Connect with us

Cinema

ಧಾರವಾಡ ಸಾಹಿತ್ಯ ಸಮ್ಮೇಳನದಲ್ಲಿ ನಟಿ ಮಾಳವಿಕ ಅವಿನಾಶ್ ವಿರುದ್ಧ ಆಕ್ರೋಶ

Published

on

ಧಾರವಾಡ: ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಇಂದು ನಟಿ ಮಾಳವಿಕ ಅವಿನಾಶ್ ಅವರು “ವೈಚಾರಿಕತೆ ಮತ್ತು ಅಸಹಿಷ್ಣುತೆ” ವಿಚಾರವಾಗಿ ಗೊಷ್ಠಿ ನಡೆಸಿದ್ದರು. ಈ ವೇಳೆ ಮಾಳವಿಕ ವಿರುದ್ಧ ಆಕ್ರೋಶ ವ್ಯಕ್ತವಾಯಿತು.

ವಿಷಯ ಮಂಡಣೆಯಲ್ಲಿ ಶಬರಿಮಲೆ ಪ್ರಕರಣ, ಪರೇಶ್ ಮೇಸ್ತಾ, ಶರತ್ ಮಡಿವಾಳ ಸಾವು ಸೇರಿದಂತೆ ಹಲವು ವಿಷಯಗಳನ್ನು ನಟಿ ಪ್ರಸ್ತಾಪಿಸಿದ್ದರು. ಹೀಗಾಗಿ ನೆರೆದವರು ಮಾಳವಿಕ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಮಾಳವಿಕ ಏನ್ ಹೇಳಿದ್ರು..?
ವೈಚಾರಿಕತೆ ಮತ್ತು ಅಸಹಿಷ್ಣುತೆ ವಿಚಾರವನ್ನು ಮಂಡಿಸುತ್ತಾ, 2005 ರಿಂದ 2009 ರವರೆಗೆ 24 ರಾಜ್ಯಗಳ ಕೋಮುಗಲಭೆಗಳಲ್ಲಿ ಎಲ್ಲಾ ಮತೀಯರು ಸೇರಿ ಸುಮಾರು 530 ಮಂದಿ ಮಡಿದಿದ್ದಾರೆ. 2037 ಜನ ಗಾಯಗೊಂಡಿದ್ದಾರೆ. ಇದೆಲ್ಲವೂ ಬುದ್ಧಿವಂತರಿಗೆ ಗೊತ್ತಿರಲ್ವ ಅನ್ನೋದು ನನ್ನ ಪ್ರಶ್ನೆಯಾಗಿದೆ ಅಂದ್ರು. ಇದನ್ನೂ ಓದಿ: ಚಂಪಾ ಮೊಮ್ಮಕ್ಕಳು ಎಲ್ಲಿ ಓದುತ್ತಿದ್ದಾರೆ: ಸಿಎಂ ಎಚ್‍ಡಿಕೆ

ಧರ್ಮದೇಟು ಎಂಬ ಪದ ಬಳಕೆ ನಮ್ಮಲ್ಲಿ ತೀರಾ ಸಾಮಾನ್ಯವಾಗಿದೆ. ಒಂದು ಗುಂಪು ಯಾವುದಾದರೂ ಕೃತ್ಯವನ್ನು ನಡೆಸಿದ್ರೆ ಅದನ್ನು ಧರ್ಮದೇಟು ಅನ್ನಬಹುದು. ಇದು ನ್ಯಾಯಕ್ಕೆ ಬಾಹಿರವಾಗಿಯೇ ಇರುತ್ತದೆ. ಇಂತದ್ದು ನಮ್ಮ ಸಮಾಜದಲ್ಲಿ ನಡೆದಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಅದೆಲ್ಲದಕ್ಕೂ ಕೇಂದ್ರ ಸರ್ಕಾರವೇ ಕಾರಣ ಅಂತ ಹೇಳಲಾಗುತ್ತದೆ. ಕೇಂದ್ರ ಸರ್ಕಾರ ಪ್ರತಿಪಾದಿಸುತ್ತಿರುವ ಅಸಹಿಷ್ಣುತೆಯೇ ಕಾರವಾಣವಾದ್ರೆ, ಇತ್ತೀಚೆಗೆ ಕೇರಳದ ಪಾಲಕ್ಕಾಡ್ ನಲ್ಲಿ ಶಬರಿಮಲೆ ಪ್ರತಿಭಟನಾಕಾರರ ಮೇಲೆ ಸಿಪಿಐಎಂ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಅದರಲ್ಲಿ ಓರ್ವ ಸಾವನ್ನಪ್ಪುತ್ತಾರೆ.

