ನವದೆಹಲಿ: ಉತ್ತರಾಖಂಡದಲ್ಲಿ ಮತದಾನದ ನಡುವೆಯೇ ಕಾಂಗ್ರೆಸ್ ಮಸೀದಿ ಹೆಸರಿನಲ್ಲಿ ಮತ ಯಾಚನೆ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ದೇವಭೂಮಿಯನ್ನು ದಾರುಲ್ ಭೂಮಿಯನ್ನಾಗಿ ಮಾಡಲು ಆಲೋಚಿಸುವವರಿಗೆ ಜನತೆಯೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ತಿರುಗೇಟು ನೀಡಿದ್ದಾರೆ.
Advertisement
चुनाव आते-आते कांग्रेस के पास आखिर में एक ही विकल्प बचता है: साम्प्रदायिक ध्रुवीकरण https://t.co/XqwLGxiegI
— Tejasvi Surya (@Tejasvi_Surya) February 13, 2022
Advertisement
ಉತ್ತರಾಖಂಡ ಕಾಂಗ್ರೆಸ್ ಭಾನುವಾರ ಸಂಜೆ ಪಿರಾನ್ ಕಲಿಯಾರ್ ಮಸೀದಿಯ ಚಿತ್ರವನ್ನು ಬಳಸಿ ಟ್ವೀಟ್ ಮಾಡಿದ ನಂತರ ಹೊಸ ವಿವಾದ ಭುಗಿಲೆದ್ದಿದೆ. ಕಾಂಗ್ರೆಸ್ ಪಿರಾನ್ ಕಲಿಯಾರ್ಗೆ ಬರುತ್ತಿದೆ ಉತ್ತರಾಖಂಡ ಕಾಂಗ್ರೆಸ್ ಟ್ವೀಟ್ ಮಾಡಿದೆ.
Advertisement
ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಕೇವಲ ಮುಸ್ಲಿಂ ಓಲೈಕೆ, ಮುಸ್ಲಿಂ ವಿಶ್ವವಿದ್ಯಾನಿಲಯಕ್ಕೆ ಶುಕ್ರವಾರದ ನಮಾಜ್‍ಗಾಗಿ ರಜೆ ನೀಡುವುದಲ್ಲದೇ ಈಗ ಅದು ಮುಸ್ಲಿಂ ಹೆಸರಿನಲ್ಲಿ ಮತ ಕೇಳುತ್ತಿದೆ. ಉತ್ತರಾಖಂಡದ ಮಸೀದಿಯ ಜನರು ಮಾತ್ರವಲ್ಲದೆ ಐದು ರಾಜ್ಯಗಳ ಜನರು ದೇವಭೂಮಿಯನ್ನು ದಾರುಲ್ ಭೂಮಿಯನ್ನಾಗಿ ಮಾಡಲು ಯೋಚಿಸುತ್ತಿವೆ ಅಂತಹವರಿಗೆಲ್ಲಾ ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ಟ್ವೀಟ್ ಮಾಡಿದರು.
Advertisement
उत्तराखंड में चुनाव से ठीक पहले कांग्रेस ने धर्मनिरपेक्षता का नक़ाब उतार कर फेंक दिया। देवभूमि की जनता इसका जवाब अपने वोट से देगी। https://t.co/2u5IHgKLZ3
— Amit Malviya (@amitmalviya) February 13, 2022
ಉತ್ತರಾಖಂಡ ಕಾಂಗ್ರೆಸ್‍ನ ಟ್ವೀಟ್‍ನ ಸ್ಕ್ರೀನ್‍ಶಾಟ್ ಅನ್ನು ಹಂಚಿಕೊಂಡ ಲೋಕಸಭಾ ಸದಸ್ಯ ಮತ್ತು ಬಿಜೆಪಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಚುನಾವಣೆ ಸಮೀಪಿಸುತ್ತಿರುವಾಗ, ಕಾಂಗ್ರೆಸ್‍ಗೆ ಅಂತಿಮವಾಗಿ ಒಂದೇ ಒಂದು ಆಯ್ಕೆ ಉಳಿದಿದೆ ಅದು ಕೋಮು ಧ್ರುವೀಕರಣ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಆಕಾಶದಲ್ಲಿ ಹಾರಾಡಿತು ಪೈಲಟ್ ರಹಿತ ಹೆಲಿಕಾಪ್ಟರ್
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿ, ಉತ್ತರಾಖಂಡದಲ್ಲಿ ಚುನಾವಣೆಗೆ ಮುನ್ನ ಕಾಂಗ್ರೆಸ್‍ನ ಜಾತ್ಯತೀತತೆಯ ಮುಖವಾಡವನ್ನು ಕಳಚಿದೆ. ಇದಕ್ಕೆ ದೇವಭೂಮಿಯ ಜನರು ತಮ್ಮ ಮತದ ಮೂಲಕ ಉತ್ತರಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಯುವ ಘಟಕದ ರಾಷ್ಟ್ರೀಯ ಉಪಾಧ್ಯಕ್ಷೆ ನೇಹಾ ಜೋಶಿ ಟ್ವೀಟ್ ಮಾಡಿ, ಅವರಿಗೆ ಧ್ರುವೀಕರಣವನ್ನು ಹೊರತುಪಡಿಸಿ ಬೇರೆ ಯಾವುದೇ ಅಜೆಂಡಾ ಇಲ್ಲ, ಈ ದೇಶದಲ್ಲಿ ಯಾವುದೇ ಪಕ್ಷ ಕೋಮುವಾದಿಯಾಗಿದ್ದರೆ ಅದು ಕಾಂಗ್ರೆಸ್ ಮಾತ್ರ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಉತ್ತರಾಖಂಡದ ಪಕ್ಷದ ಯುವ ಘಟಕದ ಉಸ್ತುವಾರಿ ತಜಿಂದರ್ ಪಾಲ್ ಸಿಂಗ್, ಮತದಾನ ಮಾಡುವ ಮೊದಲು ಕಾಂಗ್ರೆಸ್‍ನ ಮುಖದಿಂದ ಹಿಜಬ್ ಹೊರಬಂದಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ ಉತ್ತರಾಖಂಡದಲ್ಲಿ (ಯುಸಿಸಿ) ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್
70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಗೆ ಮತದಾನ ನಡೆಯುತ್ತಿದೆ. 70 ವಿಧಾನಸಭಾ ಕ್ಷೇತ್ರಗಳಲ್ಲಿ 81 ಲಕ್ಷಕ್ಕೂ ಹೆಚ್ಚು ಮತದಾರಿದ್ದು, 150 ಕ್ಕೂ ಹೆಚ್ಚು ಪಕ್ಷೇತರ ಅಭ್ಯರ್ಥಿಗಳನ್ನು ಒಳಗೊಂಡಂತೆ 632 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.
2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 70 ಸ್ಥಾನಗಳಲ್ಲಿ 57 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 11 ಮತ್ತು ಇಬ್ಬರು ಪಕ್ಷೇತರ ಅಭ್ಯರ್ಥಿಗಳು ವಿಧಾನಸಭಾ ಕ್ಷೇತ್ರಗಳಿಂದ ಗೆದ್ದಿದ್ದರು.