‘ಅಮಿತ್ ಶಾ ಭಾರತ ಕಂಡರಿಯದ ಕ್ರೂರಿ’- ಶಾಂತಯುತವಾಗಿ ಮುಗಿದ ಮಂಗ್ಳೂರು ಪ್ರತಿಭಟನೆ

Public TV
4 Min Read
mng muslims caa nrc protest 5

– ಪೊಲೀಸ್ ಆಯುಕ್ತ, ಮೋದಿ, ಶಾ ವಿರುದ್ಧ ವಾಗ್ದಾಳಿ
– ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಪ್ರತಿಭಟಿಸಿದ ಮುಸ್ಲಿಮರು

ಮಂಗಳೂರು: ಭಯ, ಆತಂಕದ ನಡುವೆ ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆದು, ಪೊಲೀಸರು ನಿಟ್ಟುಸಿರುಬಿಟ್ಟಿದ್ದಾರೆ.

ಮಂಗಳೂರು ಹೊರವಲಯದ ಕೊಣ್ಣೂರು ಅಡ್ಯಾರ್ ನಲ್ಲಿ ನಡೆದ ಸಮಾವೇಶದಲ್ಲಿ ಲಕ್ಷಾಂತರ ಮುಸ್ಲಿಮರು ಪಾಲ್ಗೊಂಡಿದ್ದರು. ಎಲ್ಲರ ಕೈಗಳಲ್ಲಿಯೂ ತ್ರಿವರ್ಣ ಧ್ವಜ ರಾರಾಜಿಸ್ತಾ ಇದ್ದವು. ಮಂಗಳೂರು ನಗರ ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ಹಾಗೂ ಗೋಲಿಬಾರ್ ಮಾಡಿದ ಸರ್ಕಲ್ ಇನ್ಸ್‍ಪೆಕ್ಟರ್ ಶಾಂತರಾಮ್ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

mng muslims caa nrc protest 3

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮಾನವಹಕ್ಕು ಹೋರಾಟಗಾರ ಶಿವಸುಂದರ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾರತ ಕಂಡರಿಯದ ಕ್ರೂರಿ. ನನ್ನ ಮನೆ ಕಾಯಲು ನಾನು ಚೌಕಿದಾರ ನೇಮಿಸಿದೆ. ಒಂದು ವರ್ಷದ ಬಳಿಕ ಅವನೇ ನನ್ನ ಮನೆಯ ಪತ್ರ ಕೇಳುತ್ತಿದ್ದಾನೆ ಎಂದು ಸಿಎಎ ಜಾರಿಗೆ ತಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು.

ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‍ಪಿಆರ್) ಸಂಗ್ರಹ ಮಾಡಲು ಬರುವವರು ತಂದೆ-ತಾಯಿ ಮೂಲ ಕೇಳುತ್ತಾರೆ. ಕಾಗದ ಪತ್ರ ಇಲ್ಲ ಅಂದ್ರೆ ನಿಮ್ಮನ್ನು ಜೈಲಿಗೆ ಹಾಕುತ್ತೇವೆ ಎನ್ನುತ್ತಾರೆ ಎಂದು ಶಿವಸುಂದರ್ ಆರೋಪಿಸಿದರು.

mng muslims caa nrc protest 2

ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ 23ನೇ ವಯಸ್ಸಿನಲ್ಲಿ ನೇಣುಕಂಬಕ್ಕೇರಿದರು. ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಖಡ್ಗ ಹಿಡಿಯುತೇವೆ ಎಂದು ಬೆದರಿಸುತ್ತಾರೆ. ಮತ್ತೊಬ್ಬ ಶಾಸಕರು ಈ ದೇಶ ಧರ್ಮಕ್ಷೇತ್ರ ಅಲ್ಲವೆಂದು ಹೇಳುತ್ತಾರೆ. ರಾಮಲೀಲಾ ಮೈದಾನದಲ್ಲಿ 90 ನಿಮಿಷದಲ್ಲಿ 90 ಸುಳ್ಳು ಹೇಳುತ್ತಾರೆ ಎಂದು ಶಿವಸುಂದರ್ ಗುಡುಗಿದರು.

