ಯಮುನಾ ನದಿಯಲ್ಲಿ ವಿಷಕಾರಿ ನೊರೆ – ಜನರಲ್ಲಿ ಆತಂಕ

Public TV
3 Min Read
Yamuna River

ನವದೆಹಲಿ: ಯಮುನಾ ನದಿಯ ಮೇಲ್ಮೈಯಲ್ಲಿ ವಿಷಕಾರಿ ನೊರೆ ತೇಲುತ್ತಿದೆ. ವಾರಾಂತ್ಯದಲ್ಲಿ ಯಮುನಾ ನದಿಯಲ್ಲಿ ಅಮೋನಿಯ ಮಟ್ಟವು 3 ಪಿಪಿಎಂ(ಪಾರ್ಟ್ಸ್ ಪರ್ ಮಿಲಿಯನ್) ಗೆ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ನೀರು ಪೂರೈಕೆಯ ಮೇಲೆ ಪರಿಣಾಮ ಬೀರಿದೆ.

ಛತ್ ಪೂಜೆಯ ಮೊದಲ ದಿನವಾದ ಸೋಮವಾರದಂದು ಹಲವಾರು ಭಕ್ತರು ವಿಷಕಾರಿ ನೊರೆಯಿಂದ ಆವೃತವಾಗಿರುವ ದೆಹಲಿಯ ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿರುವುದು ಕಂಡುಬಂದಿದೆ. ಇದೇನೂ ಮೊದಲನೇ ಬಾರಿಗೆ ಅಲ್ಲ. ಈ ಹಿಂದೆನಿಂದಲೂ ಸಹ ಯಮುನಾ ನದಿಯಲ್ಲಿ ವಿಷಕಾರಿ ನೊರೆಯ ಸಮಸ್ಯೆ ಕಾಡುತ್ತಿದೆ. ಇದನ್ನೂ ಓದಿ: ಮುಂದಿನ 2 ವರ್ಷದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬೆಲೆ ಪೆಟ್ರೋಲ್‌ ವಾಹನದಷ್ಟೇ ಆಗಲಿದೆ: ಗಡ್ಕರಿ

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಈ ವರ್ಷ ಯಮುನಾ ತೀರದಲ್ಲಿ ಛತ್ ಪೂಜೆಯನ್ನು ನಿಷೇಧಿಸಿದ್ದು, ಆದರೆ ಇದು ಬಿಜೆಪಿ ಮತ್ತು ಎಎಪಿ ಟೀಕೆಗೆ ಎಡೆಮಾಡಿಕೊಟ್ಟಿತು. ಆದಾಗ್ಯೂ, ದೆಹಲಿಯ ಯಮುನಾ ತೀರವನ್ನು ಹೊರತುಪಡಿಸಿ “ನಿಗದಿ ಪಡಿಸಿದ ಜಾಗಗಳಲ್ಲಿ” ಛಾತ್ ಆಚರಣೆಗಳನ್ನು ಡಿಡಿಎಂಎ ಅನುಮತಿಸಿದೆ.

ಬಿಹಾರ ಮತ್ತು ಪೂರ್ವ ಉತ್ತರ ಪ್ರದೇಶದ ಜನರು ಚಾತ್ ಪೂಜೆಯನ್ನು ಆಚರಿಸುತ್ತಾರೆ. ಸೂರ್ಯ ದೇವರಿಗೆ ಉಪವಾಸ ಮಾಡಿ ಮೊಣಕಾಲು ಆಳದ ನೀರಿನಲ್ಲಿ ನಿಂತು  ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಆಚರಣೆಗಳು ಮೂರು ದಿನಗಳ ಕಾಲ ನಡೆಯುತ್ತದೆ.

ಈ ವರ್ಷದ ಆರಂಭದಲ್ಲಿ ದೆಹಲಿ ಸರ್ಕಾರವು ಯಮುನಾ ನದಿಗೆ ಸಂಸ್ಕರಿಸದ ಕೊಳಚೆನೀರನ್ನು ಬಿಡುವುದರಿಂದ ನೊರೆಯನ್ನು ಕಡಿಮೆ ಮಾಡಲು ಒಂಬತ್ತು ಅಂಶಗಳ ಕ್ರಿಯಾ ಯೋಜನೆಯನ್ನು ರೂಪಿಸಿತು. ಆದರೆ ಯಮುನಾ ನದಿಯ ಮಾಲಿನ್ಯ ಮರುಕಳಿಸುವ ಮತ್ತು ಸಂಸ್ಕರಿಸದ ಸಮಸ್ಯೆಯ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ, ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ತಮಿಳು ಚಿತ್ರ ತಂಡದ ಯಡವಟ್ಟು – ಮೇಲುಕೋಟೆ ತಂಗಿ ಕೊಳದ ನೀರು ಕಲುಷಿತ

ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಗಾಳಿಯ ಗುಣಮಟ್ಟ ಸ್ವಲ್ಪ ಸುಧಾರಣೆಯಾಗಿದ್ದು, ಇದು ಮಧ್ಯಮ ಮೇಲ್ಮೈ ಗಾಳಿಗೆ ಕಾರಣವೆಂದು ಹೇಳಬಹುದು. ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರು ವಿಷಕಾರಿ ಗಾಳಿಯಿಂದ ಉಸಿರಾಡುತ್ತಿದ್ದಾರೆ. ಕಳೆದ ವಾರದಿಂದ ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟವು ಹದಗೆಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *