ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮತ್ತೆ ತನ್ನ ಹಳೆಯ ಚಾಳಿ ಮುಂದುವರಿಸಿದೆ. ಪ್ರಧಾನಿ ಮೋದಿ (Narendra Modi) ಬರ್ತಾರೆ ಅಂತ ರಸ್ತೆಗಳನ್ನು ಕೆರೆದು ಹಾಳು ಮಾಡಿರುವ ಬಿಬಿಎಂಪಿ (BBMP) ಎಂಜಿನಿಯರ್ ಗಳು, ಹೊಸದಾಗಿ ಟಾರ್ ಹಾಕ್ತೀವಿ ಅಂತ ಬೊಗಳೆ ಬಿಟ್ಟಿದ್ದರು.
Advertisement
ಹೌದು. ಮೋದಿ ಬರುತ್ತಾರೆ ಅಂತ ಬಿಬಿಎಂಪಿ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ರಸ್ತೆಗೆ ತರಾತುರಿಯಲ್ಲಿ ಟಾರ್ ಹಾಕೋಕೆ ರಸ್ತೆ ಕೆತ್ತಿತ್ತು. ಮೋದಿ ಆಗಮನಕ್ಕೂ ಮೂರು ದಿನದ ಹಿಂದೆ ರಸ್ತೆಯನ್ನು ಕೆತ್ತಿ ಹಾಳು ಮಾಡಿದ್ದರು. ಆದರೆ ರಾತ್ರೋ ರಾತ್ರಿ ಮೋದಿ ಬಂದು ಹೋಗೋ ರಸ್ತೆ ಮಾರ್ಗ ಬದಲಾವಣೆ ಹಿನ್ನೆಲೆಯಲ್ಲಿ ಹಾಳು ಮಾಡಿದ ರಸ್ತೆಯನ್ನು ಸರಿಪಡಿಸದೆ ಬಿಬಿಎಂಪಿ ನಿರ್ಲಕ್ಷ್ಯ ತೋರಿರುವುದು ಇದೀಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
Advertisement
Advertisement
ಗುಬ್ಬಿ ತೋಟದಪ್ಪ ರಸ್ತೆಯ ರೈಲ್ವೇ ಇಲಾಖೆಯ ಮುಂಭಾಗದ ಗೇಟ್ ನಲ್ಲಿ ಮೋದಿ ಹೋಗಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಪಿಎಂ ಈ ರೋಡ್ ನಲ್ಲಿ ಬರಲ್ಲ ಅಂತಾ ಬಿಬಿಎಂಪಿ ಸುಮ್ಮನಾಗಿದೆ. ಹೀಗಾಗಿ ಶಾಂತಲಾ ಸಿಲ್ಕ್ ಹೌಸ್ ನಿಂದ ಸಂಗೋಳಿ ರಾಯಣ್ಣ ಪ್ರತಿಮೆವರೆಗಿನ ರಸ್ತೆ ಹಾಳಾಗಿಯೇ ಇದೆ. ಇದನ್ನೂ ಓದಿ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಅರೆಬರೆ ವಸ್ತ್ರ ಧರಿಸಿದವರ ಸಂಚಾರಕ್ಕೆ ನಿಷೇಧ!
Advertisement
ಇತ್ತ ರಾತ್ರೋ ರಾತ್ರಿ ಡಾಂಬರ್ ಹಾಕದೇ ರಸ್ತೆಯನ್ನೇ ಹಾಳು ಮಾಡಿದ ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಕಳೆದ ಮೂರು ವರ್ಷದಿಂದ ಟಾರ್ ಕಾಣದ ರಸ್ತೆಗೆ ಮೋದಿ ಬಂದಾಗ್ಲಾದ್ರೂ ಟಾರ್ ಹಾಕ್ತಾರೆ ಅಂತ ಜನ ಅಂದುಕೊಂಡಿದ್ದರು. ಈ ಬಗ್ಗೆ ಜನ ಎಷ್ಟೇ ದೂರು ಕೊಟ್ರು ಬಿಬಿಎಂಪಿ ಮಾತ್ರ ರಸ್ತೆ ಸರಿಪಡಿಸುವ ಕೆಲಸ ಮಾಡಿರಲಿಲ್ಲ. ಮೋದಿ ಬರ್ತಿದ್ದಾರೆ ಅಂತಾ ಎದ್ನೋ ಬಿದ್ನೋ ಅಂತಾ ಬಿಬಿಎಂಪಿ ಅಧಿಕಾರಿಗಳು ರಸ್ತೆ ಮಾಡಲು ಶುರುಮಾಡಿದ್ರು. ಆದ್ರೆ ಕೊನೆಯ ಕ್ಷಣದಲ್ಲಿ ಪಿಎಂ ಈ ರೋಡ್ ನಲ್ಲಿ ಬರಲ್ಲ ಅಂತ ರಸ್ತೆ ಹಾಳು ಮಾಡಿಬಿಟ್ಟರು. ಸದ್ಯ ರಸ್ತೆಯಲ್ಲಿ ಸಂಚರಿಸಲು ದ್ವಿಚಕ್ರ ವಾಹನ ಸವಾರರು ಪರದಾಡುತ್ತಿದ್ದಾರೆ.
ಎರಡು ವರ್ಷಗಳಿಂದ ಬಿಬಿಎಂಪಿ ಸತ್ತೋಗಿದೆ. ಸಾಮಾನ್ಯ ಜನ ಬೇಕಿಲ್ಲ, ವಿಐಪಿಗಳು ಬಂದಾಗ ಮಾತ್ರ ನಾಟಕ ಮಾಡ್ತಾರೆ. ಗುಂಡಿಗಳಿತ್ತು, ಅದನ್ನ ಕೆರೆದು ಹೋಗಿದ್ದಾರೆ. ಮೋದಿ ಬರಲ್ಲ ಅಂದ ಕೂಡಲೇ ಹೇಗಾದ್ರೂ ಸಾಯ್ರಿ ಅಂತ ಬಿಟ್ಟೋಗಿದ್ದಾರೆ. ದ್ವಿಚಕ್ರ ವಾಹನ ಸವಾರರು ಎಷ್ಟೋ ಜನ ಬೀಳುತ್ತಿದ್ದಾರೆ. ಮೋದಿ ಬರ್ತಾರೆ ಅಂದಾಗ ಬಿಬಿಎಂಪಿಯವರು ಬಂದ್ರು. ಆಮೇಲೆ ಒಬ್ರೂ ಕಣ್ಣಿಗೆ ಕಾಣಲ್ಲ. ಪಿಎಂ ಬರ್ತಾರೆ ಅಂತ ರಾತ್ರೋ ರಾತ್ರಿ ರಸ್ತೆ ಕೆರೆದು ಹೋಗಿದ್ದಾರೆ. ಮೋದಿ ಬರುವ ರೋಡ್ ಮಾತ್ರ ಸರಿ ಮಾಡ್ತಾರೆ ಎಂದು ಬಿಬಿಎಂಪಿ ವಿರುದ್ಧ ಆಟೋ ಚಾಲಕರು ಆಕ್ರೋಶ ಹೊರಹಾಕಿದ್ದಾರೆ.