ದಾವಣಗೆರೆ: ಜಿಲ್ಲೆಯ ಅಶೋಕ ರಸ್ತೆಯಲ್ಲಿ ಪ್ರಾರಂಭವಾದ ಸಂಗೀತಾ ಮೊಬೈಲ್ಸ್ ನೂತನ ಶಾಖೆ ಇಂದು 200 ರೂ. ಗೆ ಒಂದು ಮೊಬೈಲ್ ನೀಡುವುದಾಗಿ ಆಫರ್ ನೀಡಿದೆ.
ಇಂದು ಬೆಳಗ್ಗೆಯಿಂದಲೇ ಜನ ಮೊಬೈಲ್ ಖರೀದಿಸಲು ಸಾಲುಗಟ್ಟಿ ನಿಂತಿದ್ದರು. ದಾವಣಗೆರೆಯಲ್ಲಿ ಐದನೇ ಸಂಗೀತ ಮೊಬೈಲ್ ಶೋ ರೂಂ ಹೊಸದಾಗಿ ಅಶೋಕ ರಸ್ತೆಯಲ್ಲಿ ಆರಂಭಗೊಂಡಿದೆ. ಹಾಗಾಗಿ ಆರಂಭಿಕ ಕೊಡುಗೆಯಾಗಿ ಕೇವಲ 200 ರೂ.ಗೆ ಒಂದು ಕೀಪ್ಯಾಡ್ ಮೊಬೈಲ್ ಅನ್ನು ನೀಡಲಾಗುತ್ತಿದೆ. ಈ ಮೊಬೈಲ್ ಪಡೆದುಕೊಳ್ಳಲು ಜನರು ಬೆಳ್ಳಂಬೆಳಗ್ಗೆಯೇ ಸರತಿ ಸಾಲಿನಲ್ಲಿ ನಿಂತುಕೊಂಡಿದ್ದಾರೆ. ಇದನ್ನೂ ಓದಿ: ನೋ ಗ್ಯಾರೆಂಟಿ, ವಾರೆಂಟಿ 200 ರೂಪಾಯಿ ಮಾತ್ರ- ಮೊಬೈಲ್ ಖರೀದಿಸಲು ಮುಗಿಬಿದ್ದ ಗ್ರಾಹಕರು
ಮೊದಲು ಬಂದ 200 ಮಂದಿಗೆ ಇನ್ನೂರು ರೂ.ಗೆ ಮೊಬೈಲ್ ನೀಡಲಾಗುವುದು ಎಂದು ಶೋ ರೂಂನವರು ಆಫರ್ ಕೊಟ್ಟಿದ್ದರು. ಹೀಗಾಗಿ ನೂರಾರು ಜನರು ಅಂಗಡಿ ಮುಂದೆ ಸಾಲಿನಲ್ಲಿ ನಿಂತಿದ್ದಾರೆ. ಮೊದಲು ಬಂದ 200 ಜನಕ್ಕೆ ಮಾತ್ರ ಕೀಪ್ಯಾಡ್ ಮೊಬೈಲ್ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ ತಕ್ಷಣ ಜನರು ಮೊಬೈಲ್ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮಹಿಳೆಯರು ಕೂಡ ನಿಂತು ಮೊಬೈಲ್ ಪಡೆಯಲು ನಿಂತಿದ್ದು ವಿಶೇಷವಾಗಿತ್ತು.
ಶೋ ರೂಂನವರು ನೀಡುವ ಮೊಬೈಲ್ಗೆ ಯಾವುದೇ ಗ್ಯಾರಂಟಿ ಮತ್ತು ವಾರಂಟಿ ಇರುವುದಿಲ್ಲ. ಇದು ನಮ್ಮ ಅಂಗಡಿಯ ಪ್ರಚಾರಕ್ಕಾಗಿ ಮಾತ್ರ ಕೊಡುತ್ತಿರುವುದು ಎಂದು ಅಂಗಡಿ ಸಿಬ್ಬಂದಿ ಹೇಳುತ್ತಿದ್ದಾರೆ. ಆದರೂ ಜನ ಅದಾವುದನ್ನೂ ಲೆಕ್ಕಕ್ಕಿಟ್ಟುಕೊಳ್ಳದೇ ಬಿರುಬಿಸಿಲಿನಲ್ಲೂ ಮೊಬೈಲ್ ಖರೀದಿಸಲೇಬೇಕೆಂದು ಹಠಹಿಡಿದು ನಿಂತಿದ್ದಾರೆ. ಕೆಲವರಿಗೆ ಮೊಬೈಲ್ ಸಿಗದ ಕಾರಣ ಬೇಸರಗೊಂಡು ವಾಪಸ್ಸು ಹೋದರು. ಕೆಲಕಾಲ ಶೋರಂ ಮುಂಭಾಗ ಗದ್ದಲದ ವಾತವರಣ ಸೃಷ್ಟಿಯಾಗಿದ್ದು, ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.