Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಷ್ಟ್ರವನ್ನು ಒಗ್ಗೂಡಿಸಿದ್ದರಿಂದ ಜನರು ವಂದೇ ಮಾತರಂಗೆ ಋಣಿಯಾಗಿರಬೇಕು: ಮೋದಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ರಾಷ್ಟ್ರವನ್ನು ಒಗ್ಗೂಡಿಸಿದ್ದರಿಂದ ಜನರು ವಂದೇ ಮಾತರಂಗೆ ಋಣಿಯಾಗಿರಬೇಕು: ಮೋದಿ

Latest

ರಾಷ್ಟ್ರವನ್ನು ಒಗ್ಗೂಡಿಸಿದ್ದರಿಂದ ಜನರು ವಂದೇ ಮಾತರಂಗೆ ಋಣಿಯಾಗಿರಬೇಕು: ಮೋದಿ

Public TV
Last updated: December 8, 2025 6:43 pm
Public TV
Share
4 Min Read
PM Modi 1
SHARE

ನವದೆಹಲಿ: ರಾಷ್ಟ್ರವನ್ನು ಒಗ್ಗೂಡಿಸಿದ್ದರಿಂದ ಜನರು ವಂದೇ ಮಾತರಂಗೆ ಋಣಿಯಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಿಳಿಸಿದ್ದಾರೆ.

ವಂದೇ ಮಾತರಂ ಗೀತೆಗೆ 150 ವರ್ಷ ಪೂರ್ಣಗೊಂಡ ಹಿನ್ನೆಲೆ ಲೋಕಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆದಿದೆ. ಚರ್ಚೆ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ವಂದೇ ಮಾತರಂ ಗೀತೆಗೆ ಮಹತ್ವ ಉಲ್ಲೇಖಿಸುತ್ತಾ ಇಂತಹ ದೇಶ ಪ್ರೇಮಗೀತೆಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ಆದರೆ ವಂದೇ ಮಾತರಂ ರಾಷ್ಟ್ರವನ್ನು ಒಗ್ಗೂಡಿಸಿದ್ದರಿಂದ ಜನರು ಅದಕ್ಕೆ ಋಣಿಯಾಗಿರಬೇಕು. ಇಲ್ಲಿ ಯಾವುದೇ ನಾಯಕತ್ವ ಮತ್ತು ವಿರೋಧವಿಲ್ಲ. ವಂದೇ ಮಾತರಂನ ಋಣವನ್ನು ಸಾಮೂಹಿಕವಾಗಿ ಶ್ಲಾಘಿಸಲು ಮತ್ತು ಸ್ವೀಕರಿಸಲು ನಾವು ಇಲ್ಲಿದ್ದೇವೆ. ಈ ಹಾಡಿನ ಕಾರಣದಿಂದಾಗಿ ನಾವೆಲ್ಲರೂ ಇಲ್ಲಿದ್ದೇವೆ. ವಂದೇ ಮಾತರಂನ ಋಣವನ್ನು ನಾವೆಲ್ಲರೂ ಅಂಗೀಕರಿಸುವ ಪವಿತ್ರ ಸಂದರ್ಭ ಇದು. ಇದು ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ರಾಷ್ಟ್ರವನ್ನು ಒಂದುಗೂಡಿಸಿತು. ಮತ್ತೆ ಒಂದಾಗಲು ಮತ್ತು ಎಲ್ಲರೊಂದಿಗೆ ಒಟ್ಟಾಗಿ ಚಲಿಸುವ ಸಮಯ ಬಂದಿದೆ. ಈ ಹಾಡು ನಮ್ಮ ಸ್ವಾತಂತ್ರ‍್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು ನಮಗೆ ಸ್ಫೂರ್ತಿ ಮತ್ತು ಶಕ್ತಿಯನ್ನು ನೀಡಬೇಕು. 2047ರ ವೇಳೆಗೆ ನಮ್ಮ ರಾಷ್ಟ್ರವನ್ನು ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದವರನ್ನಾಗಿ ಮಾಡುವ ಸಂಕಲ್ಪವನ್ನು ನಾವು ಪುನರುಚ್ಚರಿಸಬೇಕಾಗಿದೆ ಎಂದು ಹೇಳಿದರು.ಇದನ್ನೂ ಓದಿ: ಮುಸ್ಲಿಮರ ತುಷ್ಟೀಕರಣಕ್ಕಾಗಿ ಕಾಂಗ್ರೆಸ್‌ ವಂದೇ ಮಾತರಂ ಹಾಡನ್ನು ಒಡೆದು ತುಂಡು ಮಾಡಿತು: ನರೇಂದ್ರ ಮೋದಿ

