ಭೋಪಾಲ್: ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ನಡೆದಿದೆ.
ಭಾನುವಾರ ಮಧ್ಯಾಹ್ನ ಭೋಪಾಲ್ ನ ಬೀದಿಗಳಲ್ಲಿ ಆರೋಪಿಗಳ ಮೆರವಣಿಗೆ ಮಾಡಿದ್ದು, ರಸ್ತೆ ಬದಿ ನಿಂತಿದ್ದ ಜನ ನಾಲ್ವರಿಗೂ ಕಪಾಳಕ್ಕೆ ಬಾರಿಸಿದ್ದಾರೆ. ಮಹಿಳೆಯರ ಮೇಲಿನ ಅಪರಾಧಗಳನ್ನ ತಡೆಗಟ್ಟಲು ಸಿಎಂ ಶಿವರಾಜ್ ಸಿಂಗ್ ಚೌಹಾನ್ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಈ ಅಭ್ಯಾಸ ಹೆಚ್ಚಾಗುತ್ತಿದೆ ಎಂದು ವರದಿಯಾಗಿದೆ.
Advertisement
ಶನಿವಾರದಂದು ಮಹಿಳೆ ಮೇಲೆ ಮಾಜಿ ಪ್ರಿಯಕರ ಹಾಗೂ ಆತನ ಸ್ನೇಹಿತನೊಬ್ಬ ಸೇರಿ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಲಾಗಿದೆ. ಈ ಇಬ್ಬರಿಗೂ ಮತ್ತಿಬ್ಬರು ಸ್ನೇಹಿತರು ಸಹಾಯ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
Advertisement
Advertisement
ಎಲ್ಲಾ ನಾಲ್ವರು ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಅಪಹರಣ ಹಾಗೂ ಇನ್ನಿತರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಭೋಪಾಲ್ ದಕ್ಷಿಣ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಲೋಧಾ ಹೇಳಿದ್ದಾರೆ.
Advertisement
ಮಹಿಳೆಯ ಬಾಯ್‍ಫ್ರೆಂಡ್ ಏನೋ ಮುಖ್ಯವಾದ ವಿಷಯ ತಿಳಿಸಬೇಕೆಂದು ಹೇಳಿ ಆಕೆಗೆ ಶನಿವಾರದಂದು ರೆಸ್ಟೊರೆಂಟ್‍ನಲ್ಲಿ ಭೇಟಿಯಾಗುವಂತೆ ಕರೆದಿದ್ದ. ಮಹಿಳೆ ಅಲ್ಲಿಗೆ ಹೋದಾಗ ಆಕೆಯ ಮೊಬೈಲ್ ಕಸಿದುಕೊಂಡಿದ್ದು, ಫೋನ್ ಬೇಕಾದರೆ ತನ್ನ ಜೊತೆ ಸ್ನೇಹಿತನ ರೂಮಿಗೆ ಬರಬೇಕೆಂದು ಹೇಳಿದ್ದ. ಮಹಿಳೆ ಬಲವಂತವಾಗಿ ಬೈಕ್‍ನಲ್ಲಿ ಆತನೊಂದಿಗೆ ಹೋಗಿದ್ದರು ಎಂದು ಲೋಧಾ ಹೇಳಿದ್ದಾರೆ.
ರೂಮ್ ತಲುಪಿದ ನಂತರ ಮಹಿಳೆಯ ಮಾಜಿ ಪ್ರಿಯಕರನ ಇತರೆ ಮೂವರು ಸ್ನೇಹಿತರು ಅಲ್ಲಿದ್ದರು. ಇಬ್ಬರು ಮಹಿಳೆ ಮೇಲೆ ರೇಪ್ ಮಾಡಿದ್ದು, ಮತ್ತಿಬ್ಬರು ಕಾವಲು ನಿಂತಿದ್ದರು ಎಂದು ಅವರು ತಿಳಿಸಿದ್ದಾರೆ.
ಮಹಿಳೆ ಅವರಿಂದ ತಪ್ಪಿಸಿಕೊಂಡು ಭಾನುವಾರ ಬೆಳಗ್ಗೆ ಪೊಲೀಸರ ಬಳಿ ದೂರು ದಾಖಲಿಸಿದ್ದರು ಎಂದು ಹೇಳಿದ್ದಾರೆ.