ಉಡುಪಿ: ಎಸ್ ಐ ಮಹಾಬಲ ಶೆಟ್ಟಿ ರಾಜೀನಾಮೆಯನ್ನು ಖಂಡಿಸಿ ಸಾರ್ವಜನಿಕರು ಹೆಬ್ರಿ ಪೊಲೀಸ್ ಠಾಣೆ ಎದುರಿಗೆ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಮಹಾಬಲ ಶೆಟ್ಟಿ ಕರ್ತವ್ಯಕ್ಕೆ ಹಾಜರಾಗುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೆಬ್ರಿ ಪಿಎಸ್‍ಐ ಮಹಾಬಲ ಶೆಟ್ಟಿ ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಹಿರಿಯ ಅಧಿಕಾರಿಗಳು ತಮಗೆ ಕರ್ತವ್ಯ ನಿರ್ವಹಿಸುವಲ್ಲಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಸ್ವಯಂನಿವೃತ್ತಿ ಪತ್ರ ಬರೆದಿಟ್ಟು ಠಾಣೆಯಿಂದ ಹೊರಹೋಗಿದ್ದರು. ಸಿವಿಲ್ ವ್ಯಾಜ್ಯದ ವಿಚಾರದಲ್ಲಿ ಉಂಟಾದ ಗೊಂದಲದಲ್ಲಿ ಹಿರಿಯ ಅಧಿಕಾರಿಗಳು ಎಸ್ ಐ ಮೇಲೆ ಒತ್ತಡ ತಂದಿದ್ದರು ಎನ್ನಲಾಗಿದೆ.
Advertisement
ಹೀಗೆ ಎಸ್ ಐ ಕಾರ್ಯನಿರ್ವಹಿಸುವಲ್ಲಿ ಒತ್ತಡ ತಂದಿದ್ದಕ್ಕಾಕಿ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಕೂಡಲೇ ಮಹಾಬಲ ಶೆಟ್ಟಿ ಕರ್ತವ್ಯಕ್ಕೆ ಹಾಜರಾಗುವಂತೆ ಒತ್ತಾಯಿಸಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು. ಇದನ್ನು ಓದಿ: ರಾಜೀನಾಮೆ ನೀಡಿ ಸರ್ಕಾರಿ ಮೊಬೈಲ್ ಮೇಜ್ ಮೇಲಿಟ್ಟು ಹೊರಟೇ ಬಿಟ್ರು ಹೆಬ್ರಿ ಠಾಣಾ ಎಸ್‍ಐ!
Advertisement
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿ, ಮಹಾಬಲ ಶೆಟ್ಟಿಯವರು ರಾತ್ರಿ ಠಾಣೆಗೆ ಹಾಜರಾಗಿ ಸ್ವಯಂನಿವೃತ್ತಿ ಪತ್ರ ಬರೆದಿಟ್ಟಿದ್ದಾರೆ. ಈ ಪತ್ರವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಮೇಲಾಧಿಕಾರಿಗಳು ಯಾವುದೇ ಕಿರುಕುಳ ನೀಡಿಲ್ಲ. ಕರ್ತವ್ಯದಲ್ಲಿದ್ದಾಗಲೇ ಅಶಿಸ್ತು ತೋರಿರುವ ಅವರ ಈ ನಡೆಗೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.