ಬೆಳಗಾವಿ: ಅರಣ್ಯ ಸಚಿವ ಉಮೇಶ್ ಕತ್ತಿ ಒಡೆತನದ ಸಕ್ಕರೆ ಕಾರ್ಖಾನೆಯಿಂದ ತ್ಯಾಜ್ಯ ನೀರನ್ನು ಹಳ್ಳಕ್ಕೆ ಬಿಡಲಾಗುತ್ತಿದೆ ಎಂದು ಹುಕ್ಕೇರಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮಸ್ಥರು ಪ್ರತಿಭಟಿಸಿದ್ದಾರೆ.
Advertisement
ವಿಶ್ವರಾಜ ಶುಗರ್ಸ್ ಕಾರ್ಖಾನೆಯಿಂದ ತ್ಯಾಜ್ಯ ಮಿಶ್ರಿತ ನೀರನ್ನು ಹಳ್ಳಕ್ಕೆ ಬಿಡಲಾಗುತ್ತಿದೆ. ಇದರಿಂದ ಜಾಗನೂರು, ಪಾಮಲದಿನ್ನಿ, ಬಡಿಗವಾಡ, ರಾಜಾಪುರ ಗ್ರಾಮಗಳಲ್ಲಿ ತೊಂದರೆ ಆಗ್ತಿದೆ. ಈ ನೀರನ್ನು ಕುಡಿಯುತ್ತಿರುವ ಜಾನುವಾರುಗಳಲ್ಲಿ ಚರ್ಮರೋಗ ಬರುತ್ತಿದೆ. ಇದನ್ನೂ ಓದಿ: ಪತ್ನಿ ನೆರವಿನಿಂದ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ- ಸಂತ್ರಸ್ತೆ ವಿದೇಶಕ್ಕೆ ಹೋದ್ರೂ ಬಿಟ್ಟಿಲ್ಲ ಆತನ ಕಾಮದಾಟ
Advertisement
Advertisement
ನಾಲ್ಕು ವರ್ಷಗಳಿಂದ ದೂರು ನೀಡುತ್ತಿದ್ದರೂ ಇದುವರೆಗೂ ಸಚಿವರ ಪ್ರಭಾವದಿಂದ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟಿಸಿದ್ದಾರೆ. ಹಳ್ಳಕ್ಕೆ ಕಾರ್ಖಾನೆ ತ್ಯಾಜ್ಯ ನೀರು ಬಿಡದಂತೆ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನಿಲ್ಲದ ಪುಂಡಾಟ – ಕನ್ನಡಿಗರ ಮೇಲೆ ಹಲ್ಲೆಗೈದು ನಿಂದಿಸಿದ ಶಿವಸೇನೆ ಕಾರ್ಯಕರ್ತರು!