ಬೆಂಗಳೂರು: ಯುಗಾದಿ (Ugadi) ಹಾಗೂ ರಂಜಾನ್ (Ramzan) ಹಬ್ಬಕ್ಕೆ ಸಾಲುಸಾಲು ರಜೆ ಇದ್ದ ಹಿನ್ನೆಲೆ ಊರಿಗೆ ಹೋಗಿದ್ದ ಜನ ಇದೀಗ ಮತ್ತೆ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಈ ಪರಿಣಾಮ ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ದೂರ ಟ್ರಾಫಿಕ್ (Traffic) ಉಂಟಾಗಿದೆ.
ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಊರು ಹಾಗೂ ಪ್ರವಾಸಿ ತಾಣಗಳತ್ತ ಜನರು ಮುಖ ಮಾಡಿದ್ದರು. ಇದೀಗ ಕೆಲಸದ ನಿಮಿತ್ತ ಬೆಂಗಳೂರಿಗೆ ವಾಪಸ್ ಬಂದಿದ್ದು, ಹಾಸನ – ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಬಿಸಿ ತಟ್ಟಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಸಿಲಿಂಡರ್‌ಗೆ ಮುಗಿಬಿದ್ದ ಜನ – ಪೊಲೀಸ್ ರಕ್ಷಣೆಯಲ್ಲಿ ಗ್ಯಾಸ್ ಸಿಲಿಂಡರ್ ವಿತರಣೆ
ಟ್ರಾಫಿಕ್ ಹಿನ್ನೆಲೆ ಕಿಲೋಮೀಟರ್‌ಗಟ್ಟಲೇ ದೂರ ವಾಹನಗಳು ನಿಂತಲ್ಲೇ ನಿಂತಿವೆ. ಟ್ರಾಫಿಕ್ ಜಾಮ್‌ನಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಇದನ್ನೂ ಓದಿ: ರನ್ಯಾ ರಾವ್ ಕೇಸ್ – 50 ಕೆಜಿ ಗೋಲ್ಡ್ ಸಾಗಣೆಗೆ ಉಗಾಂಡ ವ್ಯಕ್ತಿ ಜೊತೆ ಡೀಲಿಂಗ್

