ಬೆಂಗಳೂರು: ಇಂದು ನಗರದಲ್ಲಿ ವಿಧಾನಸೌಧದ ಎದುರು ಮಲ ಮೂತ್ರ ಮೈ ಮೇಲೆ ಸುರಿದುಕೊಂಡು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು ಪೂರ್ವ ತಾಲೂಕಿನ ವೈಟ್‍ಫೀಲ್ಡ್ ಬಳಿ ರಾಜಕಾಲುವೆ ಒತ್ತುವರಿ ವಿಚಾರ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಯಿಂದ ಒತ್ತುವರಿಯಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ಆಕ್ರೋಶಗೊಂಡ ಪ್ರತಿಭಟನಾ ನಿರತ ಐವರು ವಿಧಾನಸೌಧದ ಗೇಟ್ ಬಳಿ ಮಲ ಮತ್ತು ಮೂತ್ರ ಮೈ ಮೇಲೆ ಸುರಿದುಕೊಂಡಿದ್ದಾರೆ.
Advertisement
ಬೆಂಗಳೂರಿನ ವೈಟ್ ಫೀಲ್ಡ್ ಬಳಿ ರಾಜಕಾಲುವೆ ಒತ್ತುವರಿ ವಿಚಾರವಾಗಿ ದಲಿತರ ಗುಡಿಸಲುಗಳನ್ನ ನೆಲಸಮ ಮಾಡಲಾಯ್ತು. ಆದ್ರೆ ಆನಂತರ ಖಾಸಗಿ ಕಂಪನಿಯೊಂದು ರಾಜಕಾಲುವೆ ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರು ಪೂರ್ವ ತಾಲುಕು ತಹಶೀಲ್ದಾರರಿಗೆ ಹಾಗೂ ಜಿಲ್ಲಾಧಾಕಾರಿಗಳಿಗೆ ದೂರು ನೀಡಿದ್ರು ಯಾವುದೇ ಕ್ರಮ ಕೈಗೊಂಡಿಲ್ಲ. ವೈಟ್ ಫೀಲ್ಡ್ ಅಲ್ಲದೇ ಬೆಂಗಳೂರಿನ ವಿವಿಧೆಡೆ ಖಾಸಗಿ ಕಂಪನಿಯವರು ರಾಜ ಕಾಲುವೆ ಒತ್ತುವರಿ ಮಾಡಿದ್ದಾರೆ. ಆದ್ರೆ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ತಿಲ್ಲ. ಬಡವರನ್ನ ಮಾತ್ರ ಒತ್ತುವರಿಯಲ್ಲಿ ಟಾರ್ಗೇಟ್ ಮಾಡಲಾಗ್ತಿದೆ ಅಂತಾ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
Advertisement
ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡು, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.