ಭಾರತದ ಸ್ವಾತಂತ್ರ‍್ಯ ಹೋರಾಟದ ಸಮಯದಲ್ಲಿ ವಂದೇ ಮಾತರಂ ಒಂದು ಮಂತ್ರವಾಗಿದ್ದು, ಅದು ತ್ಯಾಗಕ್ಕೆ ದಾರಿ ತೋರಿಸಿತು. ವಂದೇ ಮಾತರಂ ಒಂದು ಮಂತ್ರ, ಘೋಷಣೆಯಾಗಿದ್ದು, ಅದು ಸ್ವಾತಂತ್ರ‍್ಯ ಚಳವಳಿಗೆ ಶಕ್ತಿ, ಸ್ಫೂರ್ತಿ ಮತ್ತು ತ್ಯಾಗ ಮತ್ತು ಪ್ರಾಯಶ್ಚಿತ್ತದ ಮಾರ್ಗವನ್ನು ತೋರಿಸಿತು. ವಂದೇ ಮಾತರಂನ 150 ವರ್ಷಗಳಿಗೆ ನಾವು ಸಾಕ್ಷಿಯಾಗುತ್ತಿರುವುದು ಹೆಮ್ಮೆಯ ವಿಷಯ. ಇದು ಒಂದು ಐತಿಹಾಸಿಕ ಕ್ಷಣ ಎಂದರು.

ದೇಶ ಇತ್ತೀಚೆಗೆ ಅನೇಕ ಐತಿಹಾಸಿಕ ಘಟನೆಗಳನ್ನು ಮೈಲಿಗಲ್ಲುಗಳಾಗಿ ಆಚರಿಸಲಾಗುತ್ತಿರುವ ಅವಧಿ ಇದು. ನಾವು ಇತ್ತೀಚೆಗೆ ನಮ್ಮ ಸಂವಿಧಾನದ 75 ವರ್ಷಗಳನ್ನು ಆಚರಿಸಿದ್ದೇವೆ. ದೇಶವು ಸರ್ದಾರ್ ಪಟೇಲ್ ಮತ್ತು ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದೆ. ನಾವು ಗುರು ತೇಜ್ ಬಹದ್ದೂರ್ ಅವರ 350ನೇ ಹುತಾತ್ಮ ದಿನವನ್ನು ಸಹ ಆಚರಿಸುತ್ತಿದ್ದೇವೆ. ಈಗ ನಾವು ವಂದೇ ಮಾತರಂನ 150 ವರ್ಷಗಳನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು.

