ಚಿಕ್ಕಬಳ್ಳಾಪುರ: ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡುವ ವೇಳೆ ಹೆಜ್ಜೇನು ದಾಳಿ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.
ಮೃತದೇಹವನ್ನ ಕುಟುಂಬಸ್ಥರು ಮೆರವಣಿಗೆ ಮೂಲಕ ಸ್ಮಶಾನದಲ್ಲಿ ತೆಗೆದುಕೊಂಡು ಹೋಗಿ ಶವ ಸಂಸ್ಕಾರದ ಸಿದ್ಧತೆಯನ್ನ ಮಾಡಿಕೊಳ್ತಿದ್ರು. ಈ ವೇಳೆ ಸ್ಮಶಾನದ ಮರದಲ್ಲಿದ್ದ ಹೆಜ್ಜೆನು ದಿಢೀರ್ ದಾಳಿ ನಡೆಸಿದೆ. ಪರಿಣಾಮ ಮೃತದೇಹವನ್ನ ಸ್ಮಶಾನದಲ್ಲೇ ಬಿಟ್ಟು ದಿಕ್ಕಾಪಾಲಾಗಿ ಜನ ಓಡಿ ಹೋಗಿದ್ದಾರೆ. ಜೇನು ನೋಣಗಳಿಂದ ಕಚ್ಚಿಸಿಕೊಂಡಿದ್ದ ಸುಮಾರು 15 ಜನ ತಕ್ಷಣ ವಿಜಯಪುರ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನ ಪಡೆದಿದ್ದಾರೆ.
Advertisement
Advertisement
ಇದೇ ವೇಳೆ ಸ್ಮಶಾನದಲ್ಲಿರುವ ಮರಗಳಲ್ಲಿ ಹೆಜ್ಜೆನುಗಳನ್ನ ತೆರವು ಮಾಡಿಲ್ಲ ಅಂತಾ ಪುರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧಿಕಾರಿಗಳು ಸ್ಮಶಾನದಲ್ಲಿರುವ ಹೆಜ್ಜೇನು ತೆರವು ಮಾಡಲು ಮುಂದಾಗಿದ್ದು, ಮೃತನ ಸಂಬಂಧಿಕರು ಅಂತ್ಯ ಸಂಸ್ಕಾರ ಮಾಡಲು ಬಿಟ್ಟು ಹೋಗಿದ್ದ ಮೃತದೇಹವನ್ನ ನಾಲ್ಕು ಜನ ಆಗಮಿಸಿ ಕೊನೆಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.