ಗಮನ ಬೇರೆಡೆ ಸೆಳೆದು ಕಳ್ಳತನ ಮಾಡೋ ಗ್ಯಾಂಗ್ – ಪೊಲೀಸರ ವಶಕ್ಕೆ

Public TV
1 Min Read
Nelamangala Police 2

ಬೆಂಗಳೂರು/ನೆಲಮಂಗಲ: ಜನರ ಗಮನವನ್ನು ಬೇರೆಡೆ ಸೆಳೆದು ಲಕ್ಷಾಂತರ ರೂಪಾಯಿ ಹಣವನ್ನು ಕ್ಷಣಾರ್ಧದಲ್ಲಿ ತಮ್ಮ ಚಾಣಾಕ್ಷತೆಯಿಂದ ದೋಚುವ ಕುಖ್ಯಾತ ಓಜಿಕುಪ್ಪಂ ಗ್ಯಾಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.

Nelamangala Police 1

ಬೆಂಗಳೂರು ಹೊರವಲಯ ನೆಲಮಂಗಲ ಗ್ರಾಮಾಂತರ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮಿಂಚಿನ ಕಾರ್ಯಾಚರಣೆ ನಡೆಸಿ, ನಾಲ್ವರು ಓಜಿಕುಪ್ಪಂನ ಕುಖ್ಯಾತ ಕಳ್ಳರನ್ನು ಬಂಧಿಸಿದ್ದಾರೆ ಮತ್ತು ಆರೋಪಿಗಳಿಂದ ಬರೋಬ್ಬರಿ 15,20,000 ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಈ ಓಜಿಕುಪ್ಪಂ ಗ್ಯಾಂಗ್‍ನವರಿಗೆ ಮಧ್ಯಮ ವರ್ಗ ಹಾಗೂ ಸಾಮಾನ್ಯ ಜನರೇ ಇವರ ಟಾರ್ಗೆಟ್ ಆಗಿರುತ್ತಾರೆ. ಸಬ್ ರಿಜಿಸ್ಟರ್ ಕಚೇರಿ, ಬ್ಯಾಂಕ್, ಜ್ಯೂವೆಲರಿ ಅಂಗಡಿ ಹಾಗೂ ಇನ್ನಿತರ ಕಡೆ ಜನರನ್ನು ಗಮನಿಸುವ ಗ್ಯಾಂಗ್, ಬೇರೆ ಬೇರೆ ರೀತಿಯಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಿ ಜನರನ್ನು ನಂಬಿಸುವ ಕೆಲಸ ಮಾಡುತ್ತಾರೆ. ನಂತರ ಹಣವನ್ನು ದೋಚಿ ಯಾರಿಗೂ ಅನುಮಾನ ಬಾರದಂತೆ ಸ್ಥಳದಿಂದ ಎಸ್ಕೇಪ್ ಆಗುತ್ತಾರೆ. ಇದನ್ನೂ ಓದಿ:ಕಾಬೂಲ್‍ನಲ್ಲಿ ಸುರಕ್ಷಿತವಾಗಿದ್ದೇನೆ: ಮಂಗಳೂರು ಮೂಲದ ಸಿಸ್ಟರ್ ಥೆರೆಸಾ ಕ್ರಾಸ್ತಾ ಸಂದೇಶ

Nelamangala Police 4

ಈ ಕುಖ್ಯಾತ ಓಜಿಕುಪ್ಪಂ ಗ್ಯಾಂಗ್ ಬಂಧಿಸಲು ನೆಲಮಂಗಲ ಗ್ರಾಮಾಂತರ ಪೊಲೀಸರು ನಡೆಸಿದ ಕಾರ್ಯಾಚರಣೆ ಕುರಿತು ಬೆಂಗಳೂರು ಗ್ರಾಮಾಂತರ ಎಸ್ಪಿ ಕೋನವಂಶಿ ಕೃಷ್ಣ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಾರ್ಯಚರಣೆಯಲ್ಲಿ ಭಾಗಿಯಾದ ಸಿಬ್ಬಂದಿಯನ್ನು ಪ್ರಶಂಸಿಸಿದ್ದಾರೆ. ಈ ವೇಳೆ ಗ್ರಾಮಾಂತರ ಎಎಸ್ಪಿ ಲಕ್ಷ್ಮಿ ಗಣೇಶ್, ನೆಲಮಂಗಲ ಉಪವಿಭಾಗ ಡಿವೈಎಸ್ ಪಿ.ಜಗದೀಶ್, ಸಿಪಿಐ ಹರೀಶ್, ಎ.ವಿ.ಕುಮಾರ್, ಅರುಣ್ ಕುಮಾರ್ ಸಾಲಂಕಿ, ಮಂಜುನಾಥ್ ಹಾಗೂ ಪಿಎಸ್ ವಸಂತ್ ಕುಮಾರ್ ಉಪಸ್ಥಿತರಿದ್ದರು. ಇದನ್ನೂ ಓದಿ:ಮುಂದೊಂದು, ಹಿಂದೊಂದು ನಂಬರ್ – ನಕಲಿ ಪೊಲೀಸ್ ವ್ಯಾನ್ ಕಂಡು ತಬ್ಬಿಬ್ಬಾದ ಜನ

Share This Article
Leave a Comment

Leave a Reply

Your email address will not be published. Required fields are marked *