ಚಿತ್ರದುರ್ಗ: ಗ್ಯಾರಂಟಿ ಭಾಗ್ಯಗಳ (Guarantee Scheme) ಎಫೆಕ್ಟ್ ಲೋಕಸಭಾ ಚುನಾವಣೆ (Lok Sabha Election) ಮೇಲೆ ತಟ್ಟಲ್ಲ. ಬದಲಾಗಿ ಕಾಂಗ್ರೆಸ್ (Congress) ಶಾಸಕರು ಮತ ಕೇಳಲು ಹೋದರೆ ಜನ ಅವರಿಗೆ ತಟ್ಟುತ್ತಾರೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ (Govinda Karajola) ವ್ಯಂಗ್ಯವಾಡಿದರು.
ಚಿತ್ರದುರ್ಗದಲ್ಲಿ (Chitradurga) ಚುನಾವಣಾ ಪ್ರಚಾರದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಮೋಸದಾಟವಾಗಿದೆ. ದೇಶದ ಬಜೆಟ್‌ಗಿಂತ ದೊಡ್ಡ ಬಿಟ್ಟಿಭಾಗ್ಯಗಳನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಈ ಹಿಂದೆ ಚುನಾವಣೆಗೂ ಮುನ್ನ ಅಭಿವೃದ್ಧಿ ಕಾರ್ಯಗಳ ಭರವಸೆ ನೀಡಿದ್ದರು. ಆದರೆ ಈಗ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಶಾಸಕರು ಅವರ ಕ್ಷೇತ್ರದಲ್ಲಿ ಮತ ಕೇಳಲು ಹೋಗಲು ಹೆದರುತ್ತಿದ್ದಾರೆ. ಈ ಗ್ಯಾರಂಟಿ ಭಾಗ್ಯಗಳಿಂದ ಕಾಂಗ್ರೆಸ್ ಶಾಸಕರು ಮತ ಕೇಳಲು ಹೋದರೆ ಜನ ತಟ್ಟುತ್ತಾರೆ ಎಂದರು. ಇದನ್ನೂ ಓದಿ: ಅಧಿಕಾರಕ್ಕೆ ಬಂದರೆ ಮೊಬೈಲ್ ಡೇಟಾಗೆ 500 ರೂ. ಫ್ರೀ – ಅಖಿಲೇಶ್ ಯಾದವ್ ಘೋಷಣೆ
Advertisement
Advertisement
ರಸ್ತೆ, ಸೇತುವೆ, ಕೆರೆ-ಕಟ್ಟೆ ನಿರ್ಮಾಣಕ್ಕೆ 1 ರೂ. ಅನುದಾನ ತರಲಾಗಿಲ್ಲ. ಕಾಂಗ್ರೆಸ್‌ನ ಎಲ್ಲಾ ಮಂತ್ರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಒಂದೂ ಕೆಲಸ ಆಗುತ್ತಿಲ್ಲ ಎಂದು ಕೈ ಶಾಸಕರೇ ಹೇಳುತ್ತಿದ್ದಾರೆ. ಹಾಗೆಯೇ ಮಂತ್ರಿಗಳು ಏಜೆಂಟರು ಹೇಳಿದಂತೆ ಕೇಳುತ್ತಿದ್ದಾರೆಂದು ಕೈ ಶಾಸಕರೇ ಹೇಳುತ್ತಿದ್ದು, ಈ ವಿಶ್ವದಲ್ಲಿ ಅಧಿಕಾರಕ್ಕೆ ಬರುವ ಯಾವುದೇ ರಾಜಕೀಯ ಪಕ್ಷ ಘೋಷಿಸದ ಪ್ರಣಾಳಿಕೆಯನ್ನು ಈ ಬಾರಿ ಕಾಂಗ್ರೆಸ್ ಘೋಷಿಸಿದೆ. ನನ್ನ 73 ವರ್ಷದ ವಯಸ್ಸಲ್ಲಿ ಇಂತಹ ಬಿಟ್ಟಿ ಪ್ರಣಾಳಿಕೆ ನಾನು ಕಂಡಿಲ್ಲ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಮಂಗಳೂರಿನಲ್ಲಿ ರೋಡ್ ಶೋ, ಮೈಸೂರಿನಲ್ಲಿ ಸಮಾವೇಶ – ಮೋದಿ ಕಾರ್ಯಕ್ರಮದಲ್ಲಿ ಬದಲಾವಣೆ
Advertisement
Advertisement
ಈ ದೇಶದ ಬಜೆಟ್‌ಗಿಂತ ಹೆಚ್ಚಿನ ಮೊತ್ತದ ಪ್ರಣಾಳಿಕೆ ಘೋಷಿಸಿರುವ ಕಾಂಗ್ರೆಸ್ ಪ್ರಣಾಳಿಕೆಯು ಪಂಚಂತ್ರದ ಕಥೆ ರೂಪದಲ್ಲಿದೆ. ಸರ್ಕಾರದ ಖಜಾನೆ ಬಾಗಿಲು ತೆಗೆದು ಜನರಿಗೆ ಹಂಚುವುದಾಗಿ ವಂಚಿಸುವ ಮೋಸಗಾರರು ಈ ಕಾಂಗ್ರೆಸ್‌ನವರು ಎಂದು ಕೈ ನಾಯಕರ ವಿರುದ್ಧ ಕಾರಜೋಳ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೋದಿ ಫೋಟೋ ಬಳಕೆ – ಈಶ್ವರಪ್ಪ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು