ಮೈಸೂರು: ಜನರು ನನ್ನನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ನೋಡುವ ಅಭಿಲಾಷೆಯನ್ನು ಹೊಂದಿದ್ದಾರೆ, ಹೀಗಾಗಿ ನಾನು ಮತ್ತೊಮ್ಮೆ ಸಿಎಂ ಆಗುತ್ತೆನೆ ಎನ್ನುವ ಮೂಲಕ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಕೈ ಅಧಿಕಾರದ ಗದ್ದುಗೆಯನ್ನು ಹಿಡಿದೇ ಹಿಡಿಯುತ್ತದೆ. ಜನರು ನನ್ನನ್ನು ಮತ್ತೊಮ್ಮೆ ಸಿಎಂ ಆಗಬೇಕು ಎಂದು ಹೇಳುತ್ತಿದ್ದಾರೆ. ಹಾಗಾಗಿ ನಾನು ಮತ್ತೆ ಸಿಎಂ ಆಗುತ್ತೇನೆ. ಅದು ಜನರ ಇಚ್ಛೆ, ನನ್ನ ಆಸೆ ಇಲ್ಲ ಎನ್ನುವ ಮೂಲಕ ಶುಕ್ರವಾರ ಹೊಳೆನರಸೀಪುರದಲ್ಲಿ ನೀಡಿದ್ದ ಹೇಳಿಕೆಗೆ ಸ್ಪಷ್ಟನೆ ನೀಡಿದರು.
Advertisement
Advertisement
ನೆರೆ ಪರಿಹಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡಿದೆ. ಕೊಡಗು ಜಿಲ್ಲೆಗೆ ಶುಕ್ರವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‍ರವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರ ಘೋಷಿಸದೇ ಹೋದದ್ದು ಸರಿಯಲ್ಲ. ಅವರು ಕೇಂದ್ರದ ಪ್ರತಿನಿಧಿಯಾಗಿ ಬಂದಿದ್ದರು. ಬರುವ ಮೊದಲೇ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಪರಿಹಾರದ ಸಂಬಂಧ ಚರ್ಚಿಸಿ ಬರಬೇಕಾಗಿತ್ತು. ಅಲ್ಲದೇ ಸಂಸದ ಪ್ರತಾಪ ಸಿಂಹ ಕೇವಲ ಭಾಷಣ ಮಾಡಲು ಲಾಯಕ್ಕು, ಕೇಂದ್ರದ ಮೇಲೆ ಒತ್ತಡ ಹಾಕುವಲ್ಲಿ ವಿಫಲರಾಗಿದ್ದಾರೆಂದು ಕಿಡಿಕಾರಿದರು. ಇದನ್ನೂ ಓದಿ: ನಾನು ಮತ್ತೆ ಮುಖ್ಯಮಂತ್ರಿ ಆಗ್ತೀನಿ-ಸಿದ್ದರಾಮಯ್ಯ
Advertisement
Advertisement
ಪ್ರವಾಹದಿಂದ ತತ್ತರಿಸಿದ್ದ ಕೊಡಗು ಜಿಲ್ಲೆಗೆ ಸಾರ್ವಜನಿಕರಿಂದ ಭರಪೂರ ನೆರವು ಬಂದಿದೆ. ಎಲ್ಲಾ ಸಂಘ-ಸಂಸ್ಥೆಗಳ ಸ್ಪಂದನೆಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ. ಅಲ್ಲದೇ ನಾನು ಸೆಪ್ಟಂಬರ್ 3 ರಿಂದ ಲಂಡನ್ ಪ್ರವಾಸ ಕೈಗೊಂಡಿದ್ದೇನೆ. ನಾನು ಸಿಎಂ ಆಗಿದ್ದಾಗಿಂದಲೂ ನನ್ನ ಸ್ನೇಹಿತ ಯಾವಾಗಲೂ ಕರೆಯುತ್ತಿದ್ದ, ಆಗ ಬಿಡುವಿರಲಿಲ್ಲ. ಈಗ ಬಿಡುವಿರುವುದರಿಂದ ಹೋಗಿ ಬರುವ ನಿರ್ಧಾರ ಮಾಡಿದ್ದೇನೆ. ನನ್ನ ಜೊತೆಗೆ ಪುತ್ರ ಯತೀಂದ್ರ, ಸಚಿವರಾದ ಆರ್.ವಿ.ದೇಶಪಾಂಡೆ ಹಾಗೂ ಕೆ.ಜೆ.ಜಾರ್ಜ್ ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv