಲ್ಲ ಸಮಾಜ ಸೇರಿ ಆಶೀರ್ವಾದ ಮಾಡಿದ್ರೆ ಸರ್ಕಾರ ಬರಲು ಸಾಧ್ಯವಾಗಲಿದೆ. ಒಂದೇ ಒಂದು ಸಮಾಜ ಬೆಂಬಲ ಕೊಟ್ಟರೆ ಯಾರು ಸಿಎಂ ಆಗಲು ಸಾಧ್ಯವಾಗಲ್ಲ ಎಂದರು.
ವ್ಯಕ್ತಿ ಪೂಜೆ ಮಾಡಬಾರದು ಪಕ್ಷ ಪೂಜೆ ಮಾಡಬೇಕೆಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ, ಪಕ್ಷ ಪೂಜೆ ಮಾಡ್ತಿದ್ದೀವಿ. ಅದರ ಜೊತೆ ವ್ಯಕ್ತಿ ಪೂಜೆ ಮಾಡಬೇಕಾಗುತ್ತದೆ. ಡಿಕೆಶಿ ಭೇಟಿಯಾಗ್ತೀರಾ ಅಂತಾ ಮಾಧ್ಯಮಗಳ ಪ್ರಶ್ನೆಗೆ, ಖಂಡಿತ. ನಮ್ಮ ಅಧ್ಯಕ್ಷರು ಇದ್ದಾರೆ, ಅವರನ್ನು ಬಿಟ್ಟು ಕಟೀಲ್ ಅವರನ್ನ ಭೇಟಿಯಾಗಬೇಕಾಗುತ್ತೆ ಎಂದು ಟೀಕಿಸಿದರು.
ಬಿಜೆಪಿ ಅಧ್ಯಕ್ಷರಿಗೆ ಭೇಟಿ ಮಾಡಕ್ಕಾಗುತ್ತ? ನನ್ನ ಕಾರ್ಯಕ್ರಮ ಮುಗಿಸಿ ಡಿಕೆಶಿ ಅವರನ್ನು ಭೇಟಿ ಆಗುತ್ತೇನೆ. ಬಾಯಿಮುಚ್ಚು ಅಂತಾ ಪರ್ಟಿಕ್ಯುಲರ್ ಆಗಿ ನನಗೆ ಹೇಳಿದ್ದಾರಾ? ನಾನು ಅವರ ಹೇಳಿಕೆ ನೋಡಿದ್ದೇನೆ. ಎಲ್ಲ ಜನ ಸೇರಿ ಪಕ್ಷ ಅಧಿಕಾರಕ್ಕೆ ತರಬೇಕು ಅಂದಿದ್ದಾರೆ ಎಂದು ಹೇಳಿದರು.
ಲೆವೆಲ್ ಬಗ್ಗೆ ಡಿಕೆಶಿ ಹೇಳಿಕೆ ವಿಚಾರಕ್ಕೆ, ಆಯ್ತು ಸ್ವಾಮಿ ಅವರ ಲೆವೆಲ್ ದೊಡ್ಡದಿರಬಹುದು. ನನ್ನ ಲೆವೆಲ್ ಚಿಕ್ಕದೇ ಇರಬಹುದು. ಅವರೇ ದೊಡ್ಡವರಾಗಲಿ. ಇದನ್ನು ನನ್ನ ಪಕ್ಷ ತೀರ್ಮಾನ ಮಾಡಬೇಕು. ನನ್ನ ಅಭಿಪ್ರಾಯ ಹೇಳಿದ್ದೇನೆ. ರಾಜ್ಯದ ಅಭಿಪ್ರಾಯ ಹೇಳಿದ್ದೇನೆ. ರಾಜ್ಯ ಪ್ರವಾಸ ಮಾಡ್ತಿದೀನಿ, ಎಷ್ಟು ಜನ ಇದ್ದಾರೆ ಎಲ್ಲರನ್ನೂ ಕೇಳಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ 2013 ರಿಂದ 2018ರವರೆಗೂ ಕೊಟ್ಟಿದ ಆಡಳಿತಕ್ಕೆ ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬುದು ಜನರ ಅಭಿಪ್ರಾಯವಾಗಿದೆ. ಮತ ಕೊಡೋರು ಯಾರು, ಅಧಿಕಾರನಾ ತರಲು ಸಾಧ್ಯವಾಗುತ್ತಾ? ಜನ ಮತ ಕೊಟ್ರೆ ಅಧಿಕಾರ ಬರಲು ಸಾಧ್ಯ. ಸಿದ್ದರಾಮಯ್ಯ ಕೊಟ್ಟ ಕಾರ್ಯಕ್ರಮ ಇವತ್ತು ಜನ ನೆನೆಸುತ್ತಿದ್ದಾರೆ. ರಾಜ್ಯ ಒಳ್ಳೆಯದಾಗಬೇಕೆಂದ್ರೆ 2023ರಲ್ಲಿ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಜನರು ಬಯಸುತ್ತಿದ್ದಾರೆ ಎಂದು ವಿವರಿಸಿದರು.
ನಾವು ನೀವು ಯಾರೂ ತೀರ್ಮಾನ ಮಾಡಕ್ಕಾಗಲ್ಲ. ಡಿ.ಕೆ.ಶಿವಕುಮಾರ್ ಸಹ ಮಾಡಕ್ಕಾಗಲ್ಲ. ನಾನು ಸಹ ಮಾಡಕ್ಕಾಗಲ್ಲ. ನಮ್ಮ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತೀರ್ಮಾನ ಮಾಡ್ತಾರೆ. ನಮ್ಮ ಅಭಿಪ್ರಾಯ ಹೇಳಿದ್ದು ಜನ ತೀರ್ಮಾನ ಮಾಡುತ್ತಾರೆ ಎಂದರು. ಇದನ್ನೂ ಓದಿ: ಭಾರತದ ಗಡಿಯಲ್ಲಿ ಮತ್ತೆ ಪಾಕ್ ಡ್ರೋನ್ ಹಾರಾಟ
ಡಿಕೆ, ಡಿಕೆ ಅಂತಾ ಅಭಿಮಾನಿಗಳ ಘೋಷಣೆ ವಿಚಾರ, ಇದು ವ್ಯಕ್ತಿ ಪೂಜೆ ಅಲ್ವಾ ಅಂತಾ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇದನ್ನ ನೀವು ಕೇಳಬೇಕು. ಪಕ್ಷದಲ್ಲಿ ಅಲ್ಪಸಂಖ್ಯಾತರ ಕಡೆಗಣಿಸುತ್ತಿಲ್ಲ. ಮೊದಲು ಕಾಂಗ್ರೆಸ್ ಆಮೇಲೆ ಸಿದ್ದರಾಮಯ್ಯ. ಆಮೇಲೆ ಡಿಕೆಶಿನಾ ಅಂತಾ ಮಾಧ್ಯಮಗಳ ಪ್ರಶ್ನೆಗೆ, ಮೊದಲು ಕಾಂಗ್ರೆಸ್ ಆಮೇಲೆ ಸಿದ್ದರಾಮಯ್ಯ ಎಂದು ಪುನರುಚ್ಚಾರ ಮಾಡಿದರು.