ಮಂಗಳೂರು: ಪೌರತ್ವದ ಕಿಚ್ಚಿಗೆ ಮಂಗಳೂರಿನಲ್ಲಿ ಇಬ್ಬರು ಬಲಿಯಾಗಿದ್ದಾರೆ. ಈ ಗೋಲಿಬಾರ್‍ಗೆ ಕಮಿಷನರ್ ಹರ್ಷಾ ಅವರು ಸ್ಪಷ್ಟನೆ ಕೊಟ್ಟಿದ್ದು, ಸಾವಿರಾರು ಜನ ನಮ್ಮ ಮೇಲೆ ಮುಗಿಬಿದ್ದರು. ಹೀಗಾಗಿ ಆತ್ಮ ರಕ್ಷಣೆಗಾಗಿ ನಾವು ಫೈರಿಂಗ್ ಮಾಡಬೇಕಾಯಿತು. ಘಟನೆಯಲ್ಲಿ ನಮ್ಮ 20ಕ್ಕೂ ಹೆಚ್ಚು ಪೊಲೀಸರೂ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಪೌರತ್ವದ ಕಿಚ್ಚಿಗೆ ಮಂಗಳೂರಿನಲ್ಲಿ ಇಬ್ಬರು ಬಲಿಯಾಗಿದ್ದಾರೆ. ಘಟನೆ ಬಗ್ಗೆ ಮಂಗಳೂರು ಕಮಿಷನರ್ ಹರ್ಷ ಅವರು ಸಮರ್ಥನೆ ನೀಡಿದ್ದಾರೆ. ಸುಮಾರು 7 ಸಾವಿರ ಉದ್ರಿಕ್ತರು ಮಾರಕಾಸ್ತ್ರಗಳೊಂದಿಗೆ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಬಂದರು ಠಾಣೆಗೆ ಮುತ್ತಿಗೆ ಹಾಕಿದ ಉದ್ರಿಕ್ತರು ಠಾಣೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಠಾಣೆ ಮೇಲೆ ಕಲ್ಲು, ಬಾಟಲ್ ತೂರಿದ್ರು. ಪೊಲೀಸರ ಹತ್ಯೆಗೆ ಯತ್ನಿಸಿದ್ರು. ರಕ್ಷಣೆಗಾಗಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಘಟನೆಯಲ್ಲಿ 20 ಪೊಲೀಸರಿಗೆ ಗಾಯಗಳಾಗಿವೆ. 8 ಪೊಲೀಸರಿಗೆ ಗಂಭೀರ ಗಾಯವಾಗಿದೆ. ಇಬ್ಬರು ಡಿಸಿಪಿಗಳ ಕೈ, ಕಾಲಿನ ಎಲುಬು ಕಟ್ ಆಗಿದೆ. ಉದ್ರಿಕ್ತರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
Advertisement
Advertisement
ಗಲಭೆಯಲ್ಲಿ ಮೃತಪಟ್ಟವರನ್ನು ಕಂದಕ್ ನಿವಾಸಿ ಜಲೀಲ್(49), ಕುದ್ರೋಳಿ ನಿವಾಸಿ ನೌಶಿಮ್(23) ಅಂತ ಗುರುತಿಸಲಾಗಿದೆ. ಮೃತಪಟ್ಟವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ, ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ತನಿಖೆ ನಡೆಸಲಾಗುತ್ತಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಸಾರ್ವಜನಿಕರು ಯಾರೂ ರಸ್ತೆಗೆ ಇಳಿಯಬಾರದು ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement
Advertisement
100ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ. ಗಲಭೆ ನಡೆದ ಬಂದರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮಧ್ಯರಾತ್ರಿವರೆಗೂ ಕಫ್ರ್ಯೂ ಜಾರಿ ಮಾಡಲಾಗಿದೆ. ಮಂಗಳೂರು ಕೇಂದ್ರ, ಉತ್ತರ, ಮಂಗಳೂರು ದಕ್ಷಿಣ, ಬರ್ಕೆ, ಉರ್ವ, ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ.