– ರಸ್ತೆ ಅಗಲೀಕರಣಕ್ಕೆ ಮುಂದಾದ ಜಿಲ್ಲಾಡಳಿತ
ಚಿತ್ರದುರ್ಗ: ಅಪಘಾತಗಳಿಗೆ ಬ್ರೇಕ್ ಹಾಕಲು ರಸ್ತೆ ಅಗಲೀಕರಣಕ್ಕಾಗಿ ಸರ್ಕಾರ ಅನುದಾನ ನೀಡಿತ್ತು. ಆದರೆ ರಸ್ತೆ ಅಗಲೀಕರಣ ಮಾಡದೇ ರಸ್ತೆ ಮಧ್ಯೆ ಅವೈಜ್ಞಾನಿಕವಾಗಿ ಡಿವೈಡರ್ ಅಳವಡಿಸಿದ ಪರಿಣಾಮ ಅವಘಡಗಳು ಮಿತಿಮೀರಿದ ಬೆನ್ನಲ್ಲೇ ಎಚ್ಚೆತ್ತ ಚಿತ್ರದುರ್ಗ (Chitradurga) ಜಿಲ್ಲಾಡಳಿತ ರಸ್ತೆ ಅಗಲೀಕರಣಕ್ಕೆ ಮುಂದಾಗಿದೆ.
Advertisement
ಐತಿಹಾಸಿಕ ಹಿನ್ನೆಲೆಯ ಕೋಟೆನಾಡು ಚಿತ್ರದುರ್ಗ ಹೇಳಿಕೇಳಿ ರಾಜ್ಯದ ಪ್ರಮುಖ ಪ್ರವಾಸಿತಾಣ. ಈ ತಾಣದ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂ. ಅನುದಾನ ನೀಡಿದೆ. ಇದನ್ನು ಸದುಪಯೋಗಪಡಿಸಿಕೊಂಡು ಸುಸಜ್ಜಿತ ರಸ್ತೆ ಮಾಡಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆ ಅಗಲೀಕರಣ (Road Widening) ಮಾಡದೇ ಅವೈಜ್ಞಾನಿಕವಾಗಿ ಡಿವೈಡರ್ ಅಳವಡಿಸಿರುವ ಪರಿಣಾಮ ಕೋಟೆನಾಡಿನ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಇದನ್ನೂ ಓದಿ: 12 ಮಹಿಳೆಯರು ಕಟ್ಟಿದ ಡೈರಿಯ ಯಶೋಗಾಥೆ – ಗದಗ ಜಿಲ್ಲೆಗೆ ಮಾದರಿ ಡೋಣಿ ಮಹಿಳಾ ಸಂಘ
Advertisement
Advertisement
Advertisement
ಯೋಜನಬದ್ಧವಾಗಿ ರಸ್ತೆ ಅಗಲೀಕರಣ ಮಾಡದೇ, ಕಿಷ್ಕಿಂದೆಯಂತಹ ಪ್ರಮುಖ ರಸ್ತೆಯಲ್ಲಿ ಡಿವೈಡರ್ ಅಳವಡಿಸಿದ್ದು, ವಾಹನ ಸವಾರರು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಿದೆ. ಎದುರಿಗೆ ಬರುವ ವಾಹನಗಳನ್ನು ತಪ್ಪಿಸಲು ಡಿವೈಡರ್ ಗಳಿಗೆ ವಾಹನ ಡಿಕ್ಕಿಯಾಗಿ ಅಪಘಾತ ಪ್ರಕರಣ ಹೆಚ್ಚಳವಾಗಿವೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ನ ಶಿವಣ್ಣನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಹೀಗಾಗಿ ಪಿಡಬ್ಲ್ಯೂಡಿ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಕೂಡಲೇ ಯೋಜನೆಯಂತೆ ರಸ್ತೆಅಗಲಿಕರಣ ಮಾಡಬೇಕೆಂಬ ಒತ್ತಾಯ ನಾಗರೀಕರದ್ದಾಗಿದೆ. ಇನ್ನು ಪ್ರವಾಸಿತಾಣ ಹಾಗೂ ಕಿಷ್ಕಿಂದೆಯಂತಹ ರಸ್ತೆಗಳಲ್ಲಿ ನಿರ್ಮಾಣವಾದ ಡಿವೈಡರ್‌ಗಳಿಂದ ಅವಾಂತರ ನಿರ್ಮಾಣ ಆಗಿದ್ದು, ಅಲರ್ಟ್ ಆದ ಜಿಲ್ಲಾಡಳಿತ ರಸ್ತೆ ಅಗಲೀಕರಣಕ್ಕೆ ಯೋಚಿಸಿದ್ದಾರೆ. ಅಂತಿಮವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಹಾಗೂ ಶಾಸಕರ ಅನುಮತಿ ಪಡೆಯಲು ಅಧಿಕಾರಿಗಳು ಮುಂದಾಗಿರೋದು ಕೋಟೆನಾಡಿನ ಜನರಲ್ಲಿ ಸಂತಸ ತಂದಿದೆ. ಇದನ್ನೂ ಓದಿ: Christmas | ಮಕ್ಕಳಿಗೆ ಗಿಫ್ಟ್ ನೀಡುವ ಸಾಂತಾ ಕ್ಲಾಸ್ ಯಾರು? ಹಿನ್ನೆಲೆ ಏನು?