ಮಡಿಕೇರಿ: ರಾಮನಗರ (Ramanagara) ಜಿಲ್ಲೆಯನ್ನು ಬೆಂಗಳೂರಿಗೆ (Bengaluru) ವಿಲೀನ ಮಾಡುವ ವಿಚಾರ ಡಿಕೆ ಶಿವಕುಮಾರ್ (DK Shivakumar) ಅವರ ನಿರ್ಧಾರ ಮುಂದಾಲೋಚನೆಯಿಂದ ಮಾಡಿದ್ದಾರೆ. ಅದು ರಾಮನಗರ ಜಿಲ್ಲೆಯ ಪರವಾಗಿ ಇರುತ್ತದೆ ಎಂದು ಮೀನುಗಾರಿಕ ಸಚಿವ ಮಂಕಾಳ ವೈದ್ಯ (Mankala Vaidya) ಹೇಳಿದ್ದಾರೆ.
ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದ ಬಳಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ಏನು ನಿರ್ಧಾರ ಮಾಡುತ್ತಾರೆ ಅದು ರಾಮನಗರ ಜಿಲ್ಲೆಯ ಜನರ ಪರವಾಗಿ ಇರುತ್ತದೆ. ರಾಮನಗರ ಎಂದರೆ ಡಿಕೆ ಶಿವಕುಮಾರ್ ಅವರ ಆಸ್ತಿ. ಅವರು ಯಾವುದೇ ರೀತಿಯ ವ್ಯತ್ಯಾಸ ಆಗಲು ಬಿಡುವುದಿಲ್ಲ. ಅಲ್ಲಿಯ ಜನರಿಗೆ ರಾಮನಗರಕ್ಕೆ ಒಳ್ಳೆಯದೇ ಆಗುತ್ತದೆ. ಅವರಿಂದ ಕೆಟ್ಟದು ಅಂತೂ ಆಗೋಲ್ಲ. ಅವರು ಏನು ನಿರ್ಧಾರ ಮಾಡುತ್ತಾರೋ ಅದು ಸರಿಯಾಗಿಯೇ ಇರುತ್ತದೆ ಎಂದು ಭರವಸೆ ನೀಡಿದರು.
Advertisement
Advertisement
ರಾಮನಗರ ಜಿಲ್ಲೆಯ ಜನರು ಭೂಮಿಗೆ ಬಂಗಾರ ಬೆಲೆ ಬರುತ್ತದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿಕೆ ಶಿವಕುಮಾರ್ ಅವರ ಆಸ್ತಿಗೆ ಬೆಲೆ ಬರುತ್ತದೆ ಎಂದು ಹೇಳಿಲ್ಲ. ಸಾರ್ವಜನಿಕರ ಆಸ್ತಿಗೆ, ಬಡವರ ಆಸ್ತಿ, ಸಾಮಾನ್ಯ ಜನರ ಆಸ್ತಿಗೆ ಬೆಲೆ ಬರುತ್ತದೆ ಎಂದು ಹೇಳಿದ್ದಾರೆ. ಅದರಲ್ಲಿ ಏನು ತಪ್ಪು ಇದೆ? ರಾಮನಗರ ಜಿಲ್ಲೆ ಜನರ ಪರವಾಗಿ ಅವರ ನಿರ್ಧಾರ ಇರುತ್ತದೆ. ಜನರ ವಿರುದ್ಧವಾಗಿ ಯಾವುದೇ ನಿರ್ಧಾರ ಇರೋಲ್ಲ. ಜನರ ವಿಶ್ವಾಸ ತೆಗೆದುಕೊಂಡು ಅವರು ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ರಾಮನಗರ ಜಿಲ್ಲೆ ಹೆಸರು ಬದಲಾದ್ರೆ ಅಮರಣಾಂತ ಉಪವಾಸ ಮಾಡ್ತೀನಿ: ಹೆಚ್‌ಡಿಕೆ ಪ್ರತಿಜ್ಞೆ
Advertisement
Advertisement
ನಮ್ಮ ಸರ್ಕಾರದಿಂದ ರಾಮನಗರ ಜನರು ಯಾವುದೇ ರೀತಿಯಲ್ಲಿ ಆಂತಕ ಪಡುವುದು ಬೇಡ. ತೊಂದರೆ ಆಗದ ರೀತಿಯಲ್ಲಿ ರಾಮನಗರ ಜನತೆ ಪರವಾಗಿ ಇದೆ ಎಂದು ಮಂಕಾಳ ಎಸ್ ತಿಳಿಸಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಅಪಘಾತ – ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
Web Stories