ಕರ್ನಾಟಕದಲ್ಲಿ ನೋಡೋದಾದ್ರೆ 2017ರಲ್ಲಿ ಪರೇಶ್ ಮೇಸ್ತಾ, ಮತೀಯ ಕಾರಣಕ್ಕೆ ಅಪಹರಿಸಿ ದಾರುಣವಾಗಿ ಅವನನ್ನು ಹತ್ಯೆಗೈದಿದ್ದಾರೆ. ಅದು ಕೂಡ ಒಂದು ಗುಂಪು ಮಾಡಿದ ಕೆಲಸವಾಗಿದೆ. ಶರತ್ ಮಡಿವಾಳನನ್ನು ನೇರವಾಗಿ ಎಸ್‍ಡಿಪಿಐ ಅಂತ ಹೇಳಿಕೊಂಡಿರುವ ಗುಂಪೇ ಕೊಚ್ಚಿ ಹಾಕಿತ್ತು. ರುದ್ರೇಶ್ ನನ್ನು ಬೆಂಗಳೂರಿನಲ್ಲಿ ಹಾಡುಹಗಲೇ ಎಸ್‍ಡಿಪಿಐ ಅವರು ಕೊಂದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಅಂತ ಹೇಳುತ್ತಿರುವಾಗಲೇ ಮಾಳವಿಕ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ಇದನ್ನೂ ಓದಿ: ಕನ್ನಡ ಸಮ್ಮೇಳನದಲ್ಲಿ ಚಂಪಾ ಹೇಳಿಕೆಗೆ ಸಿಎಂ ಗರಂ!

ಇದರಿಂದ ಸಿಟ್ಟಿಗೆದ್ದ ಮಾಳವಿಕ ಅವರು, ನನ್ನ ಅಭಿವ್ಯಕ್ತಿಗೆ ಸ್ವಾತಂತ್ರ್ಯಕ್ಕೆ ಮನ್ನಣೆ ಇಲ್ಲವಾ. ನಾನು ಕೂಡ ಭಾರತೀಯ ಪ್ರಜೆ. ಹೀಗಾಗಿ ನನ್ನ ವಿಚಾರವನ್ನು ಮಂಡಿಸೋದಿಕೆ ನನಗೆ ಸ್ವಾತಂತ್ರ್ಯ ಇಲ್ಲ ಅಂದ್ರೆ ನೀವು ಅಸಹಿಷ್ಣುವಾದ್ರಿ ಅಲ್ವ. ನನ್ನ ಮಾತುಗಾರಿಕೆಯನ್ನು ಕೇಳುವ ತಾಳ್ಮೆ ಇಲ್ಲ ಎಂದಾದರೆ ಇದೇ ದೊಡ್ಡ ಅಸಹಿಷ್ಣುತೆ ಅಂತ ಹೇಳಿದ ಅವರು, ನಾನು ನನ್ನ ಮಾತನ್ನು ನಿಲ್ಲಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿ ಭಾಷಣ ಮೊಟಕುಗೊಳಿಸಿದ್ರು.

ಮಾಳವಿಕ ಮಾತನಾಡಬೇಡಿ ಎಂದು ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಪೊಲೀಸರು ಮಧ್ಯಪ್ರವೇಶ ಮಾಡಿದ್ರು. ಗೋಷ್ಠಿಯಲ್ಲಿ ಮಾತನಾಡುವುದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಹಕ್ಕು ಅಂತ ಮಾಳವಿಕಾ ಹೇಳಿದ್ರೆ ಅಭಿವ್ಯಕ್ತಿ ಹಕ್ಕನ್ನ ಹತ್ತಿಕ್ಕಬೇಡಿ ಎಂದು ಇನ್ನೊಂದು ಗುಂಪು ಒತ್ತಾಯ ಮಾಡಿತು. ಒಟ್ಟಿನಲ್ಲಿ ಸಮ್ಮೇಳನದ ಗೋಷ್ಟಿಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಇದನ್ನೂ ಓದಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದಕ್ಕೆ ಸಂತೋಷವು ಇದೆ, ಖೇದವೂ ಆಗ್ತಿದೆ: ಚಂದ್ರಶೇಖರ್ ಕಂಬಾರ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *