ಮಂಗಳೂರು: ಜನರಿಗೆ, ಶಾಸಕರಿಗೆ ಎಲ್ಲರಿಗೂ ನಾನು ಸಿಎಂ ಆಗಬೇಕು ಅಂತ ಇದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಏನು ಹೇಳುತ್ತೋ ಅದೇ ಆಗೋದು, ಆಗುತ್ತೆ. ಅವರವರ ಅಭಿಮಾನಿಗಳು ಏನ್ ಆಸೆ ಪಡ್ತಾರೋ ಅದರಲ್ಲಿ ತಪ್ಪಿಲ್ಲ ಎಂದು ತಿಳಿಸಿದರು. ಬಜೆಟ್ ಬಳಿಕ ಸಿಎಂ ಆಗ್ತೀರಾ ಅನ್ನೋ ಪ್ರಶ್ನೆಗೆ ಟೈಮ್ ವಿಲ್ ಆನ್ಸರ್ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿರೋದು ರಾಜ್ಯ ಸರ್ಕಾರ: ತೇಜಸ್ವಿ ಸೂರ್ಯ
ಬೆಂಗಳೂರು ಮೆಟ್ರೋ ದರ ಪರಿಷ್ಕರಣೆ ವಿಚಾರವಾಗಿ ಮಾತನಾಡಿ, ಈ ವಿಚಾರದಲ್ಲಿ ನಮ್ಮನ್ನು ಯಾರೂ ಸಂಪರ್ಕ ಮಾಡಿಲ್ಲ. ಮೆಟ್ರೋ ಚೇರ್‌ಮನ್ ಆಗಿ ಕೇಂದ್ರ ಸರ್ಕಾರದ ಚೇರ್ ಇದ್ದಾರೆ. ಇವತ್ತು ಅಥವಾ ನಾಳೆ ಅವರ ಜೊತೆ ಮಾತನಾಡುತ್ತೇನೆ. ಜನರಿಗೆ ತೊಂದರೆ ಕೊಡೋಕೆ ಬಿಡಲ್ಲ. ಮೆಟ್ರೋ ದರ ಪರಿಷ್ಕರಣೆ ಬಗ್ಗೆ ಮಾತನಾಡುತ್ತೇನೆ ಎಂದರು.