1905ರಲ್ಲಿ ಬ್ರಿಟಿಷರು ಬಂಗಾಳವನ್ನು ವಿಭಜಿಸಿದರು ಎಂದ ಪ್ರಧಾನಿ ಮೋದಿ, ಆದರೆ ಅಂತಹ ಸಮಯದಲ್ಲೂ ವಂದೇ ಮಾತರಂ ಬಂಡೆಯಂತೆ ನಿಂತು ಏಕತೆಗೆ ಪ್ರೇರಣೆ ನೀಡಿತು. ಬ್ರಿಟಿಷರು ಒಡೆದು ಆಳುವ ನೀತಿಯನ್ನು ಅಳವಡಿಸಿಕೊಂಡಾಗ ಬಂಗಾಳದ ಬೌದ್ಧಿಕ ಪರಾಕ್ರಮವು ಆ ಬಿಕ್ಕಟ್ಟಿನ ಮೂಲಕ ರಾಷ್ಟ್ರವನ್ನು ಮುನ್ನಡೆಸಿತು. 1857ರ ನಂತರ ಭಾರತವನ್ನು ನಿಯಂತ್ರಿಸುವುದು ಕಷ್ಟ ಎಂದು ಬ್ರಿಟಿಷರು ಅರ್ಥಮಾಡಿಕೊಂಡರು. ಭಾರತವನ್ನು ವಿಭಜಿಸುವ ಮತ್ತು ಜನರನ್ನು ಪರಸ್ಪರ ಹೋರಾಡುವಂತೆ ಮಾಡುವ ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಕಷ್ಟ ಎಂದು ಅವರಿಗೆ ತಿಳಿದಿತ್ತು, ಆದ್ದರಿಂದ ಅವರು ಬಂಗಾಳವನ್ನು ತಮ್ಮ ಪ್ರಾಯೋಗಿಕ ಕೇಂದ್ರವನ್ನಾಗಿ ಮಾಡಿಕೊಂಡು ಒಡೆದು ಆಳುವ ವಿಧಾನವನ್ನು ಆರಿಸಿಕೊಂಡರು. ಬಂಗಾಳದ ಬೌದ್ಧಿಕ ಶಕ್ತಿ ದೇಶವನ್ನು ಮುನ್ನಡೆಸುತ್ತಿದ್ದ ದಿನಗಳು ಅವು ಎಂದು ಹೇಳಿದರು.

ವಂದೇ ಮಾತರಂ ವಿಷಯದಲ್ಲಿ ಕಾಂಗ್ರೆಸ್ ರಾಜಿ ಮಾಡಿಕೊಂಡಿದ್ದು ದೇಶಕ್ಕೆ ದುರದೃಷ್ಟಕರ:

ಮುಸ್ಲಿಂ ಲೀಗ್‌ಗೆ ತಲೆಬಾಗಿ ವಂದೇ ಮಾತರಂ ಅನ್ನು ವಿಭಜಿಸಲು ನಿರ್ಧರಿಸಿದರು. ವಂದೇ ಮಾತರಂ 50 ವರ್ಷಗಳನ್ನು ಪೂರೈಸಿದಾಗ, ಭಾರತವು ಬ್ರಿಟಿಷ್ ಆಳ್ವಿಕೆಯಲ್ಲಿತ್ತು. ವಂದೇ ಮಾತರಂ 100 ವರ್ಷಗಳನ್ನು ಪೂರೈಸಿದಾಗ, ಭಾರತವು ತುರ್ತು ಪರಿಸ್ಥಿತಿಯ ಹಿಡಿತದಲ್ಲಿತ್ತು. ಆ ಸಮಯದಲ್ಲಿ, ದೇಶಭಕ್ತರನ್ನು ಬಂಧಿಸಲಾಯಿತು. ನಮ್ಮ ಸ್ವಾತಂತ್ರ‍್ಯ ಚಳವಳಿಗೆ ಸ್ಫೂರ್ತಿ ನೀಡಿದ ಹಾಡು, ದುರದೃಷ್ಟವಶಾತ್, ಭಾರತವು ಕರಾಳ ಅವಧಿಯನ್ನು ವೀಕ್ಷಿಸುತ್ತಿತ್ತು ಎಂದರು.

ಕಾಂಗ್ರೆಸ್ ವಿರುದ್ಧ ಟೀಕೆ ಮುಂದುವರಿಸಿದ ಮೋದಿ, ನೆಹರೂ ಅವರ ಬಗ್ಗೆಯೂ ಪ್ರಸ್ತಾಪ ಮಾಡಿದರು. ರಾಷ್ಟ್ರೀಯ ಗೀತೆ ವಂದೇ ಮಾತರಂಗೆ ಅನ್ಯಾಯ ಆಗಿದೆ. ಕಾಂಗ್ರೆಸ್ ಪಕ್ಷವು ರಾಷ್ಟ್ರಗೀತೆಯ ವಿಷಯದಲ್ಲಿ ರಾಜಿ ಮಾಡಿಕೊಂಡಿದೆ ಮತ್ತು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಇದನ್ನು ಪ್ರಚಾರ ಮಾಡುವುದು ಮುಸ್ಲಿಮರನ್ನು ಕೆರಳಿಸಬಹುದು. ನೆಹರು ಸುಭಾಷ್ ಚಂದ್ರ ಬೋಸ್‌ಗೆ ಆಕ್ಷೇಪ ವ್ಯಕ್ತಪಡಿಸಿ, ಐದು ದಿನಗಳಲ್ಲ ಮುಸ್ಲಿಂ ಲೀಗ್ ಒತ್ತಡಕ್ಕೆ ಮಣಿದು ಗೀತೆಯನ್ನು ತುಂಡು ಮಾಡಿತು ಎಂದು ಆಕ್ರೋಶ ಹೊರಹಾಕಿದರು.

