ಬೆಂಗಳೂರು: ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ `ಮದ್ರಾಸ್ ಐ’ (Madras Eye) ಈ ಬಾರಿ ಅವಧಿಗೂ ಮುನ್ನ ಮಳೆಗಾಲದಲ್ಲೇ ಎಂಟ್ರಿ ಕೊಟ್ಟು ರಾಜ್ಯದ ಜನರ ಕಣ್ಣು ಕೆಂಪಗಾಗಿಸುತ್ತಿದೆ.
ಮದ್ರಾಸ್ ಐ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಮಕ್ಕಳೇ ಈ ವೈರಾಣುವಿನ ಟಾರ್ಗೆಟ್ ಎಂದು ಹೇಳಲಾಗಿದೆ. ಪ್ರತಿದಿನ 60 ರಿಂದ 80 ಕೇಸ್‌ಗಳು ರಾಜ್ಯದಲ್ಲಿ ದಾಖಲಾಗುತ್ತಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ. ಇದನ್ನೂ ಓದಿ: ವೈದ್ಯಕೀಯ, ಎಂಜಿನಿಯರಿಂಗ್ ಸೇರಿ ಎಲ್ಲಾ ಕೋರ್ಸ್‌ಗಳಿಗೂ ಒಟ್ಟಿಗೆ ಸಿಇಟಿ ಸೀಟು ಹಂಚಿಕೆ – ಹೊಸ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ?
Advertisement
Advertisement
ಕಂಜಕ್ಟಿವೈಟಿಸ್ (Conjunctivitis) ಎಂದು ಕರೆಯಲಾಗುವ ಮದ್ರಾಸ್ ಐ ಅಥವಾ `ಕಣ್ಣು’ ವೈರಾಣುಗಳಿಂದ (Eye Flu) ಹರಡುವ ಕಣ್ಣಿನ ಸಮಸ್ಯೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಅಥವಾ ಚಳಿ ವಾತಾವರಣದಲ್ಲಿ ಹುಟ್ಟಿಕೊಳ್ಳುವ ವೈರಾಣುಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮ ಉಂಟು ಮಾಡುತ್ತವೆ. ಜುಲೈ ಆರಂಭದಿಂದಲೂ ರಾಜ್ಯಾದ್ಯಂತ ಮಳೆ ಸುರಿಯುತ್ತಿದ್ದು, ಸೂರ್ಯನ ಕಿರಣಗಳ ದರ್ಶನ ಕಡಿಮೆಯಾಗಿದೆ. ಇದರ ಪರಿಣಾಮ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ, ಅವಧಿಗೂ ಮೊದಲೇ ಮದ್ರಾಸ್ ಐ ವೈರಾಣು ಎಂಟ್ರಿ ಕೊಟ್ಟಿದೆ. ತಮಿಳುನಾಡಿನಲ್ಲೂ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಇದೀಗ ರಾಜ್ಯಕ್ಕೆ ಎಂಟ್ರಿ ಕೊಟ್ಟಿದೆ.
Advertisement
Advertisement
ಮದ್ರಾಸ್ ಐ ರೋಗ ಲಕ್ಷಣಗಳೇನು?
ಕಣ್ಣು ವಿಪರೀತ ಕೆಂಪಾಗುವುದು, ದೃಷ್ಟಿ ಅಸ್ಪಷ್ಟವಾಗಿ ಕಾಣುವುದು, ತೀರ ಜ್ವರ ಹಾಗೂ ಮೈ-ಕೈ ನೋವು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣಗಳಾಗಿವೆ. ಹೆಚ್ಚಾಗಿ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ಕಳೆದ ವರ್ಷಕ್ಕಿಂತಲೂ ಈ ವರ್ಷ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ವಯಸ್ಕರಿಗಿಂದ ಮಕ್ಕಳಲ್ಲೇ ಹೆಚ್ಚಾಗಿ ರೋಗ ಪತ್ತೆಯಾಗುತ್ತಿದ್ದು, ಪೋಷಕರು ಎಚ್ಚರ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ವರುಣಾರ್ಭಟ – ಉಕ್ಕಿ ಹರಿದ ಕಾವೇರಿ ನದಿ; ಬಡಾವಣೆ ಜಲಾವೃತ
Web Stories