ಬೆಂಗಳೂರು: ನಗರದ ಲಾಲ್‍ಬಾಗ್‍ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ 500ಕ್ಕೂ ಹೆಚ್ಚು ಹೂಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅರಳಿ ನಗುತ್ತಿದ್ದಾರೆ. ಈ ನಗುವಿನ ಒಡೆಯನನ್ನು ನೋಡಲು ಜನ ಸಾಗರವೇ ಹರಿದು ಬರುತ್ತಿದೆ.
Advertisement
75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಫಲ ಪುಷ್ಪಪ್ರದರ್ಶನ ಮಾಡಲಾಗುತ್ತಿದೆ. ಈ ಬಾರಿ ಅಪ್ಪು ಮತ್ತು ಡಾ.ರಾಜ್‍ಕುಮಾರ್ ಥೀಮ್‍ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಮೂರನೇ ದಿನವಾದ ಶನಿವಾರದಂದು ರಾಜ್ಯದ ಮೂಲೆ ಮೂಲೆಗಳಿಂದ ಜನ ಸಾಗರವೇ ಹರಿದು ಬಂದಿತ್ತು. ಹೂವಿನಲ್ಲಿ ಅರಳಿದ ಪುನೀತ್ ರಾಜ್ ಕುಮಾರ್ ಅವರನ್ನು ಕಂಡು ಕೆಲವರು ಭಾವುಕರಾದರೆ, ಇನ್ನೂ ಕೆಲವರು ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ನಾಲ್ಕೈದು ದಿನ ಮಳೆ ಸಂಭವ – ಉಡುಪಿ, ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್
Advertisement
Advertisement
ಶನಿವಾರ ಮಳೆಯನ್ನು ಲೆಕ್ಕಿಸದೇ 20 ಸಾವಿರಕ್ಕೂ ಹೆಚ್ಚು ಜನ ಲಾಲ್ ಬಾಗ್‍ಗೆ ಭೇಟಿ ಕೊಟ್ಟು ಸಖತ್ ಎಂಜಾಯ್ ಮಾಡಿದ್ದರು. ಒಟ್ಟು 500 ಬಗೆಯ ವಿವಿಧ ಜಾತಿಯ ಹೂವುಗಳಿಂದ ಹೂವಿನ ಲೋಕವೇ ಅರಳಿದ್ದು, ಆಗಸ್ಟ್ 15ರವರೆಗೆ ಈ ವಿಶೇಷ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು, ಪ್ರವಾಸಿಗರು, ವಿದೇಶಿ ಪ್ರೇಕ್ಷಕರು ಹಾಗೂ ಹೆಚ್ಚಾಗಿ ಶಾಲಾ ಮಕ್ಕಳು ಆಗಮಿಸಿ ಫಲಪುಷ್ಪ ಪ್ರದರ್ಶನದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದ್ದರು. ಇನ್ನೂ ಇಲ್ಲಿನ ಹೂಗಳ ಲೋಕ, ಶಿಸ್ತು, ಸ್ವಚ್ಛತೆ ಹಾಗೂ ತೋಟಗಾರಿಕೆ ಇಲಾಖೆಯ ಈ ವರ್ಷದ ಥೀಮ್ ಕಂಡು ಪ್ರವಾಸಿಗರು ಫುಲ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಲಾಲ್‌ಬಾಗ್‌ನಲ್ಲಿ ಅಪ್ಪು ನೆನಪಿನ ಫಲಪುಷ್ಪ ಪ್ರದರ್ಶನ
Advertisement
ವೀಕೆಂಡ್ ಇದ್ದಿದ್ದರಿದ ಫ್ಲವರ್ ಶೋಗೆ ಹೆಚ್ಚಿನ ಜನ ಲಾಲ್‍ಬಾಗ್‍ಗೆ ಆಗಮಿಸಿದ್ದರು. ವಿವಿಧ ಜಾತಿಯ ಹಳದಿ, ಪಿಂಕ್ ಶೇಡ್‍ನಲ್ಲಿ ಹೂಗಳು ಕಂಗೊಳಿಸುತ್ತಿದ್ದವು. ಹಚ್ಚ ಹಸಿರಿನಿಂದ ಸೌಂದರ್ಯವನೆಲ್ಲಾ ತಮ್ಮ ಬಳಿಯೇ ಇರಿಸಿಕೊಂಡಿರುವ ಸುಂದರ ಗಿಡಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿತ್ತು. ಲಾಲ್‍ಬಾಗ್‍ನಲ್ಲಿರುವ ಈ ಹೂವುಗಳಿಗೆ ಮನಸೋತ ಜನ ಫೋಟೋಗಳನ್ನ ಕ್ಲಿಕ್ಕಿಸಿಕೊಳ್ಳುವ ದೃಶ್ಯಗಳು ಸಾಮಾನ್ಯವಾಗಿದ್ದವು.