ನಿವೃತ್ತ ಕೇರಳ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಮಾತನಾಡಿ, ಪ್ರಧಾನಿ ಮೋದಿ ಪ್ರಶ್ನೆಗೆ ನಾವು ಎಲ್ಲರೂ ತಾಳ ಸೇರಿಸಿದೇವು. ಹೀಗಾಗಿ ನಮ್ಮನ್ನು ಮೂಕರನ್ನಾಗಿ ಮಾಡುತ್ತಿದ್ದಾರೆ. ಎನ್‌ಆರ್‌ಸಿ ಬಗ್ಗೆ ಪ್ರಶ್ನಿಸಿದರೆ ಪ್ರಧಾನಿ ಮೋದಿ ದೂರ ಸರಿಯುತ್ತಿದ್ದಾರೆ. ನಮ್ಮ ಸಂವಿಧಾನ, ಜಾತ್ಯಾತೀತವನ್ನು ಸಂರಕ್ಷಣೆ ಮಾಡುವ ಹಕ್ಕು ಮುಸ್ಲಿಮರಿಗೆ ಮಾತ್ರ ಇಲ್ಲ. ದೇಶದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

mng muslims caa nrc protest 1

ಮಾನವ ಹಕ್ಕು ಹೋರಾಟಗಾರ ಸುಧೀರ್ ಕುಮಾರ್ ಮಾತನಾಡಿ, ನೋಟ್ ಬ್ಯಾನ್ ಮಾಡುವ ಮೂಲಕ ದೇಶಕ್ಕೆ ಏನು ಲಾಭವಾಯಿತು? ಪ್ರಧಾನಿ ಮೋದಿ ಅವರ ಮಾತು ನಂಬಿ ಜನರು ಮೋಸ ಹೋದರು. ಕಮಿಷನರ್ ಡಾ.ಹರ್ಷಾ ಹಾಗೂ ಪಿಎಸ್‍ಐ ಶ್ಯಾಮಸುಂದರ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಬಿಟ್ಟು ಹೊರಗೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ಟಿಪ್ಪು ಸುಲ್ತಾನ್‍ಗೆ ಜೈಕಾರ ಹಾಕಿದ್ದರು. ಆದರೆ ಈಗ ಬಿಜೆಪಿ ಸೇರಿ ಟಿಪ್ಪು ಮತಾಂಧ ಎನ್ನುತ್ತಿದ್ದಾರೆ. ಸ್ವಾಮಿ ವಿವೇಕಾನಂದ ಅವರನ್ನು ನಾವು ಯೋಗಿ ಎಂದು ಕರೆಯೋಣ. ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರನ್ನ ಯೋಗಿ ಎಂದು ಕರೆಯುವುದು ಬೇಡ. ಇನ್ನುಮುಂದೆ ಸಭೆ ಸಮಾರಂಭ ಆಯೋಜಿಸುವ ಮೂಲಕ ಪ್ರತಿಭಟನೆ ಮಾಡುವುದನ್ನು ಬಿಡೋಣ. ಹಳ್ಳಿ-ಹಳ್ಳಿಗೆ ಹೋಗಿ ಎನ್‌ಆರ್‌ಸಿ-ಸಿಎಎ ವಿರುದ್ಧ ಜಾಗೃತಿ ಮೂಡಿಸೋಣ ಎಂದು ಕರೆ ನೀಡಿದರು.

mng muslims caa nrc protest 4

ರಾಜ್ಯ ಸುನ್ನಿ ಮುಸ್ಲಿಂ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಮಾತನಾಡಿ, ಬ್ರಿಟಿಷರ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಅಜಾದಿ ಹೋರಾಟ ಮಾಡಿ ಸ್ವಾತಂತ್ರ ಪಡೆದುಕೊಂಡಿದ್ದೇವೆ. ನಮ್ಮ ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಸಾರುತ್ತಿದೆ. ಆದರೆ ಕೆಲವರು ಸಂವಿಧಾನವನ್ನ ನಾಶ ಮಾಡಲು ಮುಂದಾಗಿದ್ದಾರೆ. ಸಿಎಎ-ಎನ್‌ಆರ್‌ಸಿ ತರುವ ಮೂಲಕ ಬಿಜೆಪಿ ಸರ್ಕಾರ ನಮ್ಮ ವಿವಿಧತೆ ಏಕತೆಗೆ ಧಕ್ಕೆ ಮಾಡಲು ಮುಂದಾಗಿದೆ ಎಂದು ದೂರಿದರು.

