ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ವೈರಸ್ ಕೇಸ್ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಜನರು ಬೆಚ್ಚಿಬಿದ್ದಿದ್ದಾರೆ. ಪರಿಣಾಮ ಅಕ್ಟೋಬರ್, ನವೆಂಬರ್‌ಗಿಂತ ಡಿಸೆಂಬರ್ ನಲ್ಲಿ ಲಸಿಕೆ ಪ್ರಮಾಣ ಏರಿಕೆಯಾಗಿದೆ.
ವ್ಯಾಕ್ಸಿನೇಷನ್ ಕುರಿತು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಅಕ್ಟೋಬರ್, ನವೆಂಬರ್ ಗಿಂತ ಡಿಸೆಂಬರ್ ನಲ್ಲಿ ಹೆಚ್ಚಿದ ಜನರು ವ್ಯಾಕ್ಸಿನೇಷನ್ ಪಡೆದುಕೊಳ್ಳುತ್ತಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಒಂದು ಕೋಟಿಗೂ ಅಧಿಕ ಡೋಸ್ ವ್ಯಾಕ್ಸಿನ್ ಹಾಕಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: 14 ತಿಂಗಳ ನಂತರ ಭೇಟಿ – ಪಾಲಕನನ್ನು ಸುತ್ತುವರೆದು ಸೊಂಡಿಲಿನಿಂದ ಅಪ್ಪಿಕೊಂಡ ಆನೆಗಳು
Advertisement
Advertisement
ಆರೋಗ್ಯ ಇಲಾಖೆಯು ಪ್ರಕಟಿಸಿದ ವಿವರಣೆಯಲ್ಲಿ, ಅಕ್ಟೋಬರ್ ತಿಂಗಳಲ್ಲಿ 84,75,785 ಡೋಸ್ ವ್ಯಾಕ್ಸಿನೇಶನ್ ಆಗಿದ್ದು, ನವೆಂಬರ್ ತಿಂಗಳಲ್ಲಿ 91,15,528 ಡೋಸ್ ವ್ಯಾಕ್ಸಿನೇಶನ್ ಆಗಿದೆ. ಆದರೆ ಈ ತಿಂಗಳು ಅಂದರೆ ಡಿಸೆಂಬರ್‌ನಲ್ಲಿ ಬರೋಬ್ಬರಿ 1,01,57,732 ಡೋಸ್ ವ್ಯಾಕ್ಸಿನ್ ಹಾಕಲಾಗಿದೆ ಎಂದು ತಿಳಿಸಿದೆ.
Advertisement
Advertisement
ಕೊರೊನಾ ರೂಪಾಂತರಿ ಓಮಿಕ್ರಾನ್ ವೈರಸ್ ರಾಜ್ಯದಲ್ಲಿ ಪತ್ತೆಯಾಗ್ತಿದ್ದಂತೆ ಜನರು ವ್ಯಾಕ್ಸಿನ್ ಗೆ ಮುಗಿಬಿದ್ದಿದ್ರು. ಹೀಗಾಗಿ ಹೆಚ್ಚಿನ ಸಂಖ್ಯೆಯ ಜನ ಲಸಿಕೆಯನ್ನು ಪಡೆಯುತ್ತಿದ್ದಾರೆ.