ಮಂಡ್ಯ: ರಸ್ತೆಯಲ್ಲಿ ಎಂತಹ ಬೆಲೆ ಬಾಳುವ ವಸ್ತು ಬಿದ್ದಿದ್ದರೂ, ಜನ ಅದನ್ನು ಎತ್ತಿಕೊಳ್ಳಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ರಸ್ತೆಯಲ್ಲಿ ಅನುಮಾನಸ್ಪದವಾಗಿ ಬಿದ್ದಿದ್ದ ದ್ರಾಕ್ಷಿ ಗೊಂಚಲನ್ನು ಬಾಚಿಕೊಳ್ಳಲು ನಾ ಮುಂದು ತಾ ಮುಂದು ಎಂದು ಜನ ಮುಗಿ ಬಿದ್ದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಮಂಡ್ಯದ ವಿಸಿ ಫಾರ್ಮ್ ಗೇಟ್ ಬಳಿ ಬಿದ್ದಿದ್ದ ದ್ರಾಕ್ಷಿ ಗೊಂಚಲನ್ನು ಹ್ಯಾಂಡ್ ಕವರ್ ಹಾಗೂ ಚೀಲದಲ್ಲಿ ಜನರು ತಾ ಮುಂದು ನಾ ಮುಂದು ಎಂದು ಬಾಚಿಕೊಂಡರು. ವಿಸಿ ಫಾರ್ಮ್ ಗೇಟ್ ಬಳಿ ಯಾರೋ ಇದಕ್ಕಿದ್ದ ಹಾಗೆ ಕ್ಯಾಂಟರ್ ವಾಹನದಲ್ಲಿ ಬಂದು ಸುಮಾರು 100ಕ್ಕೂ ಹೆಚ್ಚು ಕೆಜಿ ದ್ರಾಕ್ಷಿಯನ್ನು ಸುರಿದು ಹೋಗಿದ್ದಾರೆ. ದ್ರಾಕ್ಷಿ ಸುರಿಯುತ್ತಿದ್ದಂತೆ ಜನರು, ಆತ ಯಾಕೆ ಸುರಿಯುತ್ತಿದ್ದಾನೆ ಎಂದು ಕೇಳದೇ ನಾ ಮುಂದು ತಾ ಮುಂದು ಎಂದು ಬಾಚಿಕೊಳ್ಳಲು ಮುಂದಾಗಿದ್ದಾರೆ.
ಸದ್ಯ ದ್ರಾಕ್ಷಿಯ ಬೆಲೆ ಕೆಜಿಗೆ 70-80 ರೂಪಾಯಿ ಇದ್ದರೂ ಸಹ ಆ ವ್ಯಕ್ತಿ ರಸ್ತೆಗೆ ದ್ರಾಕ್ಷಿಯನ್ನು ಏಕೆ ಸುರಿದು ಹೋದ ಎಂಬ ಅನುಮಾನಗಳು ಮೂಡುತ್ತಿವೆ. ಇದರ ನಡುವೆಯೂ ಜನರು ದ್ರಾಕ್ಷಿಯನ್ನು ತಮಗೆ ಬೇಕಾದಷ್ಟು ತುಂಬಿಕೊಂಡು ಹೋದರು. ಹಳ್ಳಿಯ ಜನರಲ್ಲದೇ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ ದ್ರಾಕ್ಷಿಯನ್ನು ತುಂಬಿಕೊಂಡರು. ಇದನ್ನೂ ಓದಿ: ಪ್ರಾಣ ಪಣಕ್ಕಿಟ್ಟು 8ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗು ರಕ್ಷಿಸಿದ – ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ
ದ್ರಾಕ್ಷಿಯನ್ನೆ ಎತ್ತಿಕೊಳ್ಳುತ್ತಿದ್ದ ಜನರನ್ನು ಪ್ರಶ್ನೆ ಮಾಡಿದಾಗ, ಇಲ್ಲಿ ಸುಮ್ಮನೆ ಎಸೆದು ಹೋಗಿದ್ದಾರೆ, ಅವೆಲ್ಲವೂ ಹಾಳಾಗುತ್ತದೆ. ಅದಕ್ಕೆ ನಾವಾದರೂ ತಿನ್ನಬಹುದು ಎಂದು ತುಂಬಿಕೊಂಡು ಹೋಗುತ್ತಿದ್ದೇವೆ ಎಂದರು. ಇದನ್ನೂ ಓದಿ: ಗಂಡನ ಜೊತೆ ಜಗಳ – ಸಾಯ್ತೀನಿ ಅಂತ ಕೆರೆಯಲ್ಲಿ ಕೂತ ಮಹಿಳೆ