ಮೊದಲ ಸ್ವಾತಂತ್ರ್ಯ ಸಂಗ್ರಾಮ ಆರಂಭಿಸಿದವರೇ ಮುಸ್ಲಿಮರು. ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್ ಪಾಠವನ್ನು ತೆಗೆಯಲು ಹುನ್ನಾರ ನಡೆಸಿದರು. ಆದರೆ ಟಿಪ್ಪು ಪಾಠ ತೆಗೆದರೆ ಭಾರತದ ಇತಿಹಾಸ ಪೂರ್ಣವಾಗುವುದಿಲ್ಲವೆಂದು ಶಿಕ್ಷಣ ತಜ್ಞರು ಹೇಳಿದ ಬಳಿಕ ಕೈ ಬಿಟ್ಟರು. ಅದೇ ರೀತಿ ದೇಶದಿಂದ ಮುಸ್ಲಿಮರನ್ನ ಹೊರಹಾಕಿದರೆ ಭಾರತ ಸಂಪೂರ್ಣ ಆಗುವುದಿಲ್ಲ ಎಂದು ಹೇಳಿದರು.

modi amith sha

ಪಿಎಫ್‍ಐ ರಾಜ್ಯಾಧ್ಯಕ್ಷರಾದ ಮಹ್ಮಮದ್ ಷಾ ಷರಾವರಿ ಮಾತನಾಡಿ, ಆರ್‌ಎಸ್ಎಸ್ ದೇಶದ ಭಯ ಭೀತ ರಾಜಕೀಯ ಮಾಡುತ್ತಿದೆ. ಪ್ರತಿ ಹತ್ತು ವರ್ಷಕ್ಕೆ ಹೊಸ, ಹೊಸ ವಿಷಯಗಳ ಮೂಲಕ ಹೆದರಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಹಾಗೂ ಆರ್‌ಎಸ್ಎಸ್ ಈ ದೇಶ ಮುಸ್ಲಿಂ ಹಾಗೂ ದಲಿತರ ಪೌರತ್ವ ಕಸಿಯಲು ಮುಂದಾಗಿದ್ದಾರೆ. ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇದಿಂದ 4 ಕೋಟಿ ಹಿಂದೂ ಜನರನ್ನು ತರುವ ಸಿದ್ಧತೆ ನಡೆದಿದೆ. ಬಳಿಕ ಇಲ್ಲಿನ ಮುಸ್ಲಿಮರನ್ನ ಹೊರಹಾಕಿ ಅವರ ಮನೆ ಹಾಗೂ ನೌಕರಿಯನ್ನು ಮೂರು ದೇಶಗಳಿಂದ ಬಂದ ಹಿಂದೂಗಳಿಗೆ ನೀಡುತ್ತಾರೆ ಎಂದು ಆರೋಪಿಸಿದರು.

ನಾವು ನಮ್ಮ ಮಕ್ಕಳಿಗೆ ಗುಲಾಮರನ್ನಾಗಿ ಮಾಡಲು ಬಿಡುವುದಿಲ್ಲ. ನಮ್ಮ ದಾಖಲೆಗಳನ್ನು ನೀಡುವುದಿಲ್ಲ. ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಏನು ಮಾಡುತ್ತಾರೆ ಅಂತ ನೋಡೋಣ. ತಮ್ಮ ಆಸನದಲ್ಲಿ ಕೂರುವ ಯಾವುದೇ ಯೋಗ್ಯತೆ ಕಮಿಷನರ್ ಪಿ.ಎಸ್.ಹರ್ಷ ಅವರಿಗೆ ಇಲ್ಲ. ಪೊಲೀಸರಾಗಿ ಅಪರಾಧಗಳಿಗೆ ಬೆಂಬಲ ನೀಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.

MNG HARSHA

ಮಂಗಳೂರಿನಿಂದ ಆಡ್ಯಾರ್‍ವರೆಗೆ ಅಂದ್ರೆ 12 ಕಿಲೋಮೀಟರ್‍ವರೆಗೆ ರಸ್ತೆ ಬ್ಲಾಕ್ ಆಗಿತ್ತು. ಕೇರಳ ಪ್ರತಿಭಟನಾಕಾರರು ನೇತ್ರಾವತಿ ನದಿ ದಂಡೆ ಮೂಲಕ ದೋಣಿಯಲ್ಲಿ ಆಗಮಿಸೋ ಮುನ್ಸೂಚನೆ ಇದ್ದಿದ್ದರಿಂದ ಮುನ್ನೆಚ್ಚರಿಕೆಯಾಗಿ ಬಿಗಿಭದ್ರತೆ ಕೈಗೊಳ್ಳಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *