ಯುವತಿಗೆ ಚುಡಾಯಿಸಿದ ಕಾಮುಕನಿಗೆ ಧರ್ಮದೇಟು

Public TV
1 Min Read
hubballi

ಹುಬ್ಬಳ್ಳಿ: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿಗೆ ಚುಡಾಯಿಸಿದ ಕಾಮುಕನಿಗೆ ಸಹೋದ್ಯೋಗಿಗಳು ಮತ್ತು ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.

ಹುಬ್ಬಳ್ಳಿಯ ಗೋಕುಲ ರಸ್ತೆಯ ಐಸಿಸಿ ಬ್ಯಾಂಕ್ ಮುಂದುಗಡೆ ಈ ಘಟನೆ ನಡೆದಿದೆ. ಕಳೆದ ಒಂದು ವಾರದಿಂದ ಯುವತಿಯನ್ನು ಕಿರಾತಕ ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಇಂದು ಸಹ ಯುವತಿಯ ಕಚೇರಿ ಬಳಿ ಬಂದ ಕಾಮುಕ, ಯುವತಿ ಮತ್ತು ಆಕೆಯ ಸ್ನೇಹಿತೆಗೆ ಚುಡಾಯಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನೂ ಓದಿ: ಇಮ್ರಾನ್‌ ಖಾನ್‌ ನೂರಕ್ಕೆ ನೂರರಷ್ಟು ತೊಂದರೆಯಲ್ಲಿದ್ದಾರೆ: ಮಿತ್ರ ಪಕ್ಷ ಹೇಳಿಕೆ

police 3

ಇದನ್ನು ಕಂಡ ಯುವತಿಯ ಸಹೋದ್ಯೋಗಿಗಳು ಕಾಮುಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಸಹ ಆಗಮಿಸಿದ್ದಾರೆ. ಬಳಿಕ ಕಾಮುಕ ಯುವತಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದು, ಸದ್ಯ ಪೊಲೀಸ್ ಠಾಣೆಗೆ ಕಾಮುಕ ಯುವಕನನ್ನು ಕರೆದುಕೊಂಡ ಹೋಗಲಾಗಿದೆ. ಇದನ್ನೂ ಓದಿ: ಹೈಕೋರ್ಟ್ ವಿರುದ್ಧ ಮಾತನಾಡುವವರು ಉಗ್ರರು, ನ್ಯಾಯ ಸಿಗದಿದ್ರೆ ಪಾಕಿಸ್ತಾನ, ಆಫ್ಘನ್‌ಗೆ ಹೋಗಲಿ: ಸುವರ್ಣ

Share This Article
Leave a Comment

Leave a Reply

Your email address will not be published. Required fields are marked *