ರಾಯಚೂರು: ಸುಲಭವಾಗಿ ಹೆಚ್ಚು ಸಂಬಳ ಸಿಗುವ ಕೆಲಸದ ಆಸೆಗೆ ನೆಟ್ವರ್ಕ್ ಮಾರ್ಕೆಟಿಂಗ್ (Network Marketing) ವಂಚನೆ (Fraud) ಜಾಲಕ್ಕೆ ಸಿಲುಕಿ ರಾಯಚೂರು, ಯಾದಗಿರಿ, ಕಲಬುರಗಿಯ ಸಾವಿರಾರು ಜನ ತಮ್ಮ ಹಣ ಕಳೆದುಕೊಂಡಿದ್ದಾರೆ.
ರಾಯಚೂರಿನ ಮಾಡರ್ನ್ ಸೇಲ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿ ಸುಮಾರು 1,800ಕ್ಕೂ ಹೆಚ್ಚು ಜನರಿಗೆ ಪಂಗನಾಮ ಹಾಕಿದೆ. ಪ್ರತಿಯೊಬ್ಬರಿಂದ 38,000 ರೂ. ಹಣ ಕಟ್ಟಿಸಿಕೊಂಡಿದ್ದು, 6 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ್ದಾರೆ. ನೆಟ್ವರ್ಕ್ ಮಾರ್ಕೆಟಿಂಗ್ ಆಗಿರುವುದರಿಂದ ಮೊದಲಿಗೆ ಸದಸ್ಯರಾಗಿ ಬೇರೆಯವರನ್ನು ಕಂಪನಿಗೆ ಸೇರಿಸಿದವರು ತಮ್ಮ ಹಣವನ್ನೂ ಕಳೆದುಕೊಂಡು ಬೇರೆಯವರನ್ನೂ ಸೇರಿಸಿ ಈಗ ಒದ್ದಾಡುತ್ತಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಯುವತಿಯೊಂದಿಗೆ ಆಟೋದಲ್ಲಿ ತೆರಳಿದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
Advertisement
Advertisement
ಕಂಪನಿ ನಡೆಸುತ್ತಿದ್ದ ಆರೋಪಿಗಳಾದ ಯಾದಗಿರಿಯ ಜಾವೇದ್, ಕಲಬುರಗಿಯ ಸಂತೋಷ್ ಹಾಗೂ ರಾಯಚೂರಿನ ಸೋಮನಾಥ್ ವಿರುದ್ಧ ಈಗಾಗಲೇ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾಮೀನಿನ ಮೇಲೆ ಹೊರಗೆ ಓಡಾಡುತ್ತಿರುವ ಆರೋಪಿಗಳು ಕೋರ್ಟ್ ಮೂಲಕ ಹಣ ಕೊಡುತ್ತೇವೆ ಎನ್ನುತ್ತಿದ್ದಾರೆ. ಹೀಗಾಗಿ ಮೋಸ ಹೋದ ಸಾವಿರಾರು ಜನ ನ್ಯಾಯಕ್ಕಾಗಿ ಹೋರಾಟಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಕುಕ್ಕರ್‌ನಿಂದ ಹೊಡೆದು ಪ್ರಿಯತಮೆಯ ಕೊಲೆಗೈದ ಪ್ರಿಯಕರ
Advertisement
Web Stories