ವಂದೇ ಮಾತರಂ ವಿರುದ್ಧ ಮುಸ್ಲಿಂ ಲೀಗ್ ನೆಹರು ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿತು. ಮೊಹಮ್ಮದ್ ಅಲಿ ಜಿನ್ನಾ ಅದರ ವಿರುದ್ಧ ಘೋಷಣೆಗಳನ್ನು ಕೂಗಿದರು. ಆಗಿನ ಕಾಂಗ್ರೆಸ್ ಮುಖ್ಯಸ್ಥ ಜವಾಹರಲಾಲ್ ನೆಹರು ಜಿನ್ನಾ ಹೇಳಿಕೆಗಳನ್ನು ಖಂಡಿಸಲು ಹೋಗಲಿಲ್ಲ. ವಂದೇ ಮಾತರಂ ಬಗ್ಗೆ ತಮ್ಮ ಮತ್ತು ಪಕ್ಷದ ನಿಷ್ಠೆಯನ್ನು ವ್ಯಕ್ತಪಡಿಸುವ ಬದಲು ಜಿನ್ನಾ ವಿರೋಧಿಸಿದ ಕೇವಲ ಐದು ದಿನಗಳ ನಂತರ ವಂದೇ ಮಾತರಂ ಪರಿಶೀಲಿಸಲು ಆರಂಭಿಸಿದರು. ಜಿನ್ನಾ ವಂದೇ ಮಾತರಂಗೆ ವಿರೋಧ ವ್ಯಕ್ತಪಡಿಸಿದ ನಂತರ ಪಂಡಿತ್ ಜವಾಹರಲಾಲ್ ನೆಹರು ಅವರು ಸುಭಾಷ್ ಚಂದ್ರ ಬೋಸ್ ಅವರಿಗೆ ಪತ್ರ ಬರೆದು, ವಂದೇ ಮಾತರಂನ ಹಿನ್ನೆಲೆಯನ್ನು ತಾವು ಓದಿರುವುದಾಗಿ ಮತ್ತು ಅದು ಮುಸ್ಲಿಮರನ್ನು ಕೆರಳಿಸಬಹುದು ಮತ್ತು ಕಿರಿಕಿರಿಯಾಗಬಹುದು ಎಂದು ಭಾವಿಸಿರುವುದಾಗಿ ಹೇಳಿದರು. ವಂದೇ ಮಾತರಂ ಪರಿಶೀಲನೆಗೆ ಒಳಪಡಿಸಿದ ನಂತರ ದೇಶದ ದುರ್ಭಾಗ್ಯ ಎಂಬಂತೆ ಕಾಂಗ್ರೆಸ್ ಮುಸ್ಲಿಂ ಲೀಗ್ ಒತ್ತಡಕ್ಕೆ ತಲೆಬಾಗಿ ಹಾಡನ್ನು ಕತ್ತರಿಸಿತು. ಕಾಂಗ್ರೆಸ್ ತುಷ್ಟೀಕರಣದ ಒತ್ತಡದಲ್ಲಿ ವಂದೇ ಮಾತರಂ ಅನ್ನು ವಿಭಜಿಸಿತು ಎಂದು ಕಿಡಿಕಾರಿದರು.ಇದನ್ನೂ ಓದಿ: ದೇಶದಲ್ಲಿ ಹೊಸ ವಿಮಾನಯಾನ ಕಂಪನಿ ಆರಂಭಿಸಲು ಬೆಸ್ಟ್‌ ಟೈಂ : ರಾಮ್ ಮೋಹನ್ ನಾಯ್ಡು

TAGGED:lok sabhanarendra modiPM Modivande mataramಪ್ರಧಾನಿ ನರೇಂದ್ರ ಮೋದಿಲೋಕಸಭೆವಂದೇ ಮಾತರಂ
Share This Article
Facebook Whatsapp Whatsapp Telegram

Cinema news

BBK12 Kavya Shaiva congratulates Bigg Boss winner Gilli Nata
ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ – ಗಿಲ್ಲಿಯನ್ನು ಅಭಿನಂದಿಸಿದ ಕಾವ್ಯ
Cinema Latest Main Post TV Shows
AR Rahman 2
ರೆಹಮಾನ್ ಕೋಮುರಾಗ – ಪುತ್ರಿಯರ ಬೆಂಬಲ
Cinema Latest Top Stories
ashwini gowda gilli nata
ಗಿಲ್ಲಿ ನಿಜವಾದ ಬಡವ ಅಲ್ಲ, ಬಡವನ ಥರ ಗೆಟಪ್‌ ಹಾಕ್ಕೊಂಡು ಗೆದ್ದಿದ್ದಾರೆ: ಅಶ್ವಿನಿ ಗೌಡ
Cinema Latest Main Post TV Shows
ashwini gowda 1
ನಾನು ವಿನ್ನರ್‌ ಆಗುವ ನಿರೀಕ್ಷೆ ಹೆಚ್ಚಿತ್ತು: 2ನೇ ರನ್ನರ್‌ ಅಪ್‌ ಅಶ್ವಿನಿ ಗೌಡ ರಿಯಾಕ್ಷನ್‌
Cinema Latest Main Post TV Shows

You Might Also Like

M.B. Patil 1
Bengaluru City

ದಾವೋಸ್‌ ಸಮಾವೇಶ | ಕೋಕಾ – ಕೋಲಾದ 25,760 ಕೋಟಿ ಹೂಡಿಕೆಯ ಬಹುಪಾಲು ರಾಜ್ಯಕ್ಕೆ ಸೆಳೆಯಲು ಎಂ.ಬಿ. ಪಾಟೀಲ್ ಯತ್ನ‌

Public TV
By Public TV
5 minutes ago
Bidar Crime
Bidar

ದಾರಿ ಬಿಡದಿದ್ದಕ್ಕೆ ಬಸ್ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ

Public TV
By Public TV
17 minutes ago
Jaggesh
Bengaluru City

ರಾಯರನ್ನ ಅಪಮಾನ ಮಾಡಿದವರು ಉದ್ಧಾರ ಆದ ಇತಿಹಾಸವಿಲ್ಲ – ಸಿಎಂ ನಡೆಗೆ ಜಗ್ಗೇಶ್ ಖಂಡನೆ

Public TV
By Public TV
59 minutes ago
Rajasthan Photographer Acid Attack
Crime

ಅಪರಿಚಿತರೊಂದಿಗೆ ಮಾತಾಡಲ್ಲ ಎಂದಿದ್ದಕೆ ಬಾಲಕಿ ಮೇಲೆ ಆಸಿಡ್ ದಾಳಿ – ಫೋಟೋಗ್ರಾಫರ್ ಅರೆಸ್ಟ್

Public TV
By Public TV
2 hours ago
Nitin Nabin 1
Latest

ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕಾರ ಸ್ವೀಕಾರ

Public TV
By Public TV
2 hours ago
Ranya Rao Father
Bengaluru City

ರನ್ಯಾರಾವ್ ಗ್ಲೋಲ್ಡ್ ಸ್ಮಗ್ಲಿಂಗ್ ಕೇಸ್ – ವಿಚಾರಣೆಗೆ ಹಾಜರಾಗುವಂತೆ ಡಿಜಿಪಿ ರಾಮಚಂದ್ರರಾವ್‌ಗೆ ನೋಟಿಸ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?