Connect with us

Latest

ಸಿಎಂ ಸ್ಥಾನ ನಮಗೆ ಬರೆದಿಟ್ಟುಕೊಳ್ಳಿ – ಬಿಜೆಪಿ ಇಲ್ಲದೇ ಸರ್ಕಾರ ರಚನೆಗೆ ಶಿವಸೇನೆ ಪ್ಲಾನ್

Published

on

ಮುಂಬೈ: ಮಾಹಾರಾಷ್ಟ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚಿಸಲು ಶಿವಸೇನೆ ಮುಂದಾಗುತ್ತಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಪೂರಕ ಎಂಬಂತೆ ಶಿವಸೇನೆ ನಾಯಕರು ಎನ್‍ಸಿಪಿ ಮತ್ತು ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿದ್ದಾರೆ. ಬುಧವಾರ ಆದಿತ್ಯ ಠಾಕ್ರೆ ಸಹ ಮಹಾರಾಷ್ಟ್ರದ ರಾಜ್ಯಪಾಲರನ್ನು ಭೇಟಿಯಾಗಿದ್ದರು.

ವಿಧಾನಸಭಾ ಚುನಾವಣೆ ಫಲಿತಾಂಶ ಬಂದು 10 ದಿನಗಳಾದ್ರೂ ಬಹುಮತ ಪಡೆದಿರುವ ಬಿಜೆಪಿ-ಶಿವಸೇನೆ ಸರ್ಕಾರ ರಚನೆಗೆ ಮುಂದಾಗುತ್ತಿಲ್ಲ. ಶಿವಸೇನೆ 50:50 ಸೂತ್ರಕ್ಕೆ ದೃಢವಾಗಿದ್ದರೆ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಮಾತ್ರ ನಾನೇ ಮುಂದಿನ ಐದು ವರ್ಷದ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಇಲ್ಲಿ ಯಾರು ಜೈಲಿನಲ್ಲಿರುವ ಪುತ್ರ ದುಷ್ಯಂತ್ ಚೌಟಾಲಾ ಇಲ್ಲ: ಶಿವಸೇನೆ

ಈ ಬೆಳವಣಿಗೆ ನಡುವೆ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಶಿವಸೇನೆ ನಾಯಕ ಸಂಜಯ್ ರಾವತ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಶರದ್ ಪವಾರ್ ಭೇಟಿ ಬಳಿಕ ಮಾತನಾಡಿರುವ ಸಂಜಯ್ ರಾವತ್, ಒಂದು ವೇಳೆ ಶಿವಸೇನೆ ನಿರ್ಧರಿಸಿದ್ರೆ ತನ್ನ ಸ್ವಂತ ಸಾಮರ್ಥ್ಯದಿಂದ ಸರ್ಕಾರ ರಚಿಸಬಹುದು. 50:50 ಫಾರ್ಮುಲಾದಲ್ಲಿ ಸರ್ಕಾರ ರಚನೆಗೆ ಜನಾದೇಶ ಬಂದಿದೆ. ರಾಜ್ಯದ ಜನತೆ ಶಿವಸೇನೆಯ ನಾಯಕ ಸಿಎಂ ಆಗಲಿ ಎಂದು ಹೇಳುತ್ತಿದ್ದಾರೆ. ಶಿವಸೇನೆಗೆ ಸಿಎಂ ಸ್ಥಾನ ಸಿಗಲಿದೆ ಬೇಕಾದರೆ ಬರೆದಿಟ್ಟುಕೊಳ್ಳಿ ಎಂದು ಹೇಳಿದ್ದಾರೆ. ಇದನ್ನೂ ಓದಿ: 50-50 ಫಾರ್ಮುಲಾಗೆ ಶಿವಸೇನೆ ಆಗ್ರಹ- ಜೆಡಿಎಸ್ ಅಸ್ತ್ರ ಪ್ರಯೋಗಿಸಿದ ಉದ್ಧವ್ ಠಾಕ್ರೆ

ಶರದ್ ಪವಾರ್ ಅವರನ್ನು ಭೇಟಿಯಾಗಿರುವ ಸಂಜಯ್ ರಾವತ್ ಸರ್ಕಾರ ರಚನೆಯ ಹೊಸ ಸಮೀಕರಣ(ಶಿವಸೇನೆ+ಎನ್‍ಸಿಪಿ+ಕಾಂಗ್ರೆಸ್=ಸರ್ಕಾರ)ವನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಬಿಜೆಪಿ 50:50 ಫಾರ್ಮುಲಾ ಒಪ್ಪದಿದ್ದಲ್ಲಿ ಶಿವಸೇನೆ ಹೊಸ ಮೈತ್ರಿಗೆ ಮುಂದಾಗುವ ಸಾಧ್ಯತೆಗಳಿವೆ. ಟ್ವಿಟ್ಟರ್ ನಲ್ಲಿ ಪರೋಕ್ಷವಾಗಿ ಕಿಡಿಕಾರಿರುವ ಸಂಜಯ್ ರಾವತ್, ಸಾಹೇಬರೇ ಅಹಂಕಾರವನ್ನು ಬೆಳೆಸಿಕೊಳ್ಳಬೇಡಿ, ಸಮಯದ ಸಾಗರದಲ್ಲಿ ಸಿಕಂದರ್ ಸಹ ಮುಳುಗಿದ್ದಾನೆ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ನಾಯಕರು ಮತ್ತು ಕಾರ್ಯಕರ್ತರರು ವ್ಯಾಪಾರಿಗಳಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಶಿವಸೇನೆ-ಬಿಜೆಪಿ ಮೈತ್ರಿಯಲ್ಲಿ ಬಿರುಕು

ಗುರುವಾರ ಶಿವಸೇನೆಯ ಎಲ್ಲ ಶಾಸಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ, ಮುಖ್ಯಮಂತ್ರಿ ಸ್ಥಾನ ಅಲಂಕರಿಸೋದು ಶಿವಸೇನೆಯ ಕನಸು. ಓರ್ವ ರಾಜಕೀಯ ನಾಯಕನಾಗಿ ನಮ್ಮ ಪಕ್ಷಕ್ಕೆ ಸಿಎಂ ಸ್ಥಾನ ಸಿಗಲಿ ಅಂತಾ ಕೇಳೋದರಲ್ಲಿ ತಪ್ಪೇನಿದೆ? ಸಿಎಂ ಸ್ಥಾನವೇ ನಮ್ಮ ಗುರಿ. ಹಾಗಾಗಿ ಈ ಗುರಿ ತಲುಪಲು ನಿಮ್ಮೆಲ್ಲರ ಸಹಕಾರದ ಅವಶ್ಯಕತೆವಿದೆ. ಮುಖ್ಯಮಂತ್ರಿ ಕುರ್ಚಿ ಮೇಲೆ ಒಬ್ಬರೇ ಬಹಳ ದಿನ ಕುಳಿತುಕೊಳ್ಳಲಾರರು ಎಂದು ಪರೋಕ್ಷವಾಗಿ ದೇವೇಂದ್ರ ಫಡ್ನವೀಸ್‍ಗೆ ಟಾಂಗ್ ಕೊಟ್ಟಿದ್ದರು. ಇದನ್ನೂ ಓದಿ: ನಾನು ಮಹಾರಾಷ್ಟ್ರ ಸಿಎಂ ಆಗುತ್ತೇನೆ – ರಾಜ್ಯಪಾಲರಿಗೆ ಪತ್ರ ಬರೆದ ರೈತ

Click to comment

Leave a Reply

Your email address will not be published. Required fields are marked *