ಬೆಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಸೇರಿ ದಕ್ಷಿಣ ಭಾರತದ ನಾಲ್ವರು ಗಣ್ಯರನ್ನು ಕೇಂದ್ರ ಸರ್ಕಾರ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ವಿಶೇಷವಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳನ್ನು ಮೇಲ್ಮನೆಗೆ ನೇಮಕ ಮಾಡಿರೋ ಕೇಂದ್ರದ ಕ್ರಮಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ಬೆನ್ನಲ್ಲೇ ಕೆಲವೊಮದು ಕೊಂಕು ಮಾತುಗಳು ಕೂಡ ಕೇಳಿ ಬರುತ್ತಿವೆ.
ನೂತನವಾಗಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನುಇಂದು ಬೆಂಗಳೂರಿನಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಚಿವ @ShivaramHebbar ಶಾಸಕರಾದ @SRVishwanathBJP, ಡಾ. ಶಿವರಾಜ್ ಪಾಟೀಲ್ ಹಾಗೂ ಇತರರು ಉಪಸ್ಥಿತರಿದ್ದರು. pic.twitter.com/TjjUegmtll
— Basavaraj S Bommai (@BSBommai) July 7, 2022
Advertisement
ಇದು ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿ ತನ್ನ ನೆಲೆ ವಿಸ್ತರಿಸಲು ಮಾಡಿರುವ ಗಿಮಿಕ್ ಅಷ್ಟೇ. ಮಿಷನ್ ದಕ್ಷಿಣ್ ಭಾಗವಾಗಿ ಹಿಂದೆಂದೂ ಇಲ್ಲದ ರೀತಿಯಲ್ಲಿ ದಕ್ಷಿಣ ಭಾರತೀಯರಿಗೆ ಆದ್ಯತೆ ನೀಡಿದ್ದಾರೆ. ಎಲೆಕ್ಷನ್ ಹತ್ತಿರ ಬಂದ್ವಲ್ಲ. ಅದಕ್ಕೆ ಇಷ್ಟೆಲ್ಲಾ ಕಸರತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಕಾಮೆಂಟ್ ಹಾಕ್ತಾ ಇದ್ದಾರೆ. ಇದಕ್ಕೆ ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ. ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಬರೋದು ಗ್ಯಾರಂಟಿ; ಆದರೆ…!
Advertisement
Advertisement
ಮಿಷನ್ ದಕ್ಷಿಣ ಅಂದ್ರೆ ಕೇವಲ ಅಧಿಕಾರ ಹಿಡಿಯುವ ರಾಜಕೀಯ ತಂತ್ರಗಾರಿಕೆ ಅಲ್ಲ. ದಕ್ಷಿಣ ರಾಜ್ಯಗಳ ಭಾಷಾ ಆಸ್ಮಿತೆ, ಸಾಧನೆ, ಜ್ಞಾನಭಂಡಾರ, ಅಭಿವೃದ್ಧಿ ಎಲ್ಲದಕ್ಕೂ ಗೌರವ ನೀಡುವುದಾಗಿದೆ ಎಂದು ಸ್ಪಷ್ಟಪಡಿಸಿದೆ. ಮೋದಿ ಯುಗದಲ್ಲಿ ಅರ್ಹರಿಗೆ ಮಾತ್ರ ಆದ್ಯತೆ. ಇದಕ್ಕೆ ರಾಜ್ಯಸಭೆಗೆ ನಾಮಿನಿರ್ದೇಶನಗೊಂಡ ಸದಸ್ಯರ ಸಾಧನೆಯೇ ಸಾಕ್ಷಿ ಎಂದಿದೆ. ಇದು ನಮ್ಮ ಕ್ಷೇತ್ರದ ಸೇವಾಕಾರ್ಯಕ್ಕೆ ಸಂದ ಗೌರವ ಎಂದು ವೀರೇಂದ್ರ ಹೆಗ್ಗಡೆ ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತ ಇಂದು ಸಿಎಂ ಬೊಮ್ಮಾಯಿ ವೀರೇಂದ್ರ ಹೆಗ್ಗಡೆ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.