ತುಮಕೂರು: ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಎದ್ದಿದೆ. ಜಮೀರ್ ಬಳಿಕ ಈಗ ಸಿದ್ದು ಆಪ್ತ ಬೈರತಿ ಸುರೇಶ್ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಹೇಳಿದ್ದಾರೆ.
ನಮ್ಮ ಜನರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅವಶ್ಯಕತೆ ಇದೆ. ಮುಂದಿನ ಚುನಾವಣೆಯಲ್ಲಿ ಅವರೇ ಸಿಎಂ ಆಗಬೇಕು ಎಂದು ಬೆಂಗಳೂರಿನ ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಶಾಸಕ ಬೈರತಿ ಸುರೇಶ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆ ಪ್ರವೇಶಿಸುವಂತಿಲ್ಲ – ವೈರಲ್ ಆಯ್ತು ಬ್ಯಾನರ್
Advertisement
ಜಮೀರ್ ಅಹಮದ್ ಖಾನ್ ಅವರು ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಕೇಳಿದ ಬೆನ್ನಲ್ಲೆ ತುಮಕೂರು ಕುರುಬ ಸಮಾವೇಶದಲ್ಲಿ ಬೈರತಿ ಸುರೇಶ್ ಸಹ ಅದೇ ರೀತಿ ಪತಿಕ್ರಿಯೆ ಕೊಟ್ಟಿದ್ದಾರೆ. ವೇದಿಕೆಯನ್ನು ಉದ್ದೇಶಿ ಮಾತನಾಡಿದ ಅವರು, ಕುರುಬ ಸಮಾವೇಶದಲ್ಲಿ ಭಾಗವಹಿಸಲು ಬಂದ ಎಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು ಎಂದು ಮಾತು ಪ್ರಾರಂಭಿಸಿದರು.
Advertisement
Advertisement
ವೇದಿಕೆ ಮೇಲೆ ಕುಳಿತಿರುವ ಕೇಂದ್ರ ಬಿಂದು, ರಾಜ್ಯದ ಧೀಮಂತ ನಾಯಕ, ದೇಶ ಕಟ್ಟಿದ ಅಪ್ರತಿಮ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಜೊತೆಗೆ ಇದ್ದಾರೆ. ಇಂದು ಕುರುಬ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿರುವುದು ಬಹಳ ಸಂತೋಷವಾಗುತ್ತಿದೆ. ಈ ಮೂಲಕ ಸಿದ್ದರಾಮಯ್ಯ ಅವರಿಗೆ ಕೈ ಹಿಡಿದು ಬಲ ಕೊಂಡುತ್ತಿದ್ದಿರಾ ಎಂಬುದಕ್ಕೆ ದೊಡ್ಡ ಉದಾಹರಣೆಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
Advertisement
ಇದೇ ರೀತಿ ಇಡೀ ರಾಜ್ಯದಲ್ಲಿ ಮುಂದುವರೆಯಬೇಕು ಎಂಬುದು ನಮ್ಮ ಆಸೆ. 2023ರಲ್ಲಿ ಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎಂಬುದು ಅವರ ಮನಸ್ಸಿನಲ್ಲಿ ಇಲ್ಲ. ಆದರೆ ನಿಮ್ಮ ಮನಸ್ಸಿನಲ್ಲಿದೆ. ಈ ನಾಡಿದ ಜನತೆಯ ಮನಸ್ಸಿನಲ್ಲಿದೆ ಎಂದು ಒತ್ತಿ ಹೇಳಿದರು.
ಮತ್ತೆ ಸಿದ್ದರಾಮಯ್ಯ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದರೆ ನೀವೆಲ್ಲ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಬೆಂಬಲಕೊಡಬೇಕು. ಎಲ್ಲರೂ ನಮ್ಮವರೆ ಆದ್ರೆ ಯಾರು ಸಿದ್ದರಾಮಯ್ಯ ಅವರ ಜೊತೆಗೆ ಇರುತ್ತಾರೆ, ರಾಜ್ಯ ಬೆಳೆಯಬೇಕು ಎಂದು ಇಷ್ಟಪಡುತ್ತೀರಾ ಅವರು ಸಿದ್ದರಾಮಯ್ಯ ಅವರು ಸಿಎಂ ಆಗಲು ಬೆಂಬಲ ಕೊಡಿ ಎಂದು ಕೇಳಿಕೊಂಡರು. ಇದನ್ನೂ ಓದಿ: ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಚುನಾವಣೆ ಸಮಿತಿ ಇದೆಯೇ? – ಡಿಕೆಶಿಗೆ ಪತ್ರ ಬರೆದ ಸ್ಥಾನ ವಂಚಿತರು
ಕ್ಷೀರ ಭಾಗ್ಯ, ಅಕ್ಕಿ ಭಾಗ್ಯ, ವಿದ್ಯಾರ್ಥಿ ವೇತನ, ರೈತರ ಸಾಲ ಮನ್ನಾ ಇದೇ ರೀತಿ ರಾಜ್ಯದ ಹಲವು ಸಮಸ್ಯೆಗಳಿಗೆ ಪರಿಹಾರ ಕೊಟ್ಟ ಏಕೈಕ ಮುಖ್ಯಮಂತ್ರಿ ನಮ್ಮ ಸಿದ್ದರಾಮಯ್ಯ ಎಂದು ಹೊಗಳಿದರು.