Connect with us

Belgaum

ಕುಡಿದ ಮತ್ತಿನಲ್ಲಿ ಸಿಬ್ಬಂದಿಯೊಂದಿಗೆ ಜಗಳ- ಕಲ್ಲುತೂರಾಟಕ್ಕೆ ಬಾರ್ ಪುಡಿ-ಪುಡಿ

Published

on

ಬೆಳಗಾವಿ: ಕುಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಬಾರ್ ಮಾಲೀಕ ಹಾಗೂ ಗ್ರಾಮಸ್ಥರ ನಡುವಿನ ಜಗಳ ತಾರಕಕ್ಕೇರಿದ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ತಲ್ಲೂರು ಗ್ರಾಮದಲ್ಲಿ ನಡೆದಿದೆ.

ನಡೆದಿದ್ದೇನು?: ಐಎಸ್ ಇರಕಾರ ಮಾಲೀಕತ್ವದ ಬಾರ್ ಗೆ ಭಾನುವಾರ ರಾತ್ರಿ ತಲ್ಲೂರು ಗ್ರಾಮದ ನಾಲ್ವರು ಬಂದಿದ್ದು, ಕುಡಿದ ಮತ್ತಿನಲ್ಲಿ ಬಾರ್ ಸಿಬ್ಬಂದಿಯೊಂದಿಗೆ ಜಗಳ ಮಾಡಿಕೊಂಡಿದ್ದರು. ಇಂದು ಬೆಳಗ್ಗೆ ಗ್ರಾಮಕ್ಕೆ ಬಂದ ಬಾರ್ ಸಿಬ್ಬಂದಿ ನಾಲ್ವರ ಮನೆಗೆ ಹೋಗಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಕೋಪಗೊಂಡ ಗ್ರಾಮಸ್ಥರು ಬಾರ್‍ಗೆ ಬಂದು ಕಲ್ಲು ತೂರಾಟ ನಡೆಸಿದ್ದಾರೆ. ಗ್ರಾಮಸ್ಥರು ಕಲ್ಲು ತೂರಾಟ ಮಾಡುವುದರ ಜೊತೆಗೆ ಬಾರ್‍ನಲ್ಲಿದ್ದ ಮದ್ಯದ ಬಾಟಲಿಗಳನ್ನು ಒಡೆದು ಹಾಕಿದ್ದಾರೆ.

ಗ್ರಾಮಸ್ಥರ ಆಕ್ರೋಶದ ಕಲ್ಲು ತೂರಾಟಕ್ಕೆ ಬಾರ್ ಅಂಗಡಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಗಲಾಟೆಯಲ್ಲಿ ನೂರಾರು ಸಂಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದರಿಂದ ಗ್ರಾಮದಲ್ಲಿ ಇದೀಗ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

https://www.youtube.com/watch?v=Ocie8qPInnE

 

 

Click to comment

Leave a Reply

Your email address will not be published. Required fields are marked *